ಹುಬ್ಬಳ್ಳಿ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1635 ಗ್ರಾಂ ಗಾಂಜಾ ವಶ, ಇಬ್ಬರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 15, 2023 | 7:26 PM

ನಗರದ ಬೆಂಡಿಗೇರಿಯಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹ‌ ಮಾಡಿದ್ದ 1635 ಗ್ರಾಂ ಗಾಂಜಾವನ್ನು ಬೆಂಡಿಗೇರಿ ಪೊಲೀಸರು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ಅಖಿಲೇಶ್ ಯರಮಸಾಳ, ಪ್ರಭು ಗೆಜ್ಜೆಹಳ್ಳಿ ಬಂಧಿತ ಆರೋಪಿಗಳು.

ಹುಬ್ಬಳ್ಳಿ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1635 ಗ್ರಾಂ ಗಾಂಜಾ ವಶ, ಇಬ್ಬರ ಬಂಧನ
ಬೆಂಡಿಗೇರಿ ಗಾಂಜಾ ಆರೋಪಿಗಳು ಅರೆಸ್ಟ್
Follow us on

ಹುಬ್ಬಳ್ಳಿ, ಡಿ.15: ನಗರದ ಬೆಂಡಿಗೇರಿಯಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹ‌ ಮಾಡಿದ್ದ 1635 ಗ್ರಾಂ ಗಾಂಜಾ(ganja) ವನ್ನು ಬೆಂಡಿಗೇರಿ ಪೊಲೀಸರು(Bendigeri Police) ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ಅಂದಾಜು 40 ಸಾವಿರ ರೂ. ಮೌಲ್ಯದ ಗಾಂಜಾ ಇದಾಗಿದೆ. ಅಖಿಲೇಶ್ ಯರಮಸಾಳ, ಪ್ರಭು ಗೆಜ್ಜೆಹಳ್ಳಿ ಬಂಧಿತ ಆರೋಪಿಗಳು.

ಇನ್ನು ಮನೆ ಪರಿಶೀಲನೆ ವೇಳೆ ಅಖಿಲೇಶ್ ಯರಮಸಾಳ ಬಳಿಯಿದ್ದ 1250 ಗ್ರಾಂ ಗಾಂಜಾ ಹಾಗೂ ಕಬ್ಬಿಣದ 4 ತಲ್ವಾರ್,​​​ 1ಕೊಡಲಿ ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಆರೋಪಿ ಪ್ರಭು ಗೆಜ್ಜಿಹಳ್ಳಿ ಬಳಿ 385 ಗ್ರಾಂ ಗಾಂಜಾಯಿದ್ದು ಜಪ್ತಿ ಮಾಡಲಾಗಿದೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಗಾಂಜಾ ಆರೋಪಿಗಳ ಜೊತೆ ಶಾಮೀಲಾಗಿ ವಾಹನ ಮಾರಾಟ ಆರೋಪ: ಇನ್ಸ್‌ಪೆಕ್ಟರ್‌ ಅಮಾನತು ಆದೇಶ ತಡೆಹಿಡಿದ ಕೆಎಟಿ

ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ, 2 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಬೈಕ್ ವಶಕ್ಕೆ

ಹಾವೇರಿ: ಮನೆ ಕಳ್ಳತನ ಮಾಡುತ್ತಿದ್ದ 2 ಜನ ಕಳ್ಳರನ್ನು ಹಾವೇರಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ನಡೆದಿದೆ. ಬಂಧಿತರಿಂದ ಬರೊಬ್ಬರಿ 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್​ನ್ನು ವಶಕ್ಕೆ ಪಡೆಯಲಾಗಿದೆ. ನವೀದ್ ಅಲಿಯಾಸ್ ನವೀದ ಅಲಿ(52),  ರಮೇಶ ಅಲಿಯಾಸ್ ಪಾಪ್ಪು (40) ವರ್ಷ ಬಂಧಿತ ಇಬ್ಬರು ಆರೋಪಿಗಳು. ಕಳೆದ ಒಂದು ವಾರದ ಹಿಂದೆ ಗೌರಾಪುರ ಗ್ರಾಮದ ಹೊನ್ನಪ್ಪ ಎಂಬುವರ ಮನೆ ಕಳ್ಳತನ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಒಂದೇ ವಾರದಲ್ಲಿ ಕಳ್ಳರನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Fri, 15 December 23