ಕಾಲು ಜಾರಿ ಭದ್ರಾ ಕಾಲುವೆಗೆ ಬಿದ್ದ ಯುವಕ ಸಾವು: ಶವಕ್ಕಾಗಿ ಹುಡುಕಾಟ
ಚಿತ್ರದುರ್ಗದ ಕುರುಬರಹಳ್ಳಿ ನಿವಾಸಿಯಾಗಿರುವ ಅಮನ್(19) ಭದ್ರಾ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದು, ಸಂಬಂಧಿಕರ ಮದುವೆಗೆ ಬಂದಿದ್ದ ಅಮನ್ ಕಾಲುವೆಯಲ್ಲಿ ಕಾಲು ತೊಳೆದುಕೊಳ್ಳಲು ಹೋದ ವೇಳೆ ಈ ದುರ್ಘಟನೆ ನಡೆದಿದೆ.
ದಾವಣಗೆರೆ: ಕಾಲು ಜಾರಿ ಯುವಕ ಕಾಲುವೆಗೆ ಬಿದ್ದು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಬಳಿ ನಡೆದಿದೆ.
ಚಿತ್ರದುರ್ಗದ ಕುರುಬರಹಳ್ಳಿ ನಿವಾಸಿಯಾಗಿರುವ ಅಮನ್ (19) ಭದ್ರಾ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದು, ಸಂಬಂಧಿಕರ ಮದುವೆಗೆ ಬಂದಿದ್ದ ಅಮನ್ ಕಾಲುವೆಯಲ್ಲಿ ಕಾಲು ತೊಳೆದುಕೊಳ್ಳಲು ಹೋದ ವೇಳೆ ಈ ದುರ್ಘಟನೆ ನಡೆದಿದೆ. ಸದ್ಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದು, ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.