ಧಾರವಾಡ,ನ.07: ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಬಹುತೇಕ ಕಡೆ ಇರುವುದು ಕಪ್ಪು ಮಣ್ಣು. ಹೀಗಾಗಿ ಇಲ್ಲಿನ ರೈತರಿಗೆ ಮುಂಗಾರು ಮಳೆಗಿಂತ ಹಿಂಗಾರು ಮಳೆಯೇ ಆಧಾರ. ಸರಿಯಾದ ವೇಳೆಗೆ ಒಂದೆರಡು ಮಳೆಯಾಗಿ ಬಿಟ್ಟರೆ ಸಾಕು ಇಲ್ಲಿನ ರೈತರು ಬೆಳೆ ಪಡೆದು ಬಿಡುತ್ತಾರೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆಗಿಲ್ಲ. ಹೀಗಾಗಿ ಇಲ್ಲಿನ ರೈತರು(Farmers) ಹಿಂಗಾರು ಮಳೆಯಾದರೆ ಒಳ್ಳೆಯದು ಎಂದು ಕಾಯುತ್ತಾ ಕೂತು. ಅನೇಕರು ಹಿಂಗಾರು ಮಳೆ ನಂಬಿಕೊಂಡು ಬಿತ್ತನೆ ಕಾರ್ಯ ಮಾಡಿಬಿಟ್ಟದ್ದಾರೆ. ಆದರೆ, ಹಿಂಗಾರು ಕೂಡ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಆದರೆ, ಸೊಟಕನಾಳ ಗ್ರಾಮದ ಬಾಲರೆಡ್ಡಿ ಎಂಬುವವರು ಹತ್ತು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ(Maize Crop) ಹಚ್ಚಹಸುರಾಗಿ, ಒಂದೊಂದು ಗಿಡದಲ್ಲಿ ಎರಡೆರಡು ತೆನೆ ಬಿಟ್ಟು ನಿಂತಿದೆ. ಜೊತೆಗೆ ಇದೀಗ ಕಟಾವಿಗೆ ಕೂಡ ಬಂದಿದೆ. ಆದರೆ, ಈ ಹೊಲದ ಪಕ್ಕದಲ್ಲಿಯೇ ಇರುವ ರೈತರ ಹೊಲದಲ್ಲಿನ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿದೆ.
ರೈತ ಬಾಲರೆಡ್ಡಿ ಅವರ ಶ್ರಮದಿಂದ ಮೆಕ್ಕೆಜೋಳ ಹೀಗೆ ನಸುನಗುತ್ತಾ ನಿಂತಿದೆ. ಇವರು ಇಲ್ಲಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಬೆಣ್ಣೆಹಳ್ಳದಿಂದ ನೀರನ್ನು ಪೈಪ್ ಲೈನ್ ಮೂಲಕ ತಂದು ಕೆರೆಯಲ್ಲಿ ಸಂಗ್ರಹಿಸಿದ್ದಾರೆ. ಆ ಕೆರೆಯಿಂದ ಈ ಹೊಲಕ್ಕೆ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೀಗಾಗಿ ಎಲ್ಲ ಕಡೆಗಳಲ್ಲಿ ಮೆಕ್ಕೆಜೋಳ ಒಣಗಿ ಹೋಗಿದ್ದರೆ, ಇಲ್ಲಿ ಮಾತ್ರ ನಳನಳಿಸುತ್ತಾ ನಿಂತಿದೆ. ಈ ಬೆಳೆಯನ್ನು ನೋಡಿದರೆ ಕನಿಷ್ಟ ಒಂದು ಎಕರೆಗೆ 25 ರಿಂದ 30 ಕ್ಷಿಂಟಾಲ್ ಮೆಕ್ಕೆಜೋಳ ಬರುವುದು ಗ್ಯಾರಂಟಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರು, ಬೆಳೆ ಕಳೆದುಕೊಂಡು ಹೈರಾಣಾಗಿದ್ದಾರೆ. ಎಷ್ಟೋ ಕಡೆಗಳಲ್ಲಿ ಒಣಗಿ ಹೋಗುತ್ತಿರುವ ಮೆಕ್ಕೆಜೋಳ ಕಟಾವು ಮಾಡಿ ಜಾನುವಾರುಗಳಿಗೆ ಹಾಕುತ್ತಿದ್ದಾರೆ. ಆದರೆ, ಈ ಬಾಲರೆಡ್ಡಿ ಅವರ ಹೊಲದಲ್ಲಿ ಮಾತ್ರ ದೊಡ್ಡ ಮ್ಯಾಜಿಕ್ ನಡೆದಿದೆ.
ಇದನ್ನೂ ಓದಿ:ರೈತರು ಬೆಳೆದ ಬೆಳೆಯನ್ನು ಖರೀದಿಸಿ ಬಡವರಿಗೆ ಹಂಚಿಕೆ; ಕೋಲಾರದ ಸಂಸ್ಥೆಯ ಕಾರ್ಯಕ್ಕೆ ಜನರ ಮೆಚ್ಚುಗೆ
VO 03:- ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೀರಿಲ್ಲದೇ ಎಲ್ಲ ಬೆಳೆಗಳೂ ಒಣಗುತ್ತಿವೆ. ಸಾಮಾನ್ಯವಾಗಿ ಮುಂಗಾರು ಕೈಕೊಟ್ಟರೆ ಹಿಂಗಾರು ಮಳೆ ಬಂದೇ ಬರುತ್ತೆ ಅನ್ನೋ ನಂಬಿಕೆ ಜನರಲ್ಲಿದೆ. ಆದರೆ ಆ ನಂಬಿಕೆಯೂ ಈ ಬಾರಿ ಸುಳ್ಳಾಗಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಶ್ರಮಪಟ್ಟರೆ ಬರದಲ್ಲಿಯೂ ಬಂಗಾರದ ಬೆಳೆ ತೆಗೆಯಬಹುದು ಅನ್ನೋದನ್ನು ಈ ರೈತ ನಿರೂಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Tue, 7 November 23