ಶುಲ್ಕ ಹೆಚ್ಚಳ ಮಾಡಿದ 163 ಶಾಲೆಗಳಿಗೆ ನೋಟಿಸ್ ಜಾರಿ..

|

Updated on: May 22, 2020 | 12:46 PM

ಬೆಂಗಳೂರು: ಶುಲ್ಕ ಹೆಚ್ಚಳ ಮಾಡಿದ 163 ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ. ಕೊರೊನಾ ಬಿಕ್ಕಟ್ಟು ಹಿನ್ನೆಲೆ ಶುಲ್ಕ ಹೆಚ್ಚಿಸದಂತೆ ಆದೇಶ ನೀಡಿದೆ. ರಾಜ್ಯ ಕೊರೊನಾ ವಿರುದ್ಧದ ಹೋರಾಟದಲ್ಲಿದೆ. ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಆದ್ರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕೆಲ ಶಾಲೆಗಳು ಶುಲ್ಕ ಹೆಚ್ಚಳ ಮಾಡಿವೆ ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸಹಾಯವಾಣಿಗೆ ಪೋಷಕರು ದೂರು ನೀಡಿದ್ದಾರೆ. ಕಳೆದ 10 […]

ಶುಲ್ಕ ಹೆಚ್ಚಳ ಮಾಡಿದ 163 ಶಾಲೆಗಳಿಗೆ ನೋಟಿಸ್ ಜಾರಿ..
Follow us on

ಬೆಂಗಳೂರು: ಶುಲ್ಕ ಹೆಚ್ಚಳ ಮಾಡಿದ 163 ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ. ಕೊರೊನಾ ಬಿಕ್ಕಟ್ಟು ಹಿನ್ನೆಲೆ ಶುಲ್ಕ ಹೆಚ್ಚಿಸದಂತೆ ಆದೇಶ ನೀಡಿದೆ.

ರಾಜ್ಯ ಕೊರೊನಾ ವಿರುದ್ಧದ ಹೋರಾಟದಲ್ಲಿದೆ. ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಆದ್ರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕೆಲ ಶಾಲೆಗಳು ಶುಲ್ಕ ಹೆಚ್ಚಳ ಮಾಡಿವೆ ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸಹಾಯವಾಣಿಗೆ ಪೋಷಕರು ದೂರು ನೀಡಿದ್ದಾರೆ.

ಕಳೆದ 10 ದಿನಗಳಲ್ಲಿ 800ಕ್ಕೂ ಅಧಿಕ ಶಾಲೆಗಳ ವಿರುದ್ಧ ದೂರುಗಳು ಬಂದಿವೆ. ಬೆಂಗಳೂರಿನ 829 ಶಾಲೆಗಳ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಹೀಗಾಗಿ ಬೆಂಗಳೂರಿನ ದಕ್ಷಿಣ ಭಾಗದ 116 ಶಾಲೆಗಳು, ಬೆಂಗಳೂರು ಉತ್ತರ ಭಾಗದ 45 ಶಾಲೆಗಳು, ಬೆಂಗಳೂರು ಗ್ರಾಮಾಂತರ ಭಾಗದ 2 ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಟಿವಿ9ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

Published On - 8:25 am, Fri, 22 May 20