AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡದ ಐದು ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಪ್ರಾರಂಭಿಸಲಾಗುವುದು: ಕೋಟ ಶ್ರೀನಿವಾಸ್ ಪೂಜಾರಿ

ಉತ್ತರ ಕನ್ನಡದ ಮೀನುಗಾರರ ಬಹುದಿನಗಳ ಬೇಡಿಕೆಯಾಗಿದ್ದ ಹೂಳೆತ್ತುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ತದಡಿ, ಭಟ್ಕಳ, ಹೊನ್ನಾವರ, ಕಾರವಾರ ಮತ್ತು ಅಮದಹಳ್ಳಿಯಲ್ಲಿ ಹೂಳೆತ್ತುವ ಕಾರ್ಯ ಆರಂಭವಾಗಲಿದೆ.

ಉತ್ತರ ಕನ್ನಡದ ಐದು ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಪ್ರಾರಂಭಿಸಲಾಗುವುದು: ಕೋಟ ಶ್ರೀನಿವಾಸ್ ಪೂಜಾರಿ
ಉತ್ತರ ಕನ್ನಡದ ಐದು ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಪ್ರಾರಂಭಿಸಲಾಗುವುದು: ಕೋಟ ಶ್ರೀನಿವಾಸ್ ಪೂಜಾರಿ
TV9 Web
| Edited By: |

Updated on:Nov 29, 2022 | 1:32 PM

Share

ಕಾರವಾರ: ನಿತ್ಯ ಮೀನುಗಾರಿಕೆ ನಡೆಸಲು ತೊಂದರೆ ಅನುಭವಿಸುತ್ತಿರುವ ಮೀನುಗಾರರ ಬಹುದಿನಗಳ ಬೇಡಿಕೆಯಾಗಿರುವ ಹೂಳೆತ್ತುವ (Desilting) ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ದೋಣಿ ಅವಘಡಗಳಿಗೆ ಕಾರಣವಾಗುವ ಮರಳು ಸಂಗ್ರಹವಾಗಿರುವ ಐದು ಮೀನುಗಾರಿಕಾ ಬಂದರುಗಳು ಮತ್ತು ಅಳಿವೆಗಳ ಹೂಳೆತ್ತುವ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಡಳಿತ ತಿಳಿಸಿದೆ. ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಜಿಲ್ಲಾ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರು ಎಲ್ಲಾ ಐದು ಬಂದರುಗಳಲ್ಲಿ (Ports) ಮತ್ತು ಇತರ ಮೂರು ಜಿಲ್ಲೆಗಳಲ್ಲಿ ಮರಳು ಶೇಖರಣೆಯನ್ನು ಹೂಳೆತ್ತುವ ಮೂಲಕ ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್​ರಿಂದ ಈಡಿಗ, ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ: ಪ್ರಣವಾನಂದ ಸ್ವಾಮೀಜಿ ಆರೋಪ

ತದಡಿ, ಭಟ್ಕಳ, ಹೊನ್ನಾವರ, ಕಾರವಾರ ಮತ್ತು ಅಮದಹಳ್ಳಿಯಲ್ಲಿ ಹೂಳೆತ್ತುವ ಕೆಲಸ ಕಾರ್ಯ ಮಾಡಲಾಗುವುದು. ಇದರಿಂದ ಇಲ್ಲಿ ಮೀನುಗಾರಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಚಿವರು ಹೇಳಿದರು. ಆದರೆ ಈ ಬಗ್ಗೆ ಮೀನುಗಾರರಿಗೆ ಯಾವುದೇ ಆಶಾಭಾವನೆ ಇಲ್ಲ. ಕಳೆದ ಒಂದು ದಶಕದಿಂದ ಬಂದರುಗಳ ಹೂಳು ತೆಗೆಯುವ ಬಗ್ಗೆ ಬೇಡಿಕೆ ಇಡುತ್ತಲೇ ಬರಲಾಗಿದೆ. ಹೀಗಾಗಿ ಆದಷ್ಟು ಬೇಗ ಈ ಕೆಲಸ ಕಾರ್ಯ ಆಗಬೇಕಿದೆ ಎಂದು ಮೀನುಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಖಾರ್ವಿ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Tue, 29 November 22