ಬೆಳಗಾವಿ: ಖಾಸಗಿ ವಾಹನಕ್ಕೆ ಡೀಸೆಲ್ ಹಾಕಿಸಿದ್ದು ಗಮನಕ್ಕೆ ಬಂದಿರಲಿಲ್ಲ. ಕಾರ್ಯಕ್ರಮ ಮುಗಿದ ಬಳಿಕವೇ ಈ ಬಗ್ಗೆ ನನ್ನ ಗಮನಕ್ಕೆ ಬಂತು ಎಂದು ಜಿಲ್ಲೆಯ ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ಕೊಟ್ಟಿದ್ದಾರೆ.
ಕಾರಿಗೆ ಡೀಸೆಲ್ ಹಾಕಿಸಲಾಗದಷ್ಟು ದುರ್ಗತಿ ನನಗೆ ಬಂದಿಲ್ಲ. ಭಗವಂತ ನಮ್ಮ ಮನೆಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟಿದ್ದಾನೆ. 3 ಸಾವಿರಕ್ಕಾಗಿ ಜಿಪುಣತನ, ಕೀಳುತನ ನಾನು ಮಾಡಿಲ್ಲ. ಆಗದವ್ರು ಅಪಪ್ರಚಾರ ಮಾಡ್ತಿದ್ದಾರೆ, ಅವ್ರಿಗೆ ಒಳ್ಳೆಯದಾಗಲಿ ಎಂದು ಸವದಿ ಹೇಳಿದರು.
ಯಾವ ಮರದಲ್ಲಿ ಹಣ್ಣು ಇರುತ್ತೋ ಅದಕ್ಕೇ ಕಲ್ಲು ಬೀಳೋದು. ಡೀಸೆಲ್ ಹಾಕಿಸಿಕೊಳ್ಳಲು ಖಾಸಗಿ ಬಂಕ್ ಬಗ್ಗೆ ವಿಚಾರಿಸಿದ್ದಾನೆ. NWKRTC ಡಿಪೋ ಸಿಬ್ಬಂದಿ ಬಳಿ ಕೇಳಿದ್ದಾನೆ. ಹೊರಗೆ ಬೇಡ ಇಲ್ಲಿಯೇ ಹಾಕಿಸಲು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಡೀಸೆಲ್ ಹಾಕಲ್ಲವೆಂದು ಡಿಪೋ ಮ್ಯಾನೇಜರ್ ಹೇಳಬಹುದಿತ್ತು. ಆದ್ರೆ ಇದನ್ನ ಹೇಳುವ ಅರಿವು ಸಹ ಮ್ಯಾನೇಜರ್‌ಗೆ ಇಲ್ಲ ಎಂದು ಸವದಿ ಹೇಳಿದರು.
ನಮ್ಮ ಚಾಲಕನಿಗೂ ಇದರ ಅರಿವಿಲ್ಲದೇ ಡೀಸೆಲ್ ಹಾಕಿಸಿದ್ದಾನೆ. ಲೋಪದೋಷಗಳ ಬಗ್ಗೆ ಇಲಾಖೆ ಡಿಸಿ ಅವರಿಗೂ ಸೂಚಿಸಿದ್ದೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.
‘ಸಚಿವರೂ ತಮ್ಮ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬಹುದು’
ಇತ್ತ, ಡಿಪೋ ಸಿಬ್ಬಂದಿಯ ಅಚಾತುರ್ಯದಿಂದ ಘಟನೆ ನಡೆದಿದೆ. ಸಚಿವರೂ ತಮ್ಮ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು NWKRTC ಡಿಸಿ ಮಹಾದೇವಪ್ಪ ಹೇಳಿದ್ದಾರೆ.
ವಾಹನ ಪರಿಶೀಲಿಸದೇ ಡೀಸೆಲ್ ಹಾಕಿದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ನಿನ್ನೆ 3ನೇ ಘಟಕದಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮಗಳ ಉದ್ಘಾಟನೆಗೆ ಡಿಸಿಎಂ ಸವದಿ ಬಂದಿದ್ದರು. ಈ ವೇಳೆ, ಕಾರಿನ ಚಾಲಕ ಡೀಸೆಲ್ ಹಾಕಿಸಲು ಬಂದಿದ್ದಾನೆ. ಕೆಎ 03 NF 8989 ಕಾರಿಗೆ ಡೀಸೆಲ್ ಹಾಕಿಸಲು ಬಂದಿದ್ದಾನೆ. ಎಫ್ ಸೀರಿಸ್ ವಾಹನಗಳು ಇಲಾಖೆ ವಾಹನಗಳಾಗಿರುತ್ತವೆ. ಸಾಮಾನ್ಯವಾಗಿ ಇಲಾಖೆ ವಾಹನಗಳಾಗಿರುತ್ತವೆ ಎಂದು ಮಹಾದೇವಪ್ಪ ಹೇಳಿದರು.
ಹೀಗಾಗಿ, ಡಿಪೋ ಸಿಬ್ಬಂದಿ ಕಾರಿಗೆ ಡೀಸೆಲ್ ಹಾಕಿದ್ದಾರೆ.ಸಾರಿಗೆ ಸಚಿವ ಸವದಿ ಖಾಸಗಿ ಕಾರಿಗೆ ಡೀಸೆಲ್ ತುಂಬಿದ್ದಾರೆ. ಡಿಪೋ ಸಿಬ್ಬಂದಿಯ ಅಚಾತುರ್ಯದಿಂದ ಘಟನೆ ನಡೆದಿದೆ. ಸಚಿವರೂ ತಮ್ಮ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು NWKRTC ಡಿಸಿ ಮಹಾದೇವಪ್ಪ ಹೇಳಿದ್ದಾರೆ.
ಖಾಸಗಿ ವಾಹನಕ್ಕೂ ಸರ್ಕಾರಿ ಡಿಪೋದಲ್ಲಿ ಡೀಸೆಲ್ ತುಂಬಿಸಿಕೊಂಡ ಬಸ್ ಸಚಿವ ಲಕ್ಷ್ಮಣ ಸವದಿ..!
Published On - 4:55 pm, Sat, 9 January 21