Basavaraj Bommai Birthday: ಇಂಜಿನಿಯರ್ ಆಗಿದ್ದ ಬೊಮ್ಮಾಯಿ ರಾಜಕೀಯ ಪ್ರವೇಶದ ಕಹಾನಿ, ಬೊಮ್ಮಾಯಿ ಜೀವನದಲ್ಲಿನ ಆಕಸ್ಮಿಕ ಘಟನೆಗಳ ವೃತ್ತಾಂತ ಇಲ್ಲಿದೆ

ಹುಬ್ಬಳ್ಳಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ವಿರುದ್ಧ ಜನತಾ ಪರಿವಾರದ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಸವರಾಜ್ ಬೊಮ್ಮಾಯಿಗೆ ಮೊದಲ ಪ್ರಯತ್ನದಲ್ಲೇ ಸೋಲಾಗುತ್ತದೆ. ಮೊದಲ ಸೋಲನ್ನೆ ಸವಾಲಾಗಿ ಸ್ವೀಕರಿಸಿ, ಬೆಳೆದ ಬಿಸಿ ರಕ್ತದ ಯುವ ರಾಜಕಾರಣಿ ಬೊಮ್ಮಾಯಿ ಇಂದು ರಾಜಕೀಯವಾಗಿ ಮಾಗಿದ ಮುಖ್ಯಮಂತ್ರಿಯಾಗಿದ್ದಾರೆ.

Basavaraj Bommai Birthday: ಇಂಜಿನಿಯರ್ ಆಗಿದ್ದ ಬೊಮ್ಮಾಯಿ ರಾಜಕೀಯ ಪ್ರವೇಶದ ಕಹಾನಿ, ಬೊಮ್ಮಾಯಿ ಜೀವನದಲ್ಲಿನ ಆಕಸ್ಮಿಕ ಘಟನೆಗಳ ವೃತ್ತಾಂತ ಇಲ್ಲಿದೆ
ಇಂಜಿನಿಯರ್ ಆಗಿದ್ದ ಬೊಮ್ಮಾಯಿ ರಾಜಕೀಯ ಪ್ರವೇಶದ ಕಹಾನಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 28, 2023 | 10:26 AM

ಇಂದು ಬಸವರಾಜ ಬೊಮ್ಮಾಯಿ ಅವರಿಗೆ 63ನೇ ಜನ್ಮದಿನ (Basavaraj Bommi Birthday) ಸಂಭ್ರಮ. ಆದರೆ ಈ ಹಿಂದೆ, ಯಾರೂ ಊಹಿಸಿರಲಿಲ್ಲ ಬಸವರಾಜ್ ಬೊಮ್ಮಾಯಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ (Karnataka Chief Minister) ಆಗ್ತಾರೆ ಎಂದು. ಇಡೀ ರಾಜ್ಯಕ್ಕೆ ಗೊತ್ತಿರುವ ಹಾಗೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದು ಆಕಸ್ಮಿಕವೇ ಸರಿ. ಆದ್ರೆ ಅವರ ಜೀವನದಲ್ಲಿ ಅಂತಹ ಅನೇಕ ಆಕಸ್ಮಿಕ ಘಟನೆಗಳು ಸಂಭವಿಸಿವೆ. ಪ್ರತಿಯೊಂದು ಘಟನೆಯೂ ಬೊಮ್ಮಾಯಿ ಅವರಿಗೆ ಜೀವನದಲ್ಲಿ ಹೊಸ ತಿರುವನ್ನೇ ನೀಡಿದೆ. ಅಂದು ಮುಖ್ಯಮಂತ್ರಿ ಆಗಿದ್ದ ಎಸ್ ಆರ್ ಬೊಮ್ಮಾಯಿ ಜೊತೆ ಚಿಕ್ಕವನಿದ್ದಾಗಿನಿಂದಲೂ ರಾಜಕೀಯ ಕಾರ್ಯಕ್ರಮಗಳಲ್ಲಿ ಬಸವರಾಜ್ ಬೊಮ್ಮಾಯಿ ಭಾಗವಹಿಸುತ್ತಿದ್ದರು. ತಮ್ಮ ಅರಿವಿಗೆ ಬಾರದಂತೆಯೆ ಅವರು ರಾಜಕೀಯದತ್ತ ಆಕರ್ಷಿತರಾದರು. ವಿದ್ಯಾರ್ಥಿ (Student) ಆದಾಗಿನಿಂದಲೂ ನಾಯಕತ್ವದ ಹುಚ್ಚು ಅವರಲ್ಲಿ ಇತ್ತು. ಹೀಗಾಗಿ ಹುಬ್ಬಳ್ಳಿಯ (Hubballi) ಪ್ರತಿಷ್ಠಿತ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇರುವಾಗಲೇ ಸ್ಟೂಡೆಂಟ್ ಯೂನಿಯನ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ವಿದ್ಯಾರ್ಥಿ ಇದ್ದಾಗಲೇ ಇವರಲ್ಲಿನ ನಾಯಕತ್ವ ಗುಣವನ್ನು ಅವರ ತಂದೆ ಬಹಳ ಸೂಕ್ಷ್ಮವಾಗಿ ಗಮನಿಸಿದ್ದರು. ಆದ್ರೆ ಮಗನನ್ನು ರಾಜಕೀಯಕ್ಕೆ ಕರೆತರಲು ಮಾತ್ರ ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ತಂದೆಯ ಒತ್ತಾಯಕ್ಕೆ ಮಣಿದು ಇಂಜಿನಿಯರಿಂಗ್ ಮುಗಿಸಿಕೊಂಡ ಬಳಿಕ ನೇರವಾಗಿ ಮುಂಬೈನಲ್ಲಿರುವ ಖಾಸಗಿ ಸಾಫ್ಟ್​​ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು ಬೊಮ್ಮಾಯಿ.

ಆದರೆ ಗಾಢವಾಗಿ ರಾಜಕೀಯ ಸೆಳೆತಕ್ಕೆ ಒಳಗಾಗಿದ್ದ ಬೊಮ್ಮಾಯಿ ರಾಜ್ಯದಲ್ಲಿ ಆಗುವ ಪ್ರತಿ ಚುನಾವಣೆಯ ಸಮಯದಲ್ಲಿ ಪ್ರಚಾರಕ್ಕೆ ಅಂತಾ ಬರ್ತಾ ಇದ್ದರು. ಹುಬ್ಬಳ್ಳಿ ಭಾಗದಲ್ಲಿನ ಜನರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಳ್ತಾರೆ. ಇವರಲ್ಲಿನ ನಾಯಕತ್ವ ಗುಣ ಹಾಗೂ ಜನರ ಜೊತೆ ಬೆರೆಯುವ ಲಕ್ಷಣಗಳನ್ನು ಇಷ್ಟಪಟ್ಟ ಹುಬ್ಬಳ್ಳಿಯ ಜನ 1994 ರಲ್ಲಿ ನಿಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲೇಬೇಕೆಂದು ಸೀನಿಯರ್ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡ್ತಾರೆ. ಅಂದು ಜನರ ಒತ್ತಾಯಕ್ಕೆ ಮಣಿದ, ದಿವಂಗತ ಎಸ್ ಆರ್ ಬೊಮ್ಮಾಯಿ ಅವರು ರಾಜಕೀಯ ಪ್ರವೇಶಕ್ಕೆ ಬಸವರಾಜ ಬೊಮ್ಮಾಯಿಗೆ ಒಪ್ಪಿಗೆ ಸೂಚಿಸ್ತಾರೆ.

ಸೋಲ್ಲನ್ನೇ ಸವಾಲಾಗಿ ಸ್ವಿಕರಿಸಿರುವ ಬಸವರಾಜ ಬೊಮ್ಮಾಯಿ

ಜನರ ಒತ್ತಾಯಕ್ಕೆ ಮಣಿದು ಹುಬ್ಬಳ್ಳಿ ವಿಧಾನಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ವಿರುದ್ಧ ಜನತಾ ಪರಿವಾರದ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಸವರಾಜ್ ಬೊಮ್ಮಾಯಿಗೆ ಮೊದಲ ಪ್ರಯತ್ನದಲ್ಲೇ ಸೋಲಾಗುತ್ತದೆ. ಮೊದಲ ಸೋಲನ್ನೆ ಸವಾಲಾಗಿ ಸ್ವಿಕರಿಸಿದ ಬಿಸಿ ರಕ್ತದ ಯುವ ರಾಜಕಾರಣಿ ಬೊಮ್ಮಾಯಿ, 1998ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಬಹುಶಃ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದರೆ ಅವರು ಇಂದು ಬಿಜೆಪಿಯಲ್ಲಿ ಇರುತ್ತಿರಲಿಲ್ಲ ಮತ್ತು ಇಂದು ರಾಜ್ಯದ ಮುಖ್ಯಮಂತ್ರಿ ಕೂಡ ಆಗುತ್ತಿರಲಿಲ್ಲ ಅಂತಾ ಬೊಮ್ಮಾಯಿ ಯವರ ಆತ್ಮೀಯರು ಹೇಳುತ್ತಾರೆ. ಹಾಗಾಗಿ ಮೊದಲ ಸೋಲು ಯಾವತ್ತೂ ದೊಡ್ಡ ಯಶಸ್ಸಿನ ಸಿಗ್ನಲ್ ಅಂತಾರೆ ಬೊಮ್ಮಾಯಿ.

ಹುಬ್ಬಳಿ ಹುಡುಗ ಹಾವೇರಿ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದು ಹೇಗೆ?

ಬಸವರಾಜ ಬೊಮ್ಮಾಯಿ ಅವರ ತಂದೆ, ಮಾಜಿ ಸಿಎಂ, ದಿವಂಗತ ಎಸ್ ಆರ್ ಬೊಮ್ಮಾಯಿ ಅವರು ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ದಿಸುತ್ತಿದ್ದರು. ಬಸವರಾಜ್ ಬೊಮ್ಮಾಯಿ ಅವರು ಹುಬ್ಬಳಿ ಜನರ ಜೊತೆಗೆ ಆತ್ಮೀಯತೆ ಹೊಂದಿದ್ದರು. ಆದ್ರೆ 1998 ರಲ್ಲಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆ ಆದಾಗ ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ಗದಗ ಕೂಡ ಅವರು ಪ್ರತಿನಿಧಿಸುತ್ತಿದ್ದರು. ‌

ಹಾಗಾಗಿ ಶಿಗ್ಗಾವಿ ಜನರಲ್ಲಿನ ಮುಗ್ಧತೆ ಹಾಗೂ ಅವರಿಗೆ ಅವಶ್ಯಕತೆ ಇರುವ ನೀರಾವರಿ ಯೋಜನೆಯ ಬಗ್ಗೆ ಬಹಳ ಸೂಕ್ಷ್ಮವಾಗಿ ಅವತ್ತೇ ಗಮನಿಸಿದ್ದ ಬೊಮ್ಮಾಯಿ, 2008ರಲ್ಲಿ ಶಿಗ್ಗಾವಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. 2008 ರಿಂದ ಇವತ್ತಿನವರೆಗೂ ಮೂರು ಬಾರಿ ನಿರಂತರವಾಗಿ ಗೆಲುವು ಸಾಧಿಸಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಬೊಮ್ಮಾಯಿ, ನಾಲ್ಕನೆ ಬಾರಿಯೂ ಶಿಗ್ಗಾವಿ ಯಿಂದಲೇ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.

ಮುಸ್ಲಿಂ ಮತಗಳೇ ಬೊಮ್ಮಾಯಿಗೆ ಶ್ರೀ ರಕ್ಷೆ

ಹೌದು, ಮುಸ್ಲಿಂ ಸಮಯದಾಯವನ್ನ ಬಿಜೆಪಿ ನಾಯಕರು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಹಿಂದುತ್ವ ಎಂಬ ಅಜೆಂಡಾದಿಂದ ರಾಜ್ಯ ಮತ್ತು ದೇಶದಲ್ಲಿ ಅಧಿಕಾರ ದಕ್ಕಿಸುಕೊಳ್ಳುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಆದ್ರೆ, ಕರ್ನಾಟಕ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ಪಾಲಿಗೆ ಮುಸ್ಲಿಂ ಸಮಯದಾಯದ ಮತಗಳೇ ಶ್ರೀ ರಕ್ಷೆ. ಶಿಗ್ಗಾವಿ ಕ್ಷೇತ್ರದಲ್ಲಿ ಬೊಮ್ಮಾಯಿ ಮಾಡಿದ ನೀರಾವರಿ ಯೋಜನೆಯಿಂದ ಮುಸ್ಲಿಂ ಬಾಂಧವರಿಗೆ ಬಹಳಷ್ಟು ಲಾಭ ಆಗಿದೆ. ಒಂದು, ಎರಡು ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬೆಳೆ ಬೆಳೆಯುತ್ತಿದ್ದಾರೆ.

ಇನ್ನು ಸಿಎಂ ಬೊಮ್ಮಾಯಿ ಕೂಡ ಶಿಗ್ಗಾವಿ ಕ್ಷೇತ್ರದ ಮುಸ್ಲಿಂ ಸಮುದಾಯದ ಮಸೀದಿ ಹಾಗೂ ದರ್ಗಾಗಳಿಗೆ ಅನುದಾನವನ್ನು ಕೊಡುವುದರ ಮೂಲಕ ಮುಸ್ಲಿಂ ವೋಟ್ ಬ್ಯಾಂಕ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಲೇಖನ: ಸೂರಜ್ ಉತ್ತೂರೆ, ಟಿವಿ9, ಹಾವೇರಿ 

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ