ಬೆಂಗಳೂರು: ಕರ್ನಾಟಕ ಸರ್ಕಾರವು ಪ್ರತಿ ವರ್ಷ ದೇವರಾಜ ಅರಸು ಪ್ರಶಸ್ತಿಯನ್ನು ಕೊಡಮಾಡುತ್ತಿದೆ. ಆದರೆ ಕಳೆದ ಮೂರು ವರ್ಷದ ಪ್ರಶಸ್ತಿಯನ್ನು ನಾನಾ ಕಾರಣದಿಂದ ಕೊಡಮಾಡಿಲ್ಲ. ಹಾಗಾಗಿ ಈ ಬಾರಿ ಹಿಂದಿನ 3 ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ನೀಡಲು ಹಾಲಿ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ಮೂರೂ ವರ್ಷಗಳಿಗೆ ಮೂವರು ಗಣ್ಯರನ್ನುಆಯ್ಕೆ ಮಾಡಲಾಗಿದೆ. ಅವರಿಗೆಲ್ಲಾ ನಾಳೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಯಾರು ಯಾರಿಗೆ?
ಬಸವಪ್ರಭು ಲಕನಗೌಡ ಪಾಟೀಲ್ ಅವರಿಗೆ 2019-20ನೇ ಸಾಲಿನ ಪ್ರಶಸ್ತಿ, ಸುಮಂಗಲಿ ಸೇವಾಶ್ರಮ ಎನ್ಜಿಒ ಸಂಸ್ಥೆಯ ಸುಶೀಲಮ್ಮಗೆ 2020-21ನೇ ಸಾಲಿನಲ್ಲಿ ದೇವರಾಜ ಅರಸು ಪ್ರಶಸ್ತಿ ಮತ್ತು 2021-22ನೇ ಸಾಲಿನಲ್ಲಿ ಭಾಸ್ಕರ್ ದಾಸ್ ಎಕ್ಕಾರ್‌ಗೆ ಪ್ರಶಸ್ತಿ ಕೊಡಮಾಡಲಾಗುವುದು. ಭಾಸ್ಕರ್ ದಾಸ್ ಎಕ್ಕಾರ್ ಅಲೆಮಾರಿ ಜನಾಂಗದ ಶ್ರೇಯೋಭಿವೃದ್ಧಿಗೆ ಹೋರಾಟ ನಡೆಸಿದ್ದಾರೆ.
International Women’s Day 2021 | ಸಮಾಜ ಸೇವೆಯೇ ಸುಶೀಲಮ್ಮನವರ ಜೀವನ..; ಒಳಿತಿಗಾಗಿ ನಿರಂತರ ಹೋರಾಟ
(devaraj arasu award for 3 eminent persons on august 20 in bangalore says social welfare department minister kota srinivasa pujari)
Published On - 1:32 pm, Thu, 19 August 21