AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amit Shah: ಕೇಂದ್ರ ಸಚಿವ ಅಮಿತ್​ ಶಾ ಹುಬ್ಬಳ್ಳಿ, ಬೆಳಗಾವಿ ಭೇಟಿ: ಇಲ್ಲಿದೆ ವೇಳಾಪಟ್ಟಿ

ಕೇಂದ್ರ ಸಚಿವ ಅಮಿತ್​ ಶಾ ಇಂದು (ಜ.28) ಕೇಂದ್ರ ಸಚಿವ ಅಮಿತ್​ ಶಾ ಹುಬ್ಬಳ್ಳಿ ಮತ್ತು ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದಾರೆ.

Amit Shah: ಕೇಂದ್ರ ಸಚಿವ ಅಮಿತ್​ ಶಾ ಹುಬ್ಬಳ್ಳಿ, ಬೆಳಗಾವಿ ಭೇಟಿ: ಇಲ್ಲಿದೆ ವೇಳಾಪಟ್ಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ
TV9 Web
| Updated By: ವಿವೇಕ ಬಿರಾದಾರ|

Updated on: Jan 28, 2023 | 7:15 AM

Share

ಹುಬ್ಬಳ್ಳಿ/ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಬಿಜೆಪಿ ಹೈಕಮಾಂಡ್​ ರಾಜ್ಯ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆ ಇಂದು (ಜ.28) ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಹುಬ್ಬಳ್ಳಿ (Hubli) ಮತ್ತು ಬೆಳಗಾವಿ (Belagavi) ಪ್ರವಾಸ ಕೈಗೊಳ್ಳಲಿದ್ದಾರೆ.

ಇಂದು ಅಮಿತ್ ಶಾ ಕಾರ್ಯಕ್ರಮದ ವೇಳಾಪಟ್ಟಿ

ಕೇಂದ್ರ ಸಚಿವ ಅಮಿತ್ ಶಾ ಮಧ್ಯರಾತ್ರಿ ಹುಬ್ಬಳ್ಳಿಗೆ ಬಂದಿಳಿದಿದ್ದು, ಅಕ್ಷಯಪಾರ್ಕನಲ್ಲಿರುವ ಡೆನಿಸನ್ಸ್​​ ಹೊಟೇಲ್​ನಲ್ಲಿ ತಂಗಿದ್ದಾರೆ. ಬೆಳಿಗ್ಗೆ 11.45ಕ್ಕೆ ರಸ್ತೆ ಮಾರ್ಗವಾಗಿ ಕೆಎಲ್ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ತೆರಳಲಿದ್ದಾರೆ. 11.50ಕ್ಕೆ ಕೆಎಲ್ಇ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಚಾಲನೆ ನೀಡಿ, 11.55ಕ್ಕೆ ಕೆಎಲ್ಇ ಹೆಲಿಪಾಡ್​ನಿಂದ ಹೆಲಿಕಾಪ್ಟರ್ ಮೂಲಕ ಧಾರವಾಡಕ್ಕೆ ಪ್ರಯಾಣ ಬೆಳಸಲಿದ್ದಾರೆ.

ಮಧ್ಯಾಹ್ನ 12.10ಕ್ಕೆ ಧಾರವಾಡ ಎತ್ತಿನಗುಡ್ಡದ ತಾತ್ಕಾಲಿಕ ಹೆಲಿಪ್ಯಾಡ್​ನಲ್ಲಿ ಲ್ಯಾಂಡ್​ ಆಗಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಕೃಷಿ ವಿವಿ ಆವರಣದಲ್ಲಿ 12.20ಕ್ಕೆ ಫೊರೆನ್ಸಿಕ್ ವಿಶ್ವ ವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. 12.20 ರಿಂದ 1.10ರವರೆಗೆ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬಳಿಕ ಅಲ್ಲಿಂದ 1.10ಕ್ಕೆ ರಸ್ತೆ ಮೂಲಕ ಧಾರವಾಡದ ಎತ್ತಿನಗುಡ್ಡ ಹೆಲಿಪ್ಯಾಡ್‌ನತ್ತ ತೆರಳುತ್ತಾರೆ.

ಆ ನಂತರ 1.20ಕ್ಕೆ ಎತ್ತಿನಗುಡ್ಡ ಹೆಲಿಪ್ಯಾಡನಿಂದ ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಹೋಗುತ್ತಾರೆ. 1.40ಕ್ಕೆ ಕುಂದಗೋಳ ಶಿವಾನಂದ ಮಠದ ಶಾಲೆ ಮೈದಾನದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹ್ಯಾಲಿಪ್ಯಾಡ್​ನಲ್ಲಿ ಇಳಿದು, ಅಲ್ಲಿಂದ‌ ರಸ್ತೆ ಮಾರ್ಗದ ಮೂಲಕ‌ 1.50ಕ್ಕೆ ಶಂಭುಲಿಂಗ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ತಾನದಿಂದ ರಸ್ತೆ ಮಾರ್ಗವಾಗಿ 2.20ರವರೆಗೆ ವಾರ್ಡ್ 7ರಿಂದ ಬಸವದೇವರ ಮಠದವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಸಲಿದ್ದಾರೆ. ಬಳಿಕ 2.45ರವರೆಗೆ ಐತಿಹಾಸಿಕ ಶ್ರೀ ಶಂಭುಲಿಂಗ ದೇವಸ್ಥಾನ ಹಾಗೂ ಬಸವಣ್ಣಮಠದ ದರ್ಶನ ಪಡೆದು 2.45ರಿಂದ 3.25ರವರೆಗೆ ಶ್ರೀ ಬಸವಣ್ಣ ದೇವರಮಠದಿಂದ ಗಾಳಿ ಮರಿಯಮ್ಮ ದೇವಸ್ಥಾನದವರೆಗೆ ರೋಡ್ ಶೋ ನಡೆಸಲಿದ್ದಾರೆ. 3.30ಕ್ಕೆ ಗಾಳಿ ಮರಿಯಮ್ಮ ದೇವಸ್ಥಾನದಿಂದ ಶಿವಾನಂದ ಶಾಲೆ ‌ಮೈದಾನದತ್ತ ಪ್ರಯಾಣ ಮಾಡಿ ಕುಂದಗೋಳದಿಂದ 3.35ಕ್ಕೆ ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ತೆರಳುತ್ತಾರೆ.

ಬೆಳಗಾವಿಗೆ ಚುನಾವಣಾ ಚಾಣಕ್ಯ

ಕುಂದುಗೋಳ ನಂತರ ಅಮಿತ್​ ಶಾ ಬೆಳಗಾವಿಯ ಎಂ.ಕೆ ಹುಬ್ಬಳ್ಳಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.35ಕ್ಕೆ ಹೆಲಿಕಾಪ್ಟರ್ ಮೂಲಕ ಕುಂದಗೋಳದಿಂದ‌ ಹೊರಟು, 3.45ಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. 3.50ಕ್ಕೆ ಜನ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸುತ್ತಾರೆ. 5.15ಕ್ಕೆ ಎಂ.ಕೆ ಹುಬ್ಬಳ್ಳಿಯಲ್ಲಿರುವ ಹೆಲಿಪ್ಯಾಡ್​​ನಿಂದ 5.35ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರುತ್ತಾರೆ.

ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಆಗಮಿಸಿ, ಸಂಜೆ 6ಗಂಟೆಗೆ ಬೆಳಗಾವಿ ನಗರದ ಖಾಸಗಿ ಹೊಟೆಲ್​ನಲ್ಲಿ ಸಂಘಟನಾತ್ಮಕ ಸಭೆ ನಡೆಸಲಿದ್ದಾರೆ. 7ಗಂಟೆಗೆ ಬಿಜೆಪಿ ಪದಾಧಿಕಾರಿಗಳು, ‌ಮುಖಂಡರ ಜತೆಗೆ ಸಭೆ ನಡೆಸುತ್ತಾರೆ. ಸಭೆಗಳ ಬಳಿಕ ಹೊಟೆಲ್​ದಿಂದ ರಸ್ತೆ ಮಾರ್ಗವಾಗಿ 9.45ಕ್ಕೆ ಸಾಂಬ್ರಾ ಏರ್ಪೋರ್ಟ್ ತಲುಪಲಿದ್ದಾರೆ. 10ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ