Accident: ಡಿವೈಡರ್​ಗೆ ಗುದ್ದಿ ಇಬ್ಬರು ಯುವಕರು ಸಾವು, ಎದೆ ಝಲ್ ಎನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ ನಡೆದಿದ್ದ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ನೋಡಿದರೆ ಎದೆ ಝಲ್ ಎನ್ನುವಂತಿದೆ. ಈ ಸಂಬಂಧ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Accident: ಡಿವೈಡರ್​ಗೆ ಗುದ್ದಿ ಇಬ್ಬರು ಯುವಕರು ಸಾವು, ಎದೆ ಝಲ್ ಎನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಡಿವೈಡರ್ಗೆ ಗುದ್ದಿ ಇಬ್ಬರು ಯುವಕರು ಸಾವು, ಎದೆ ಝಲ್ ಎನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Edited By:

Updated on: Aug 27, 2021 | 10:08 AM

ಹುಬ್ಬಳ್ಳಿ: ಆಗಸ್ಟ್ 25ರಂದು ನಡೆದ ಎದೆ ಝಲ್ ಎನ್ನೋ ಬೈಕ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ವೇಳೆ ವೇಗವಾಗಿ ಬಂದು ಡಿವೈಡರ್ಗೆ ಗುದ್ದಿ ಇಬ್ಬರು ಯುವಕರು ಪ್ರಾಣ ಬಿಟ್ಟಿದ್ದರು. ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ ನಡೆದಿದ್ದ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ನೋಡಿದರೆ ಎದೆ ಝಲ್ ಎನ್ನುವಂತಿದೆ. ಈ ಸಂಬಂಧ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಪಲ್ಟಿ, ಕ್ಲೀನರ್ ಸ್ಥಳದಲ್ಲೇ ಸಾವು
ಕೊಡಗಿನಲ್ಲಿ ಕಂಟೈನರ್ ಲಾರಿ‌ ಮಗುಚಿ ಕ್ಲೀನರ್ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಿಂದ‌ ಪುತ್ತೂರಿಗೆ ಚಾಕ್ಲೆಟ್ ಸಾಗಿಸುತ್ತಿದ್ದ ಲಾರಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಾಳೆಕಾಡು ಬಳಿ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾಡಹಗಲೇ ಹಣ ಎಗರಿಸಿದ ದುಷ್ಕರ್ಮಿಗಳು
ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್ ನಿಂದ ಹಾಡಹಗಲೇ ಹಣ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಾಗಲಗುಂಟೆ ಎಂಇಐ (MEI) ಕೆನರಾ ಬ್ಯಾಂಕ್ ಮುಂದೆ ಈ ಘಟನೆ ನಡೆದಿದೆ. ಬಿಎಂಟಿಸಿ (BMTC) ಸಂಸ್ಥೆಯ ನಿವೃತ್ತ ಕಂಡಕ್ಟರ್ ನಾಗೇಶ್ ಅವರಿಗೆ ಸೇರಿದ 2 ಲಕ್ಷ ಹಣ ಇದಾಗಿತ್ತು.

ತುಮಕೂರು ರಸ್ತೆಯ 8ನೇ ಮೈಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ನಾಗೇಶ್ ಅವರು ಪಿ.ಎಫ್. ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಇವರನ್ನೇ ಹಿಂಬಾಲಿಸಿ ಬಂದು ಕೆನರಾ ಬ್ಯಾಂಕ್ ಬಳಿ ಬೈಕ್ ನಿಲ್ಲಿಸಿದ್ದಾಗ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ಪಲ್ಸರ್ ಬೈಕಿನಲ್ಲಿ ಬಂದಿದ್ದು, ಕುಕೃತ್ಯ ಎಸಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಉಡುಪಿ: ಅಪಘಾತವಾದರೂ ಆಂಬುಲೆನ್ಸ್​ನಲ್ಲಿಯೇ ಕಾಲೇಜಿಗೆ ಆಗಮಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

Published On - 10:04 am, Fri, 27 August 21