ಟಿವಿ9 ವರದಿ ಪ್ರಸಾರ ಬಳಿಕ ಎಚ್ಚೆತ್ತ ಉನ್ನತ ಶಿಕ್ಷಣ ಇಲಾಖೆ; ಹೆಚ್ಚು ಕಾಲೇಜುಗಳಲ್ಲಿ ಲಸಿಕಾ ಅಭಿಯಾನಕ್ಕೆ ತೀರ್ಮಾನ

| Updated By: sandhya thejappa

Updated on: Jul 01, 2021 | 9:12 AM

ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಲಸಿಕಾ ಅಭಿಯಾನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಲಸಿಕೆ ಕೊರತೆ ಮತ್ತು ಲಸಿಕಾಕರಣ ವ್ಯವಸ್ಥೆ ಬಗ್ಗೆ ಟಿವಿ9ನಲ್ಲಿ ನಿನ್ನೆ (ಜೂನ್ 30) ವರದಿ ಪ್ರಸಾರವಾಗಿತ್ತು.

ಟಿವಿ9 ವರದಿ ಪ್ರಸಾರ ಬಳಿಕ ಎಚ್ಚೆತ್ತ ಉನ್ನತ ಶಿಕ್ಷಣ ಇಲಾಖೆ; ಹೆಚ್ಚು ಕಾಲೇಜುಗಳಲ್ಲಿ ಲಸಿಕಾ ಅಭಿಯಾನಕ್ಕೆ ತೀರ್ಮಾನ
ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ರಾಜ್ಯದ ಹೆಚ್ಚು ಕಾಲೇಜುಗಳಲ್ಲಿ ಕೊವಿಡ್ ಲಸಿಕಾ ಅಭಿಯಾನ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಲಸಿಕಾ ಅಭಿಯಾನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಲಸಿಕೆ ಕೊರತೆ ಮತ್ತು ಲಸಿಕಾಕರಣ ವ್ಯವಸ್ಥೆ ಬಗ್ಗೆ ಟಿವಿ9ನಲ್ಲಿ ನಿನ್ನೆ (ಜೂನ್ 30) ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾದ ಬಳಿಕ ಉನ್ನತ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ.

ಜುಲೈ 3ನೇ ವಾರದಲ್ಲಿ ಕಾಲೇಜುಗಳನ್ನು ತೆರೆಯುವ ಸಾಧ್ಯತೆಯಿದೆ. ಹೀಗಾಗಿ ಬೇಗ ಲಸಿಕಾ ಅಭಿಯಾನ ಪೂರ್ಣಗೊಳಿಸಲು ಚಿಂತನೆ ನಡೆಸಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಕಾಲೇಜುಗಳ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 3 ಲಕ್ಷಕ್ಕೂ ಹೆಚ್ಚು ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಒಟ್ಟು 18 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲು ಉನ್ನತ ಶಿಕ್ಷಣ ನಿರ್ಧರಿಸಿದೆ.

ಎಲ್ಲೆಲ್ಲಿ ಲಸಿಕೆ ಅಭಿಯಾನ ನಡೆಯುತ್ತೆ?

ರಾಜ್ಯದ 24 ಸರ್ಕಾರಿ ವಿಶ್ವವಿದ್ಯಾಲಯ, 20 ಖಾಸಗಿ ವಿಶ್ವವಿದ್ಯಾಲಯ, 415 ಸರ್ಕಾರಿ ಪದವಿ ಕಾಲೇಜುಗಳು 392 ಅನುದಾನಿತ ಕಾಲೇಜುಗಳು ಮತ್ತು 1,800 ಖಾಸಗಿ ಪದವಿ ಕಾಲೇಜುಗಳಲ್ಲಿ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ

ಸರ್ಕಾರದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದ ಬಿಬಿಎಂಪಿ

Namma Metro: ಇಂದಿನಿಂದ ಟೋಕನ್​ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ; ವಾರದ ದಿನಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6ರ ತನಕ ಸಂಚಾರ

(Department of Higher Education has decided to launch a vaccination campaign in more colleges in Karnataka)