ಬೀದರ್: ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಅಭಿವೃದ್ಧಿಯಾಗದ ಉಗ್ರ ನರಸಿಂಹ ದೇವಾಲಯ

|

Updated on: Mar 18, 2021 | 11:36 AM

ಗಡಿ ಜಿಲ್ಲೆ ಬೀದರ್ ನಗರದಲ್ಲಿರುವ ಐತಿಹಾಸಿಕ ಉಗ್ರ ನರಸಿಂಹ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಭಕ್ತರಿದ್ದಾರೆ. ಆಂಧ್ರ, ತೆಲಂಗಾಣ, ಮಹರಾಷ್ಟ್ರ ಸೇರಿದಂತೆ ಕರ್ನಾಟಕ ಮೂಲೆ ಮೂಲೆಯಿಂದಲೂ ಇಲ್ಲಿಗೆ ಭಕ್ತರು ಬಂದು ದೇವರ ದರ್ಶನ ಮಾಡಿಕೊಂಡು ಹೋಗುತ್ತಾರೆ. ಆದರೆ ಇಲ್ಲಿಗೆ ಬರುವ ಭಕ್ತರಿಗೆ ಮಾತ್ರ ಮೂಲಭೂತ ಸೌಲಭ್ಯ ಇಲ್ಲಿ ಕಲ್ಪಿಸಿಲ್ಲ.

ಬೀದರ್: ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಅಭಿವೃದ್ಧಿಯಾಗದ ಉಗ್ರ ನರಸಿಂಹ ದೇವಾಲಯ
ಉಗ್ರ ನರಸಿಂಹ ದೇವಾಲಯ
Follow us on

ಬೀದರ್: ಜಿಲ್ಲೆಯ ಶತಮಾನದಷ್ಟು ಹಳೆಯದಾದ ನರಸಿಂಹ ದೇವಾಲಯ ಸರ್ಕಾರದ ಸುಪರ್ಧಿಗೆಯಲ್ಲಿದೆ. ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಜನರಿಗೆ ವಿಶ್ರಾಂತಿಗೆ ಸ್ಥಳವಿಲ್ಲ, ಸ್ನಾನಕ್ಕೆ ನೀರಿಲ್ಲ, ಸ್ವಚ್ಚತಾ ಕಾರ್ಯವು ಇಲ್ಲಿಲ್ಲ. ಮೂರು ವರ್ಷದಿಂದ ದೇವರ ದರ್ಶನಕ್ಕೂ ಬ್ರೇಕ್ ಬಿದ್ದಿದ್ದು, ಭಕ್ತರು ನಿರಾಸೆಯಿಂದ ಹೋಗುವಂತಹ ಸ್ಥಿತಿ ಇಲ್ಲಿದೆ. ಸರ್ಕಾರದ ಸುಪರ್ಧಿಗೆಯಲ್ಲಿರುವ ಈ ದೇವಸ್ಥಾನವನ್ನ ಜಿಲ್ಲಾಢಳಿತ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ್ದು, ಈ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹೊರ ರಾಜ್ಯದ ಭಕ್ತರು
ಗಡಿ ಜಿಲ್ಲೆ ಬೀದರ್ ನಗರದಲ್ಲಿರುವ ಐತಿಹಾಸಿಕ ಉಗ್ರ ನರಸಿಂಹ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಭಕ್ತರಿದ್ದಾರೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ಮೂಲೆ ಮೂಲೆಯಿಂದಲೂ  ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಮಾಡಿಕೊಂಡು ಹೋಗುತ್ತಾರೆ. ಆದರೆ ಇಲ್ಲಿಗೆ ಬರುವ ಭಕ್ತರಿಗೆ ಮಾತ್ರ ಮೂಲಭೂತ ಸೌಲಭ್ಯ ಇಲ್ಲಿ ಕಲ್ಪಿಸಿಲ್ಲ. ಕುಡಿಯುವ ನೀರು, ಬರುವ ಭಕ್ತರಿಗೆ ನೆರಳಿನ ವ್ಯವಸ್ಥೆ, ಸ್ನಾನಕ್ಕೆ ನೀರು ಇದ್ಯಾವುದು ಕೂಡಾ ಇಲ್ಲಿಗೆ ಬರುವ ಭಕ್ತರಿಗೆ ಕಲ್ಪಿಸಿಕೊಟ್ಟಿಲ್ಲ. ಜೊತೆಗೆ ದೇವಾಲಯದ ಸುತ್ತಮುತ್ತಲೂ ಸ್ವಚ್ಚತೆಯಿಂದಲೂ ಕೂಡಿಲ್ಲ. ಇವೆಲ್ಲ ಸಮಸ್ಯೆಗಳ ನಡುವೆ ಇಲ್ಲಿಗೆ ಅಪಾರ ಪ್ರಮಾಣದ ಭಕ್ತರು ಬರುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅದಕ್ಕೆ ಕಾರಣ ಮೂಲಭೂತ ಸೌಲಭ್ಯದ ಕೊರತೆ.

ಗುಹೆಯೊಳಗೆ ಸಾಗಬೇಕು
1,200 ವರ್ಷದಷ್ಟು ಹಳೆಯದಾದ ಉಗ್ರ ನರಸಿಂಹ ದೇವಸ್ಥಾನ ಜಿಲ್ಲೆಯಲ್ಲಿದ್ದು, ಪ್ರಪಂಚದಲ್ಲಿ ಎಲ್ಲಿಯೂ ನೋಡಲು ಸಿಗಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಬೇಕೆಂದರೆ ಗುಹೆಯೊಳಗಿನ ಮುನ್ನೂರು ಮೀಟರ್ ಉದ್ದದ ಜೊತೆಗೆ ಎದೆ ಎತ್ತರದಷ್ಟೂ ನೀರಿನಲ್ಲಿ ಹೋಗಿ ಜನರು ದೇವರ ದರ್ಶನ ಮಾಡಿಕೊಂಡು ಬರುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ದೇವರ ದರ್ಶನಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಜನರು ಹೊರಗಡೆಯಿಂದಲೇ ದೇವರ ದರ್ಶನ ಮಾಡಿಕೊಂಡು ಹೊಗವಂತಹ ಪರಿಸ್ಥಿತಿ ಇಲ್ಲಿನ ಭಕ್ತರದ್ದಾಗಿದೆ. 1,200 ವರ್ಷದಷ್ಟು ಹಳೆದಾದ ದೇವಸ್ಥಾನ ಯಾವತ್ತೂ ಕೂಡಾ ಬತ್ತದ ಇಲ್ಲಿನ ನೀರಿನ ಝರಿಗೆ ಈಗ ನೀರು ಬರುವುದು ಕೂಡಾ ಬಂದ್ ಆಗಿದೆ.

ದೇವಾಲಯದ ಸುತ್ತ ಮುತ್ತಲು ಕಸಗಳು ಬಿದ್ದಿವೆ

ದೇವರಿಗೆ ಹರಕೆ ತೀರಿಸುತ್ತಿರುವ ಭಕ್ತರು

ಹಳೆದಾದ ನರಸಿಂಹ ದೇವಸ್ಥಾನ ಇಂದಿಗೂ ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ಈ ದೇವಸ್ಥಾನ ವಿಶೇಷತೆಯನ್ನ ನೋಡಿದರೆ ಎಂತಹವರಿಗೂ ಅಶ್ಚರ್ಯವಾಗದೇ ಇರದು. ಅಂಥಹಾ ಪವಾಡ ಇಲ್ಲಿ ನಡೆಯುತ್ತದೆ. ನರಸಿಂಹನ ದರ್ಶನ ಪಡೆಯಬೇಕೆಂದರೆ ಗುಹೆಯಲ್ಲಿ ಸುಮಾರು 300 ಮೀಟರ್ ಉದ್ದದ ಎದೆ ಎತ್ತರದ ನೀರಿನಲ್ಲಿ ಸಾಗಿ ದರ್ಶನ ಪಡೆಯಬೇಕು. ಮಳೆಗಾಲ, ಚಳಿಗಾಲ, ಬೇಸಿಗೆಕಾಲದಲ್ಲಿ ಎಂದಿಗೂ ಇಲ್ಲಿನ ನೀರು ಬತ್ತಿದ್ದ ಉದಾಹರಣೆ ಇರಲಿಲ್ಲ. ಆದರೆ ಈಗ ಗುಹೆಯಲ್ಲಿ ನೀರು ಕಾಲಿಯಾಗಿದೆ. ಇದರಿಂದ ಇಲ್ಲಿಗೆ ಬರುವ ಭಕ್ತರು ಕೂಡಾ ಕಡಿಮೆಯಾಗಿದ್ದಾರೆ ಇನ್ನೂ ಇಲ್ಲಿಗೆ ರಾಜ್ಯದ ವಿವಿಧ ಭಾಗದಿಂದ ಅನೇಕ ಭಕ್ತರು ಶನಿವಾರ, ಭಾನುವಾರ, ಸೋಮವಾರ ಆಗಮಿಸುತ್ತಾರೆಂದು ಇಲ್ಲಿನ ಪೂಜಾರಿ ಹೇಳುತ್ತಿದ್ದಾರೆ.

ಉಗ್ರ ನರಸಿಂಹ ದೇವರು

ದೇವಾಲಯದ ಆವರಣ

ದೇವಸ್ಥಾನಕ್ಕೆ ಬಂದು ಭಕ್ತರು ಭಕ್ತಿಯಿಂದ ಬೇಡಿಕೊಂಡರೆ ಭಕ್ತರ ಬೇಡಿಕೆ ಇಡೆರುತ್ತದೆ ಎನ್ನುವುದು ನಂಬಿಕೆ ಇಲ್ಲಿನವರದ್ದು. ಈಗ ಪ್ರಥಮ ಬಾರಿಗೆ ಗುಹೆಯಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಭಕ್ತರಿಗೆ ಗುಹೆಯಲ್ಲಿ ಹೋಗಿ ದರ್ಶನ ಪಡೆಯುವುದನ್ನ ನಿಷೇಧಿಲಾಗಿದೆ. ಇದರಿಂದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಢಳಿತ ಎಚ್ಚೆತ್ತುಕೊಂಡು ನೀರು ಬಾರದಿರುವುದಕ್ಕೆ ಕಾರಣ ಹುಡುಕಿ ಅದಕ್ಕೆ ಪರಿಹಾರ ನೀಡಬೇಕೆಂದು ಇಲ್ಲಿನ ಭಕ್ತರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ

ಕೇಂದ್ರ ಸರ್ಕಾರ ಅನುದಾನ ಒದಗಿಸಿದರೂ ವೆಚ್ಚ ಭರಿಸಲು ರಾಜ್ಯ ಸರ್ಕಾರ ನಕಾರ; ಕನಸಾಗಿಯೇ ಉಳಿಯಲಿದೆಯಾ ಕೋಲಾರದ ರೈಲ್ವೆ ವರ್ಕ್​ಶಾಪ್ ಯೋಜನೆ!

ಹರಿದ ಜೀನ್ಸ್​ ಪ್ಯಾಂಟ್​ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್​ ಮೊಮ್ಮಗಳು ನವ್ಯಾ!