ಧಾರವಾಡ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Hortti) ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಲೀ ಅಹ್ಮದ್ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿರುವ ಇನ್ಸ್ಪೆಕ್ಟರ್ ಅಮಾನತು ಮಾಡಲಾಗಿದೆ ಆದರೆ ಇಷ್ಟೇ ಸಾಲದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಸುಕಿನ 3 ಗಂಟೆಗೆ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭಾಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಸವರಾಜ ಹೊರಟ್ಟಿಯವರದ್ದು ಸಾಂವಿಧಾನಿಕ ಹುದ್ದೆ. ಅವರು ಬೆಂಗಳೂರಲ್ಲಿದ್ದಾಗ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಕ್ತಕ್ರಮದ ಭರವಸೆ ನೀಡಿದ್ದಾರೆ. ಹೊರಟ್ಟಿ ನಮ್ಮ ಪಕ್ಷದವರಲ್ಲ, ಆದರೆ ನಮ್ಮ ಸಭಾಪತಿ. ಈಗ ನಾವು ಧ್ವನಿ ಎತ್ತಿದ್ದೇವೆ. ಸೋಮವಾರದೊಳಗೆ ಕ್ರಮ ತೆದುಕೊಳ್ಳಲಾಗುವುದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಎಸ್ಪಿ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪುನಃ ಹೋರಾಟ ಮಾಡುತ್ತೇವೆ. ಸಭಾಪತಿ ಮೇಲೆ ಪ್ರಕರಣ ದಾಖಲಿಸುವಾಗ ಸರ್ಕಾರದ ಅನುಮತಿ ಪಡೆಯಬೇಕಿತ್ತು ಎಂದು ಅವರು ತಿಳಿಸಿದರು.
ಹೊರಟ್ಟಿ ನಮ್ಮ ಪಕ್ಷದವರಲ್ಲ. ಆದರೆ ಅವರು ನಮ್ಮ ಸಭಾಪತಿ. ಹೀಗಾಗಿ ನಾವು ಧ್ವನಿ ಎತ್ತಿದ್ದೇವೆ. ಈಗ ಇನ್ಸಪೆಕ್ಟರ್ ಅಮಾನತು ಮಾಡಿದ್ದಾರೆ. ನಾವು ಎಸ್ಪಿ ಅಮಾನತು ಆಗಬೇಕೆಂದು ಆಗ್ರಹಿಸುತ್ತಿದ್ದೇವೆ. ಎಸ್ಪಿ ವಿರುದ್ಧ ಕ್ರಮ ಜರುಗಿಸದಿದ್ದರೆ ಪುನಃ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಎಸ್ಪಿ ಅವರದು ತಪ್ಪು ಎಂದು ನಾನು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಪಕ್ಷ ತೊರೆಯುವ ಕುರಿತು ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂ ನಮ್ಮ ಪಕ್ಷದ ನಾಯಕರು. 2007ರಲ್ಲಿ ಪಕ್ಷಕ್ಕೆ ಬಂದರು. ಅವರಿಗೆ 2013ರಲ್ಲಿ ಭದ್ರಾವತಿಯ ಸಂಗಮೇಶ ಅವರ ಬದಲಿಗೆ ಟಿಕೆಟ್ ಕೊಡಲಾಗಿತ್ತು. ಅದರ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ಅದಾದ ಬಳಿಕ ಅನೇಕ ಹುದ್ದೆಗಳನ್ನು ಅವರಿಗೆ ನೀಡಲಾಗಿದೆ. ಎರಡು ಬಾರಿ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. 2019ರಲ್ಲಿ ಎಸ್.ಆರ್. ಪಾಟೀಲರನ್ನು ತೆಗೆದು ತಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವಂತೆ ಕೇಳಿದರು. ಅದು ಸಾಧ್ಯವಿಲ್ಲವೆಂದು ಪಕ್ಷವು ಹೇಳಿತು. ಅವತ್ತಿನಿಂದ ಎರಡು ವರ್ಷ ಪಕ್ಷದ ಯಾವುದೇ ಪ್ರಚಾರಕ್ಕೆ ಅವರು ಬರಲಿಲ್ಲ. ಆದರೂ ಅವರು ಪಕ್ಷ ಬಿಡೋದಿಲ್ಲ ಎನ್ನುವ ವಿಶ್ವಾಸವಿದೆ. ಪಕ್ಷವು ಅವರಿಗೆ ಏನು ಕೊಡಬೇಕೋ ಅದನ್ನೆಲ್ಲ ಕೊಟ್ಟಿದೆ ಎಂದರು.
ಇದನ್ನೂ ಓದಿ: NPS: ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಲು ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯ
ಇದನ್ನೂ ಓದಿ: ಸಭಾಪತಿ ವಿರುದ್ಧ ಎಫ್ಐಆರ್: ಬೆಳಗಿನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ
Published On - 12:59 pm, Sat, 12 March 22