ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ

| Updated By: ganapathi bhat

Updated on: Apr 06, 2022 | 8:52 PM

Dharwad Road Accident dog tattoo link ಧಾರವಾಡ ಅಪಘಾತದ ಬಳಿಕ ಒಂದು ಶವ ಅದಲು ಬದಲಾಗಿ ಎಡವಟ್ಟು ನಡೆದು ಹೋಗಿತ್ತು. ಕೊನೆಗೆ ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯೊಬ್ಬರ ಮೃತದೇಹ ಗುರುತು ಪತ್ತೆ ಮಾಡಲಾಗಿದೆ.

ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ
ಕೊನೆಯದಾಗಿ ಗೆಳತಿರು ಕ್ಲಿಕ್ಕಿಸಿದ ಸೆಲ್ಫಿ
Follow us on

ಧಾರವಾಡ: ಮೊನ್ನೆ (ಜ.15) ಬೆಳಗ್ಗೆ ಧಾರವಾಡದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದ ಅಪಘಾತದಲ್ಲಿ 11 ಜನ ಸಾವನ್ನಪ್ಪಿರುವ ದಾರುಣೆ ಘಟನೆ ನಡೆದಿದೆ. ಈ ಅಪಘಾತದ ಬಳಿಕ, ಮೃತರಾದವರಲ್ಲಿ ಕೆಲವರ ಶವ ಗುರುತು ಪತ್ತೆ ಸವಾಲಾಗಿ ಪರಿಣಮಿಸಿದೆ. ಒಂದು ಶವ ಅದಲು ಬದಲಾಗಿದ್ದು ಎಡವಟ್ಟು ನಡೆದು ಹೋಗಿತ್ತು. ಕೊನೆಗೆ ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯೊಬ್ಬರ ಶವದ ಗುರುತು ಪತ್ತೆ ಮಾಡಲಾಗಿದೆ.

ಕೆಲವರು ಪ್ರೀತಿಗಾಗಿ, ಇನ್ನೂ ಕೆಲವರು ಫ್ಯಾಷನ್​ಗಾಗಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲಿ, ಕೈಗೆ ಹಾಕಿಸಿಕೊಂಡಿದ್ದ ಟ್ಯಾಟೂ ಸಹಾಯದಿಂದ ಶವದ ಗುರುತು ಪತ್ತೆ ಮಾಡಲಾಗಿದೆ. ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ಮೊನ್ನೆ ನಡೆದ ಭೀಕರ ಅಪಘಾತದಲ್ಲಿ 11 ಜನ ಮೃತಪಟ್ಟಿದ್ದಾರೆ. ಮೃತರ ಶವ ಪರೀಕ್ಷೆ ನಂತರ ಶವ ಅದಲು ಬದಲಾಗಿತ್ತು. ಹೀಗಾಗಿ ದೇಹಗಳನ್ನು ಗುರುತಿಸುವುದು ಕಷ್ಟವಾಗಿತ್ತು. ಒಬ್ಬರಿಗೆ ಸಂಬಂಧಪಟ್ಟ ಶವವನ್ನ ಇನ್ನೊಬ್ಬರು ತಗೆದುಕೊಂಡು ಹೋಗುವ ವೇಳೆ, ಕೈಗೆ ಹಾಕಿಸಿಕೊಂಡಿದ್ದ ನಾಯಿಮರಿ ಟ್ಯಾಟೂ ಸಹಾಯದಿಂದ ಮೃತರು ಅದಲು ಬದಲಾಗಿರುವುದನ್ನು ಗುರುತಿಸಲಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಂತರ ಯಸ್ಮಿತಾ ಎಂಬವರ ಮೃತದೇಹವನ್ನು ಪರಂಜ್ಯೋತಿ ಕುಟುಂಬದವರು ತೆಗೆದುಕೊಂಡು ಹೋಗಿದ್ದರು. ಆದರೆ ಯಸ್ಮಿತಾಳ ಕುಟುಂಬದವರು ಅವಳ ಕೈ ಮೇಲೆ ಟ್ಯಾಟೂ ಇಲ್ಲದಿರುವುದನ್ನು ನೋಡಿ ಇದು ನಮ್ಮ ಯಸ್ಮಿತಾ ಮೃತ ದೇಹ ಅಲ್ಲ ಎಂದು ತಿಳಿಸಿದ್ದಾರೆ. ಕೂಡಲೇ ಶವವನ್ನು ತೆಗೆದುಕೊಂಡು ಹೋಗುತ್ತಿದ್ದ ಪರಂಜ್ಯೋತಿ ಕಡೆಯವರಿಗೆ ಪೊಲೀಸರು ಕರೆ ಮಾಡಿ ವಿಚಾರಿಸಿದಾಗ ಆಕೆಯ ಕೈ ಮೇಲೆ ನಾಯಿಮರಿ ಟ್ಯಾಟೂ ಇರುವುದು ಪತ್ತೆಯಾಗಿದೆ. ಹೀಗಾಗೇ ಯಸ್ಮಿತಾ ಮೃತದೇಹವನ್ನ ತೆಗೆದುಕೊಂಡು ಹೋಗುತ್ತಿದ್ದ ಜ್ಯೋತಿ ಕುಟುಂಬಸ್ಥರು, ಮೃತದೇಹವನ್ನು ಹಿಂದಿರುಗಿಸಿದ್ದಾರೆ.

ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು

ಟೆಂಪೋಗೆ ಟಿಪ್ಪರ್​ ಡಿಕ್ಕಿ: ಮೃತರ ಸಂಖ್ಯೆ 13ಕ್ಕೆ ಏರಿಕೆ, ಮಾಜಿ ಶಾಸಕರ ಸೊಸೆ ದುರ್ಮರಣ

Published On - 8:14 pm, Sun, 17 January 21