ಟ್ರಬಲ್ ಶೂಟರ್ ಡಿಕೆಶಿಗೆ ಜಾಮೀನು ಇಲ್ಲ, ಇನ್ನೂ ತಿಹಾರ್ ಜೈಲಿನಲ್ಲೇ ಇರಬೇಕು

|

Updated on: Sep 25, 2019 | 5:39 PM

ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಜಾಮೀನು ನೀಡಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಿರಾಕರಿಸಿದೆ. ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಜಡ್ಜ್ ಅಜಯ್ ಕುಮಾರ್ ಕುಹರ್ ವಜಾಗೊಳಿಸಿ, ಒಂದೇ ವಾಕ್ಯದ ಆದೇಶ ಓದಿ, ತೆರಳಿದ್ದಾರೆ. ಹೀಗಾಗಿ ಟ್ರಬಲ್ ಶೂಟರ್​ ಡಿ.ಕೆ.ಶಿವಕುಮಾರ್​ಗೆ ತಿಹಾರ್ ಜೈಲುವಾಸ ಮುಂದುವರಿದಿದೆ. ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಕಳೆದ 6 ದಿನಗಳಿಂದ ಡಿಕೆ ಶಿವಕುಮಾರ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಅ.1ಕ್ಕೆ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದೆ. ಪ್ರಕರಣದ ಹಿನ್ನೆಲೆ: ದೆಹಲಿಯಲ್ಲಿ ಡಿಕೆಶಿ ಮತ್ತು ಆಪ್ತರ […]

ಟ್ರಬಲ್ ಶೂಟರ್ ಡಿಕೆಶಿಗೆ ಜಾಮೀನು ಇಲ್ಲ, ಇನ್ನೂ ತಿಹಾರ್ ಜೈಲಿನಲ್ಲೇ ಇರಬೇಕು
Follow us on

ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಜಾಮೀನು ನೀಡಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಿರಾಕರಿಸಿದೆ. ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಜಡ್ಜ್ ಅಜಯ್ ಕುಮಾರ್ ಕುಹರ್ ವಜಾಗೊಳಿಸಿ, ಒಂದೇ ವಾಕ್ಯದ ಆದೇಶ ಓದಿ, ತೆರಳಿದ್ದಾರೆ. ಹೀಗಾಗಿ ಟ್ರಬಲ್ ಶೂಟರ್​ ಡಿ.ಕೆ.ಶಿವಕುಮಾರ್​ಗೆ ತಿಹಾರ್ ಜೈಲುವಾಸ ಮುಂದುವರಿದಿದೆ.

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಕಳೆದ 6 ದಿನಗಳಿಂದ ಡಿಕೆ ಶಿವಕುಮಾರ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಅ.1ಕ್ಕೆ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದೆ.

ಪ್ರಕರಣದ ಹಿನ್ನೆಲೆ:
ದೆಹಲಿಯಲ್ಲಿ ಡಿಕೆಶಿ ಮತ್ತು ಆಪ್ತರ ನಿವಾಸಗಳ ಮೇಲೆ ಐಟಿ ಅಧಿಕಾರಿಳು ದಾಳಿ ನಡೆಸಿದ್ದರು. ಈ ವೇಳೆ ದಾಖಲೆಯಿಲ್ಲದ 8.59 ಕೋಟಿ ನಗದು ಪತ್ತೆಯಾಗಿತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ECIR​ ದಾಖಲಿಸಿದ್ದರು.

ಆ.30ರಿಂದ ಡಿ.ಕೆ.ಶಿವಕುಮಾರ್ ಸತತ 4 ದಿನ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ರು. ಆದ್ರೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಡಿಕೆಶಿಯನ್ನು 10 ದಿನಗಳ ಕಾಲ ಇಡಿ ವಶಕ್ಕೆ ಪಡೆಯಿತು. ಅವಧಿ ಮುಗಿದ ಬಳಿಕ ಮತ್ತೆ 4 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಡಿಕೆಶಿಯನ್ನು ಇಡಿ ವಶಕ್ಕೆ ಪಡೆಯಿತು. ಈ ವೇಳೆ ಸೆ.12ರಂದು ಡಿಕೆಶಿ ಪುತ್ರಿ ಐಶ್ವರ್ಯಾಗೂ ಸಮನ್ಸ್​ ನೀಡಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದರು. ಬಳಿಕ ಸೆ.17ರಂದು ಡಿಕೆಶಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿ ಕೋರ್ಟ್​ ಆದೇಶಿಸಿತು.

Published On - 5:30 pm, Wed, 25 September 19