ಬೆಂಗಳೂರು, ಜುಲೈ 17: ಕರ್ನಾಟಕದಲ್ಲಿ ಡೆಂಗ್ಯೂ (Dengue fever) ಲಗಾಮಿಲ್ಲದೆ ಓಡುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಾಗೂ ಸಾವು ಹಿನ್ನೆಲೆ ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಕಾಯ್ದಿರಿಸಲು ಆರೋಗ್ಯ ಇಲಾಖೆ (Health Department) ಸೂಚನೆ ನೀಡಿದೆ. ಡೆಂಗ್ಯೂ ಕೇಸ್ಗಳ ಚಿಕಿತ್ಸೆಗೆಂದೇ ಬೆಡ್ ರಿಸರ್ವ್ ಮಾಡಲು ಆದೇಶಿಸಲಾಗಿದೆ.
ಇನ್ನು ರಾಜ್ಯದಲ್ಲಿ ಡೆಂಗ್ಯೂ ಕೇಸ್ಗಳು ದಿನೇದಿನೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 524 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರಲ್ಲಿ ಒಂದೇ ದಿನಕ್ಕೆ 270 ಕೇಸ್ಗಳು ದಾಖಲಾಗಿದ್ದು, ಆ ಮೂಲಕ ಕರ್ನಾಟಕದಲ್ಲಿ ಡೆಂಗ್ಯೂ ಕೇಸ್ಗಳ ಸಂಖ್ಯೆ 10973ಕ್ಕೆ ಏರಿಕೆ ಆಗಿದೆ.
ಇದನ್ನೂ ಓದಿ: Chikungunya: ಬೆಂಗಳೂರು: ಡೆಂಗ್ಯೂ ಜತೆಗೆ ಚಿಕುನ್ ಗುನ್ಯಾ ಪ್ರಕರಣಗಳೂ ಏರಿಕೆ
ಜನವರಿಯಿಂದ ಬರೋಬ್ಬರಿ 10 ಸಾವಿರದ 449ಕೇಸ್ಗಳು ದೃಢಪಟ್ಟಿವೆ. ನಿನ್ನೆ 487 ಮಂದಿ ಡೆಂಗ್ಯೂಗೆ ತುತ್ತಾಗಿದ್ದರು. ಈ ಪೈಕಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಒಂದುಕಡೆ ಡೆಂಗ್ಯೂ ಜನರು ಜೀವ ಹಿಂಡುತ್ತಿದ್ದರೆ, ಮತ್ತೊಂದು ಕಡೆ ಚಿಕೂನ್ ಗುನ್ಯಾ ಹಾವಳಿ ಶುರುವಾಗಿದೆ. ರಾಜ್ಯದಲ್ಲಿ 1113 ಜನರಿಗೆ ಚಿಕೂನ್ ಗುನ್ಯಾ ಭಾದಿಸಿದರೆ, ಬೆಂಗಳೂರಿನಲ್ಲಿ 176 ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳಲ್ಲಿ 52 ಜನರಿಗೆ ಚಿಕೂನ್ ಗುನ್ಯಾ ತಗುಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಕೇಸ್ಗಳು ಹೆಚ್ಚಳ: ಒಂದೇ ದಿನದಲ್ಲಿ 424 ಪ್ರಕರಣ ದಾಖಲು
ಸದ್ಯ ಶರವೇಗದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ, ಚಿಕೂನ್ ಗುನ್ಯಾ ಪ್ರಕರಣಗಳು ಆತಂಕ ಮೂಡಿಸಿವೆ. ಮಳೆಗಾಲ ಮುಗಿಯೋವರೆಗೂ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಜನರಿಗೆ ಸೂಚಿನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.