Amit Shah: ಅಮಿತ್ ಶಾ ಅವರಿಂದ ಫಾರೆನ್ಸಿಕ್ ಯೂನಿವರ್ಸಿಟಿ ಕ್ಯಾಂಪಸ್ ಗೆ ಇಂದು ಭೂಮಿ ಪೂಜೆ – ಸ್ಥಳ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Jan 28, 2023 | 9:43 AM

Pralhad Joshi: ದೇಶದಲ್ಲಿ ಫಾರೆನ್ಸಿಕ್ ಯೂನಿವರ್ಸಿಟಿಯ 7 ಶಾಖೆಗಳಿದ್ದು, ಧಾರವಾಡದಲ್ಲಿ 8 ನೇ ಶಾಖೆ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಲಿದೆ. ಅಮಿತ್ ಶಾ ಭಾಗವಹಿಸುವ ಕಾರ್ಯಕ್ರಮದ ಸಿದ್ಧತೆಗಳನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರಿಶೀಲಿಸಿದರು.

Amit Shah: ಅಮಿತ್ ಶಾ ಅವರಿಂದ ಫಾರೆನ್ಸಿಕ್ ಯೂನಿವರ್ಸಿಟಿ ಕ್ಯಾಂಪಸ್ ಗೆ ಇಂದು ಭೂಮಿ ಪೂಜೆ - ಸ್ಥಳ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಅಮಿತ್ ಶಾ ಅವರಿಂದ ಫಾರೆನ್ಸಿಕ್ ಯೂನಿವರ್ಸಿಟಿ ಕ್ಯಾಂಪಸ್ ಗೆ ಇಂದು ಭೂಮಿ ಪೂಜೆ
Follow us on

ಧಾರವಾಡದಲ್ಲಿ (Dharwad) ನೂತನವಾಗಿ ನಿರ್ಮಾಣವಾಗಲಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (FSL University) ಶಾಖೆಯ ಭೂಮಿ ಪೂಜೆಯನ್ನು ಇಂದು ಶನಿವಾರ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ (Amit Shah) ಅವರು ನೆರವೇರಿಸಲಿದ್ದು, ಕಾರ್ಯಕ್ರಮ ತಯಾರಿ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಥಳ ಪರಿಶೀಲನೆ ನಡೆಸಿದರು. ಗುಜರಾತ್‌ನಲ್ಲಿರುವ ಫಾರೆನ್ಸಿಕ್ ಯುನಿವರ್ಸಿಟಿಯ ಬ್ರ್ಯಾಂಚ್ ಕ್ಯಾಂಪಸ್ ಇದೇ ಮೊದಲು ಬಾರಿಗೆ ದಕ್ಷಿಣ ಭಾರತದಲ್ಲಿ ಆರಂಭ ಆಗುತ್ತಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪ್ರಯತ್ನದ ಫಲವಾಗಿ ರಾಜ್ಯದ ಧಾರವಾಡದಲ್ಲಿ ನಿರ್ಮಾಣವಾಗುತ್ತಿದೆ. ಫಾರೆನ್ಸಿಕ್ ಕ್ಯಾಂಪಸ್‌ಗಾಗಿ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಸೈದಾಪುರ ಗ್ರಾಮದ ಒಟ್ಟು 50 ಎಕರೆ 39 ಗುಂಟೆ ಜಾಗದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಜಾಗವನ್ನ ಗುರುತಿಸಲಾಗಿದೆ.

ಸದ್ಯ ಇಡೀ ದೇಶದಲ್ಲಿ ಫಾರೆನ್ಸಿಕ್ ಯೂನಿವರ್ಸಿಟಿಯ 7 ಶಾಖೆಗಳಿದ್ದು, ಧಾರವಾಡದಲ್ಲಿ 8 ನೇ ಶಾಖೆ ನಿರ್ಮಾಣಕ್ಕೆ ನಾಳೆ ಶಂಕುಸ್ಥಾಪನೆ ನೆರವೇರಲಿದೆ. ಅಮಿತ್ ಶಾ ಅವರ ಕಾರ್ಯಕ್ರಮದ ಸಿದ್ಧತೆಗಳನ್ನ ವೀಕ್ಷಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕ್ಯಾಂಪಸ್ ಉದ್ಘಾಟನೆ ಬಳಿಕ ಕುಂದಗೋಳದಲ್ಲಿ ಅಮಿತ್ ಶಾ ಅವರ ರೋಡ್ ಶೋ, ಸಮಾವೇಶ ನಡೆಯಲಿದೆ ಎಂದರು.

ಮಾರ್ಚ್ ಮೊದಲ ವಾರದಲ್ಲಿ ಧಾರವಾಡ IIT ಮೋದಿ ಅವರಿಂದ ಉದ್ಘಾಟನೆ

ಇನ್ನು ಧಾರವಾಡ ಐಐಟಿ ಉದ್ಘಾಟನೆ ಮಾರ್ಚ್ ಮೊದಲ ವಾರದೊಳಗೆ ನೆರವೇರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಫಾರೆನ್ಸಿಕ್ ಯೂನಿವರ್ಸಿಟಿ ಕ್ಯಾಂಪಸ್ ಸ್ಥಳ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಫೆ. 15 ರ ನಂತರ ಯಾವಾಗ ಬೇಕಾದರು ಆಗಬಹುದು ಎಂದು ಪ್ರಧಾನಿ ಮೋದಿ ಅವರ ಕಚೇರಿಯಿಂದ ಮಾಹಿತಿ ಬಂದಿದೆ.

ನಾನು ಒಮ್ಮೆ ಐಐಟಿಗೆ ಭೇಟಿ ನೀಡಿ ಕಟ್ಟಡ ಪರಿಶೀಲಿಸುತ್ತೇನೆ. ಈ ಮೊದಲು ಫೆ. 6 ರಂದು ಧಾರವಾಡಕ್ಕೆ ಬರುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಇತರೆ ಕಾರ್ಯಗಳಿಂದ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಫೆಬ್ರುವರಿ 15 ರ ನಂತರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಧಾರವಾಡ ಐಐಟಿ ಉದ್ಘಾಟನೆಗೊಳ್ಳಲಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

Published On - 9:42 am, Sat, 28 January 23