ಶ್ರೀಕಾಂತ್ ಪೂಜಾರಿ ವಿರುದ್ಧ 15 ಪ್ರಕರಣಗಳು ದಾಖಲು; ಇವೆಲ್ಲ ಬೋಗಸ್ ಕೇಸ್​ಗಳೆಂದ ಪ್ರಲ್ಹಾದ್ ಜೋಶಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 02, 2024 | 6:01 PM

ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ಈ ಸಂದರ್ಭದಲ್ಲಿ ಶ್ರೀಕಾಂತ್ ಪೂಜಾರಿ ಅವರ 31 ವರ್ಷದ ಹಿಂದಿನ ಪ್ರಕರಣವನ್ನು ಕೆದಕೋದು ಸರ್ಕಾರದ ನೀಚತನ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗ್ಯಾಕೆ ಈ ಹೊಟ್ಟೆ ಕಿಚ್ಚು. ಕೆಲವರನ್ನು ಸುಮ್ನೆ ಕರೆದುಕೊಂಡು ಹೋಗುತ್ತಿದ್ದಾರೆ. ಕೋರ್ಟ್ ವಾರೆಂಟ್ ಕೂಡ ಇಲ್ಲ ಎಂದು ಸಿಎಂ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಿಡಿಕಾರಿದ್ದಾರೆ.

ಶ್ರೀಕಾಂತ್ ಪೂಜಾರಿ ವಿರುದ್ಧ 15 ಪ್ರಕರಣಗಳು ದಾಖಲು; ಇವೆಲ್ಲ ಬೋಗಸ್ ಕೇಸ್​ಗಳೆಂದ ಪ್ರಲ್ಹಾದ್ ಜೋಶಿ
ಪ್ರಹ್ಲಾದ್​ ಜೋಶಿ
Follow us on

ಹುಬ್ಬಳ್ಳಿ, ಜ.02: ರಾಮ ಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ವಿರುದ್ಧ ಬರೋಬ್ಬರಿ 15 ಪ್ರಕರಣಗಳು ದಾಖಲು, ‘ಅದೆಲ್ಲಾ ಬೋಗಸ್ ಕೇಸ್​ಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಹೇಳಿದ್ದಾರೆ. ಹುಬ್ಬಳ್ಳಿ(Hubballi)ಯಲ್ಲಿ ಮಾಧ್ಯಮ ಪ್ರzತಿನಿಧಿಗಳೊಂದಿಗೆ ಮಾತನಾಡಿದ ಅವರು ‘ ಶ್ರೀಕಾಂತ್ ಪೂಜಾರಿಯನ್ನು ಅರೆಸ್ಟ್ ಮಾಡಿದ್ದು ರಾಮಜನ್ಮಭೂಮಿ ಕೇಸ್​ನಲ್ಲಿ, ಅದು ಇವಾಗ ಯಾಕೆ ಬಂತು ಎಂದು ಪ್ರಶ್ನಿಸಿದ್ದಾರೆ.

31 ಹಿಂದಿನ ಪ್ರಕರಣ ಕೆದಕೋದು ಸರ್ಕಾರದ ನೀಚತನ

ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ಈ ಸಂದರ್ಭದಲ್ಲಿ 31 ವರ್ಷದ ಹಿಂದಿನ ಪ್ರಕರಣವನ್ನು ಕೆದಕೋದು ಸರ್ಕಾರದ ನೀಚತನ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗ್ಯಾಕೆ ಈ ಹೊಟ್ಟೆ ಕಿಚ್ಚು. ಕೆಲವರನ್ನು ಸುಮ್ನೆ ಕರೆದುಕೊಂಡು ಹೋಗುತ್ತಿದ್ದಾರೆ. ಕೋರ್ಟ್ ವಾರೆಂಟ್ ಕೂಡ ಇಲ್ಲ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶ ದ್ರೋಹಿಗಳನ್ನ ಕೈ ಬಿಡಲು ಪತ್ರ ಬರೀತಾರೆ. ಅಪರಾಧಿಗಳಿಗೆ ಬೆಂಬಲಿಸುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಯಾರ ನೀಚತನ ಇದು ಸಿಎಂ ನವರೇ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಠಾಣೆ ಎದುರು ಪ್ರತಿಭಟನೆ; ನಿವಾಸಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ

ಇಲ್ಲಿನ ಇನ್ಸಪೆಕ್ಟರ್ ನಿಮ್ಮ ಆದೇಶ ಪಾಲನೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಶಹರ ಠಾಣೆಯ ಇನ್ಸಪೆಕ್ಟರ್ ವಿರುದ್ದ ಜೋಶಿ ಗರಂ ಆಗಿದ್ದು, ಇನ್ಸಪೆಕ್ಟರ್ ಮುಸ್ಲಿಂ ಇರುವ ಕಾರಣಕ್ಕೆ ಬಂಧನವಾಗಿದೆ ಎಂದಿದ್ದಾರೆ. ಇದೇನು ಐಎಸ್​ಐಎಸ್​ ಸರ್ಕಾರನಾ?, ನಾನು ಇದನ್ನು ತೀವೃವಾಗಿ ಖಂಡಿಸುತ್ತೇನೆ. ಇದು ಮುಸ್ಲಿಂರ ತುಷ್ಟೀಕರಣ, ಬಂಧಿತ ಶ್ರೀಕಾಂತ್ ಪೂಜಾರಿ ಆಟೋ ಡ್ರೈವರ್​. ರಾಮ ಜನ್ಮ ಭೂಮಿಕಾಗಿ ಹೋರಾಟ ಮಾಡಿದವರನ್ನು ಅರೆಸ್ಟ್ ಮಾಡ್ತೀರಿ, ನೀವು ರಾಮ ಮಂದಿರ ವಿರೋಧಿಗಳಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 15 ಕೇಸ್​ಗಳು

ಶ್ರೀಕಾಂತ್ ಪೂಜಾರಿ ವಿರುದ್ಧ ಬರೋಬ್ಬರಿ 15 ಪ್ರಕರಣಗಳು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ, ಕಸಬಾಪೇಟೆ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆ ಸೇರಿ ಹುಬ್ಬಳ್ಳಿಯ ವಿವಿಧ ಪೊಲೀಸ್ ಸ್ಟೇಷನ್​ಗಳಲ್ಲಿ ಕೇಸ್ ದಾಖಲಾಗಿದ್ದು, ಇದರಲ್ಲಿ 11 ಕೇಸ್​ಗಳು ಅಕ್ರಮ ಸರಾಯಿ ಮಾರಾಟ ಕುರಿತು ಹಳೇ ಹುಬ್ಬಳ್ಳಿ ಹಾಗೂ ವಿದ್ಯಾನಗರ ಠಾಣೆಯಲ್ಲಿ ದಾಖಲಾಗಿದೆ. ಇನ್ನು ಕಸಬಾಪೇಟೆ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾದರೆ, ಶಹರ ಪೊಲೀಸ್ ಠಾಣೆಯಲ್ಲಿ ಒಂದು ಕೇಸ್ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ