ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಸಹ ಉಸ್ತುವಾರಿಯಾಗಿರುವ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಇಂದು ಎಲೆಕ್ಷನ್ ತಯಾರಿಯಿಂದ ಕೊಂಚ ಬ್ರೇಕ್ ಪಡೆದು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದರು. ಚುನಾವಣಾ ಪ್ರಚಾರದಿಂದ ಬ್ರೇಕ್ ಪಡೆದು ಸಂಜೆ ಅಯ್ಯಪ್ಪಸ್ವಾಮಿಯ ದರ್ಶನ ಮಾಡಿದರು. ಮಾಲಾಧಾರಿಯಾಗಿ ತೆರಳಿ ಡಾ.ಅಶ್ವತ್ಥ ನಾರಾಯಣ ಸ್ವಾಮಿಯ ದರ್ಶನ ಪಡೆದರು.
ಅಸ್ವತ್ಥ್ ನಾರಾಯಣ ಪಂಪಾ ನದಿಯಿಂದ ಇರುಮಡಿ ಹೊತ್ತು ಕಾಲ್ನಡಿಗೆಯಲ್ಲಿ ತೆರಳಿದರು. ಅಯ್ಯಪ್ಪನ ಸನ್ನಿಧಾನದಲ್ಲಿ ಪಡಿಪೂಜೆಯಲ್ಲಿ ಭಾಗಿಯಾಗಿ ಬಳಿಕ ದೇವರ ದರ್ಶನ ಮಾಡಿದರು. ಇದಲ್ಲದೆ, ಪಂದಳಂ ಅರಮನೆಗೂ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಭೇಟಿಕೊಟ್ಟರು.
ಮೇಲುಕೋಟೆಯಲ್ಲಿ ವಿಜೃಂಭಣೆಯಿಂದ ನಡೆದ ತೆಪ್ಪೋತ್ಸವ
ಇತ್ತ, ಸಕ್ಕರೆ ನಾಡು ಮಂಡ್ಯದ ಇತಿಹಾಸ ಪ್ರಸಿದ್ಧ ಮೇಲುಕೋಟೆಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ತೆಪ್ಪೋತ್ಸವ ಆಚರಣೆ ಮಾಡಲಾಯಿತು. ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಮಾ.24ರಂದು ಸರಳ, ಸಂಪ್ರದಾಯಿಕವಾಗಿ ವೈರಮುಡಿ ಉತ್ಸವ ನೆರವೇರಲಿದೆ.
ಈ ನಡುವೆ, ಅಲಂಕಾರಗೊಂಡ ಚೆಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಸಹ ನಡೆಸಲಾಯಿತು. ಶ್ರೀದೇವಿ, ಭೂದೇವಿ ಜೊತೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಪೂಜೆಯ ನಂತರ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು. ಈ ಬಾರಿ ತೆಪ್ಪೋತ್ಸವಕ್ಕೆ ವಿಶಿಷ್ಟವಾದ ತೆಪ್ಪ ಸಹ ನಿರ್ಮಾಣವಾಗಿತ್ತು. ತೆಪ್ಪೋತ್ಸವ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ: ನನ್ನ ಜೀವಕ್ಕೆ ಅಪಾಯವಿದೆ.. ನನಗೆ ಫೋನ್, ಮೆಸೇಜ್ ಮಾಡಬೇಡಿ ಎಂದಿದ್ದಳು -‘ಸಿಡಿ ಲೇಡಿ’ ತಾಯಿಯ ಆತಂಕ