Chescom: ವಿದ್ಯುತ್ ಸ್ಪರ್ಶಿಸಿ ಕಂಬದಲ್ಲಿಯೇ ನರಳಾಟ; ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಬದುಕುಳಿದ ಲೈನ್‌ಮನ್
ಲೈನ್‌ಮನ್ ಪ್ರದೀಪ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಕಂಬವೇರಿದ್ದರು. ಈ ವೇಳೆ ವಿದ್ಯುತ್ ಶಾಕ್‌ಗೆ ಸಿಲುಕಿ ಪ್ರದೀಪ್ ಕಂಬದಲ್ಲೇ ನರಳಾಡಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೆ ಪ್ರಾಣದ ಹಂಗು ತೊರೆದು ಕಂಬವೇರಿ, ರಕ್ಷಿಸಿದ್ದಾರೆ.
ಹಾಸನ: ವಿದ್ಯುತ್ ಕಾಮಗಾರಿಗಾಗಿ ಲೈನ್‌ಮನ್ ಕಂಬವೇರಿದ್ದಾಗ ವಿದ್ಯುತ್ ಪ್ರವಹಿಸಿ ಲೈನ್‌ಮನ್ ನರಳಾಡಿದ್ದಾರೆ. ಆದರೆ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಲೈನ್‌ಮನ್ ಬದುಕುಳಿದಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಪ್ರದೀಪ್ ರಕ್ಷಿಸಲ್ಪಟ್ಟ ಲೈನ್‌ಮನ್.
ಲೈನ್‌ಮನ್ ಪ್ರದೀಪ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಕಂಬವೇರಿದ್ದರು. ಈ ವೇಳೆ ವಿದ್ಯುತ್ ಶಾಕ್‌ಗೆ ಸಿಲುಕಿ ಪ್ರದೀಪ್ ಕಂಬದಲ್ಲೇ ನರಳಾಡಿದ್ದಾರೆ. ಕೂಡಲೇ ಕೆಲ ಗ್ರಾಮಸ್ಥರು ಕಂಬವೇರಿ ಲೈನ್‌ಮನ್ ಪ್ರದೀಪನನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೆ ಪ್ರಾಣದ ಹಂಗು ತೊರೆದು ಕಂಬವೇರಿ, ರಕ್ಷಿಸಿದ್ದಾರೆ. ಜಾಗೃತೆಯಿಂದ ಕಂಬದಲ್ಲಿ ಸಿಲುಕಿದ್ದ ಲೈನ್ ಮನ್ನನ್ನು ಕೆಳಗಿಳಿಸಿದ್ದಾರೆ.
ಅಸ್ವಸ್ಥಗೊಂಡಿದ್ದ ಲೈನ್‌ಮನ್ ಪ್ರದೀಪ್ಗೆ ಬೇಲೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಜೂನ್ 29 ರಂದು ಈ ಘಟನೆ ನಡೆದಿದೆ. ಸೂಕ್ತ ಸುರಕ್ಷತಾ ಪರಿಕರ ನೀಡದೆ ಕೆಲಸ ಮಾಡಿಸೋ ಚೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(Chescom lineman pradeep rescued from live pole by villagers in kogodu belur taluk)
ವಿದ್ಯುತ್ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಬಂದ ಪಕ್ಕದ ಮನೆಯಾತ; ಮೂವರೂ ಸಾವು