ಧಾರವಾಡ: ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಇಂದು(ಫೆಬ್ರುವರಿ 23) ಸಂಜೆ ಧಾರವಾಡ(Dharwad) ತಾಲೂಕಿನ ತೇಗೂರ ಗ್ರಾಮದ ಬಳಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಹಾಗೂ ಓರ್ವ ಪಾದಚಾರಿ ಸಾವು ಒಟ್ಟು ಐದು ಜನ ಮೃತಪಟ್ಟಿದ್ದಾರೆ. ಲಾರಿ ಹಿಂಬದಿಗೆ ಕಾರು ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಪಕ್ಕದಲ್ಲಿ ಹೊರಟಿದ್ದ ಓರ್ವ ಪಾದಚಾರಿಗೂ ಕಾರು ತಾಗಿ ಆತನೂ ದುರಂತ ಅಂತ್ಯಕಂಡಿದ್ದಾನೆ.
ಇನ್ನು ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಾವಿಯಿಂದ ಧಾರವಾಡ ಕಡೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಸ್ಥಳಕ್ಕೆ ಗರಗ್ ಠಾಣೆ ಪೊಲೀಸದು ದೌಡಾಯಿಸಿ ಪರಿಶೀಲನೆ ನಡೆಸಿದರು.
ಅಗ್ನಿಪಥ್ ನಲ್ಲಿ ನೇಮಕಗೊಂಡಿದ್ದ ಯುವಕ ಮಂಜುನಾಥ್ ಮುದ್ದೋಜಿಯನ್ನು ಹುಬ್ಬಳ್ಳಿಗೆ ಬಿಟ್ಟು ವಾಪಸ್ ಬರುವಾಗ ಒಮ್ಮೆಲೇ ಪಾದಚಾರಿ ಈರಣ್ಣನನ್ನು ತಪ್ಪಿಸಲು ಹೋಗಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ.
ನಾಗಪ್ಪ ಈರಪ್ಪ ಮುದ್ದೋಜಿ(29), ಅವರಾದಿ ಗ್ರಾಮದ ಮಹಂತೇಶ್ ಬಸಪ್ಪ ಮುದ್ದೊಜಿ(40), ಬಸವರಾಜ್ ಶಿವಪುತ್ರಪ್ಪ ನರಗುಂದ(35), ನಿಚ್ಚಣಕಿ ಗ್ರಾಮದ ಶ್ರೀಕುಮಾರ್ ನರಗುಂದ, ಈರಣ್ಣಾ ಗುರುಸಿದ್ದಪ್ಪ ರಾಮನಗೌಡರ್ (35) (ಪಾದಚಾರಿ)
ಶ್ರವಣಕುಮಾರ್ ಬಸವರಾಜ ನರಗುಂದ, ಮಡಿವಾಳಪ್ಪ ರಾಜು ಅಳ್ನಾವರ (22), ಪ್ರಕಾಶ್ ಗೌಡ ತಂದೆ ಶಂಕರಗೌಡ ಪಾಟೀಲ್ (22) ಗಾಯಗೊಂಡವರು. ಈ ಮೂವರನ್ನು ಚಿಕಿತ್ಸೆಗಾಗಿ ಕಿಮ್ಸ್ ಹುಬ್ಬಳ್ಳಿಗೆ ರವಾನಿಸಲಾಗಿದೆ.
ಧಾರವಾಡದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:41 pm, Thu, 23 February 23