ಧಾರವಾಡ: ಇಂದು (ಜೂ.28) ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ (Bengaluru-Dharwad Vande Bharat) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಧ್ಯಪ್ರದೇಶದ ಭೋಪಾಲ್ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 10:30 ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಚಾಲನೆ ಬಳಿಕ ಧಾರವಾಡ (Dharwad) ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯುತ್ತದೆ. ನಂತರ ಧಾರವಾಡದಿಂದ ಬೆಂಗಳೂರಿಗೆ (Bengaluru) ಹೊರಡುತ್ತದೆ. ಇದು ರಾಜ್ಯದೊಳಗೆ ಸಂಚರಿಸಲಿರುವ ಮೊದಲ ರೈಲಾಗಿದೆ. ಈ ರೈಲು ಸೇರಿದಂತೆ ಪ್ರಧಾನಿ ಮೋದಿಯವರು ಏಕಕಾಲಕ್ಕೆ ಐದು ವಂದೇ ಭಾರತ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಜೂನ್.28ರ ಪ್ರಯಾಣಕ್ಕೆ ಸೀಟ್ ಬುಕ್ಕಿಂಗ್ ಆರಂಭವಾಗಿದೆ. ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬಹುತೇಕ ಸೀಟ್ಗಳು ಬುಕ್ ಆಗಿವೆ. ಜೂನ್ 28 ರಂದು ಬೆಂಗಳೂರಿನಿಂದ ಧಾರವಾಡಕ್ಕೆ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೀಟ್ ಬುಕ್ಕಿಂಗ್ ಬೆಳಿಗ್ಗೆ 8 ಗಂಟೆಗೆ ಆರಂಭವಾಯಿತು. ಮೊದಲ 20 ನಿಮಿಷಗಳಲ್ಲೇ ಶೇ 85 ರಷ್ಟು ಸೀಟುಗಳು ಬುಕ್ ಆಗಿವೆ. ಹಾಗೇ ಧಾರವಾಡದಿಂದ ಬೆಂಗಳೂರಿಗೆ ಹೊರಡುವ ವಂದೇ ಭಾರತ್ ರೈಲಿನ ಸೀಟ್ಗಳು ಕೂಡ ಬುಕ್ಕಿಂಗ್ ಆರಂಭವಾದ ಮೊದಲ 20 ನಿಮಿಷಗಳಲ್ಲೇ ಬಹುತೇಕ ಫುಲ್ ಆಗಿವೆ.
ಈ ರೈಲು 8 ಬೋಗಿಗಳನ್ನು ಹೊಂದಿದ್ದು, 530 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಈ ರೈಲು ವಾರದಲ್ಲಿ 6 ದಿನ ಧಾರವಾಡ-ಬೆಂಗಳೂರು ಮಾರ್ಗದಲ್ಲಿ ಸಂಚಾರ ಮಾಡುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:39 am, Tue, 27 June 23