ಬಿಟ್ಟಿ ವಿದ್ಯುತ್ ‘ಉಚಿತವಾಗಿ‘ ಬಳಸಿಕೊಳ್ಳಲು ಜನರ ನಾನಾ ಲೆಕ್ಕಾಚಾರ: ಹೆಚ್ಚು ವಿದ್ಯುತ್ ಬಳಕೆ ಪಕ್ಕ, ಸರ್ಕಾರಕ್ಕೆ ಶುರುವಾಯ್ತು ವಿದ್ಯುತ್​ ಪೂರೈಕೆ ಟೆನ್ಷನ್!

|

Updated on: Jun 06, 2023 | 2:49 PM

demand for electricity increases: ಇವಿ ಬೈಕ್ ಗಳಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಇದು ಸರ್ಕಾರಕ್ಕೆ ತಲೆ ಬಿಸಿಯಾಗೋದು ಪಕ್ಕಾ. ಹೆಚ್ಚು ವಿದ್ಯುತ್ ಬಳಕೆಯಾಗೋದು ಪಕ್ಕ ಎನ್ನುವಂತಾಗಿದ್ದು ಸರ್ಕಾರಕ್ಕೆ ವಿದ್ಯುತ್​ ಪೂರೈಕೆ ಟೆನ್ಷನ್ ಶುರುವಾಗಿದೆ

ಬಿಟ್ಟಿ ವಿದ್ಯುತ್ ‘ಉಚಿತವಾಗಿ‘ ಬಳಸಿಕೊಳ್ಳಲು ಜನರ ನಾನಾ ಲೆಕ್ಕಾಚಾರ: ಹೆಚ್ಚು ವಿದ್ಯುತ್ ಬಳಕೆ ಪಕ್ಕ, ಸರ್ಕಾರಕ್ಕೆ ಶುರುವಾಯ್ತು ವಿದ್ಯುತ್​ ಪೂರೈಕೆ ಟೆನ್ಷನ್!
ವಿದ್ಯುತ್ ಯೋಜನೆ ‘ಉಚಿತವಾಗಿ‘ ಬಳಸಿಕೊಳ್ಳಲು ಜನರ ನಾನಾ ಲೆಕ್ಕಾಚಾರ
Follow us on

ಬೆಂಗಳೂರು: ಈ ಮಧ್ಯೆ ಫ್ರೀ ವಿದ್ಯುತ್ (Gruha Jyothi Scheme)​​ ಸದ್ಬಳಕೆಗಾಗಿ ರಾಜ್ಯಾದ್ಯಂತ ಜನರು ತಮ್ಮದೇ ಆದ ಸ್ಕೀಂಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಸದ್ಯಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಸ್ಕೀಂ ಹೊಸ ತಲೆ ಬಿಸಿ ತಂದಿದೆ. 200 ಯೂನಿಟ್ ಉಚಿತ್ ವಿದ್ಯುತ್ ಕಂಪ್ಲೀಟ್ ಲಾಭ ಪಡೆಯಲು ಬೆಂಗಳೂರು ಸಿಟಿ ಜನ ತಿಂಗಳ ಪೆಟ್ರೋಲ್ ಕಾಸು ಉಳಿಸುವ ನಯಾ ಪ್ಲಾನ್ ಹಾಕಿಕೊಂಡಿದ್ದಾರೆ. ಪೆಟ್ರೋಲ್ ದುಡ್ಡು ಸೇವ್ ಮಾಡಲು ಸಾರ್ವಜನಿಕರು ಹೊಸ ತಂತ್ರ ಹೂಡಿದ್ದು, 200 ಯೂನಿಟ್ ಉಚಿತ್ ಘೋಷಣೆ ಬೆನ್ನಲೆ ಇ.ವಿ. ಬೈಕ್ಸ್ ಗೆ ಸಖತ್ ಡಿಮ್ಯಾಂಡ್ ಇಟ್ಟಿದ್ದಾರೆ. ಸಿಟಿಯಲ್ಲಿ ಇವಿ ಬೈಕ್ ಖರೀದಿಗೆ ಜನ ಮುಂದಾಗಿದ್ದಾರೆ.

ಪ್ರತಿ ತಿಂಗಳಿಗೆ ಸಿಲಿಕಾನ್ ಸಿಟಿಯಲ್ಲಿ ಸಂಚಾರಕ್ಕೆ ಸಾಮಾನ್ಯವಾಗಿ 2000 ರಿಂದ 2500 ಸಾವಿರದವರೆಗೆ ಪೆಟ್ರೋಲ್ ಬೇಕು. ಈಗ ಸರ್ಕಾರ ಉಚಿತ 200 ಯೂನಿಟ್ ಬೆನ್ನಲ್ಲೇ ಇ.ವಿ. ಬೈಕ್ ಗಳ ಮೊರೆ ಹೋಗ್ತಿದ್ದಾರೆ. ಮನೆ ಕರೆಂಟ್ ಬಿಲ್ 600 ರಿಂದ 800 ರೂ ಒಳಗಡ ಬರುತ್ತೆ. ಉಳಿದ ಫ್ರೀ ಯೂನಿಟ್ ಯಾಕೆ ಬೀಡಬೇಕು. ಪೆಟ್ರೋಲ್ ಗೆ ಕಾಸು ಸುರಿಯುವ ಬದಲು ಇ.ವಿ. ಬೈಕ್ (EV Bike) ಖರೀದಿಸಿದ್ರೆ ಎಲ್ಲಾ ಸಮ ಸಮ ಆಗುತ್ತದೆ. ಇದರಿಂದ 2,500 ರಿಂದ 3,000 ರೂಪಾಯಿ ವರೆಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು ಉಳಿತಾಯ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ಜನ.

Also Read: ರಾಜ್ಯಾದ್ಯಂತ ಎಲ್ಲ ಬಾಡಿಗೆದಾರರಿಗೂ ಗೃಹ ಬಳಕೆ ವಿದ್ಯುತ್​ ಉಚಿತ -ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಸ್ಪಷ್ಟನೆ

ಎಲೆಕ್ಟ್ರಿಕ್ ಬೈಕ್ ಗೆ ಒನ್ ಟೈಮ್ ಹೂಡಿಕೆ ಮಾಡಿಬಿಟ್ಟರೆ ಸಾಕು ಎಂದು ಜನ ಲೆಕ್ಕಾಚಾರ ಹಾಕಿದ್ದೇ ತಡ, ಸರ್ಕಾರದ ಫ್ರೀ ಕರೆಂಟ್ ಘೋಷಣೆಯಿಂದ ಇವಿ ಬೈಕ್ ಬುಕ್ಕಿಂಗ್ ಸೇಲಿಂಗ್ ಭರ್ಜರಿ ಡಿಮ್ಯಾಂಡ್ ಬಂದಿದೆ. ನಿತ್ಯ ನೂರಾರು ಬುಕ್ಕಿಂಗ್ ಆಗ್ತಿದ್ದು, ಇವಿ ಬೈಕ್ ಗಳಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಆದ್ರೆ ಸರ್ಕಾರಕ್ಕೆ ಇದು ದೊಡ್ಡ ತಲೆ ಬಿಸಿಯಾಗೋದು ಪಕ್ಕಾ ಆಗಿದೆ. ಹೆಚ್ಚು ವಿದ್ಯುತ್ ಬಳಕೆಯಾಗೋದು ಪಕ್ಕ ಎನ್ನುವಂತಾಗಿದ್ದು ಸರ್ಕಾರಕ್ಕೆ ವಿದ್ಯುತ್​ ಪೂರೈಕೆ ಟೆನ್ಷನ್ ಶುರುವಾಗಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:19 pm, Tue, 6 June 23