ಜಾನುವಾರುಗಳಿಗೆ ನಾನು ಇಂಜೆಕ್ಷನ್ ಮಾಡಬಹುದೇ? ಸಚಿವ ಸಂತೋಷ ಲಾಡ್​ ಪ್ರಶ್ನೆಗೆ ಅವಕ್ಕಾದ ಪಶುವೈದ್ಯ

|

Updated on: Jun 06, 2023 | 10:12 PM

ಜಾನುವಾರುಗಳಿಗೆ ನಾನು ಇಂಜೆಕ್ಷನ್ ಮಾಡಬಹುದೇ ಎಂಬ ಕಾರ್ಮಿಕ ಸಚಿವ ಸಂತೋಷ್‌ ಲಾಡ್​ ಪ್ರಶ್ನೆಗೆ ಪಶುವೈದ್ಯರು ಅವಕ್ಕಾಗಿದ್ದಾರೆ. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಮಾಷೆಯ ಸಂಗತಿ ನಡೆದಿದೆ.

ಜಾನುವಾರುಗಳಿಗೆ ನಾನು ಇಂಜೆಕ್ಷನ್ ಮಾಡಬಹುದೇ? ಸಚಿವ ಸಂತೋಷ ಲಾಡ್​ ಪ್ರಶ್ನೆಗೆ ಅವಕ್ಕಾದ ಪಶುವೈದ್ಯ
ಕಾರ್ಮಿಕ ಸಚಿವ ಸಂತೋಷ್‌ ಲಾಡ್
Follow us on

ಧಾರವಾಡ: ಜಾನುವಾರುಗಳಿಗೆ ನಾನು ಇಂಜೆಕ್ಷನ್ ಮಾಡಬಹುದೇ ಎಂಬ ಕಾರ್ಮಿಕ ಸಚಿವ ಸಂತೋಷ್‌ ಲಾಡ್ (Santosh Lad)​ ಪ್ರಶ್ನೆಗೆ ಪಶುವೈದ್ಯರು ಅವಕ್ಕಾಗಿದ್ದಾರೆ. ಧಾರವಾಡ ತಾಪಂ ಸಭಾ ಭವನದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಮಾಷೆಯ ಸಂಗತಿ ನಡೆದಿದೆ. ಜಾನುವಾರುಗಳ ವ್ಯಾಕ್ಸಿನೇಷನ್​ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದು, ಈ ವೇಳೆ ಜಾನುವಾರುಗಳಿಗೆ ಇಂಜೆಕ್ಷನ್​ ನೀಡಲು ವಿಧಾನ ಇದೆಯಾ, ನಾವೂ ಇಂಜೆಕ್ಷನ್ ಹಾಕಬಹುದಾ ಎಂದಿದ್ದಾರೆ. ನಿಮಗೆ ಇಂಜೆಕ್ಷನ್ ಕೊಡಲು ಅಧಿಕಾರವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ನಮ್ಮ ಇಲಾಖೆಯ ಸೂಕ್ತ ಸಿಬ್ಬಂದಿಯೇ ಇಂಜಕ್ಷನ್ ಕೊಡಬೇಕು. ಯಾರು ಬೇಕಾದವರು ಇಂಜೆಕ್ಷನ್ ಕೊಡುವುದು ನಿಯಮಬಾಹಿರ ಎಂದಿದ್ದಾರೆ. ಹಾಗಾದರೆ ನಾನು ಉಪಯೋಗಕ್ಕೆ ಬಾರದವ ಎಂದು ಲಾಡ್​ ನಕ್ಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ: ಡಿಸಿಎಂ ಡಿಕೆ ಶಿವಕುಮಾರ್

ಮುಖ ಮುಚ್ಚಿಕೊಂಡು ನಕ್ಕ ಸಂತೋಷ್‌ ಲಾಡ್​ 

ಪ್ರತಿ ತಿಂಗಳು ಒಂದಿಲ್ಲೊಂದು ವ್ಯಾಕ್ಸಿನ್ ಇದ್ದೇ ಇರುತ್ತೆ. ನೀವು ಮನೆ ಮನೆಗೆ ಹೋಗಿ ವ್ಯಾಕ್ಸಿನ್ ಹಾಕ್ತಿರಾ ಎಂದು ಪ್ರಶ್ನಿಸಿದರು. ಧಾರವಾಡ ತಾಲೂಕಿನಲ್ಲಿ ಇದಕ್ಕಾಗಿ 72 ಜನ ಇದ್ದಾರೆ. ನಾನು ಇಷ್ಟೆಲ್ಲ ಸುತ್ತುತ್ತೇನೆ. ಎಲ್ಲಿಯೂ ಲಸಿಕೆ ಹಾಕೋದನ್ನ ನೋಡಿಲ್ಲ. 20 ವರ್ಷಗಳಲ್ಲಿ ಒಮ್ಮೆಯೂ ನೋಡಿಲ್ಲ ಆ ಪುಣ್ಯಾತ್ಮರು ಎಲ್ಲಿದ್ದಾರೆಂದು. ನಾನು ಅವರಿಗೆ ಕೈ ಸಹ ಮುಗಿದಿಲ್ಲ. ಆಗ ಮುಂದಿನ ಜಾನುವಾರುಗಳಿಗೆ ಲಸಿಕೆ ಹಾಕೋ ಉದ್ಘಾಟನೆಗೆ ನಿಮ್ಮನ್ನೇ ಕರೆಯುತ್ತೇವೆ ಸರ್​ ಎಂದು ಅಧಿಕಾರಿಯ ಆಹ್ವಾನ ಕೇಳಿ ಸಂತೋಷ್‌ ಲಾಡ್ ಮುಖ ಮುಚ್ಚಿಕೊಂಡು ನಕ್ಕರು.

ಟೇಬಲ್ ಕೆಳಗೆ ಹಾಗೂ ಟೇಬಲ್ ಮೇಲೆ ಹಣ ಪಡೆಯಬಾರದು

ತಮಾಷೆ ಬಳಿಕ ಗರಂ ಆದ ಸಚಿವರು ಈ ವೇಳೆ ಅಧಿಕಾರಿಗಳಿಗೆ ಟೇಬಲ್ ಕೆಳಗೆ ಹಾಗೂ ಟೇಬಲ್ ಮೇಲೆ ಹಣ ಪಡೆಯದಂತೆ ಎಚ್ಚರಿಕೆ ನೀಡಿದರು. ನನ್ನ ಕಚೇರಿಯಿಂದ ಯಾರೇ ನಿಮಗೆ ಕರೆ ಮಾಡಿ ಟೇಬಲ್ ಕೆಳಗಿನ ವಿಷಯ ಮಾತಾಡಿದರೆ ತಕ್ಷಣ ಕರೆ ಮಾಡಿ ಎಂದು ತಮ್ಮ ಮೊಬೈಲ್ ನಂಬರ್ ನೀಡಿದರು. ರಾತ್ರಿ 10 ಗಂಟೆಯ ನಂತರ ಕೂಡಾ ಕರೆ ಮಾಡಬಹುದು. ನನಗೆ ಕುಡಿಯೊ ಅಭ್ಯಾಸ ಇಲ್ಲಾ. ಹೀಗಾಗಿ ನಾನು ಯಾರಿಗೂ ಬಯ್ಯೋದಿಲ್ಲ ಎಂದರು.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ, ಬಾಡಿಗೆದಾರರಲ್ಲಿ ಗೊಂದಲ ಮೂಡಿಸುತ್ತಿರುವುದು ಬಿಜೆಪಿಯವರು: ಗೃಹ ಸಚಿವ ಜಿ ಪರಮೇಶ್ವರ್​ ಕಿಡಿ

ದೇವರು ಒಳ್ಳೆ ಅವಕಾಶ ಕೊಟ್ಟಿದ್ದಾನೆ

ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದಿದ್ದೇವೆ. 5 ವರ್ಷ ಇದ್ದು ಹೋಗ್ತಾನೆ ಎಂದು ಬೈಕೊಂಡರೂ ಪರವಾಗಿಲ್ಲ. ನನ್ನ ಫಿಲಾಸಫಿ ನಿಮಗೆ ಇಷ್ಟ ಆಗಲಿಕ್ಕಿಲ್ಲ. ನಮ್ಮಲ್ಲಿ ಸ್ಪಿರಿಟ್ ಹಾಗೂ ಪ್ಯಾಶನ್ ಇಲ್ಲಾ ಅಂದ್ರೆ ಕೆಲಸ ಮಾಡುವುದು ಕಷ್ಟ. ನಿಮ್ಮಿಂದ ನಾನು ನಿರೀಕ್ಷೆ ಇಟ್ಟಿದ್ದೇನೆ. ನನ್ನ ಬಳಿ ಯಾವುದೇ ರೆಕಮೆಂಡೇಷನ್ ತರಬೇಡಿ. ನನಗೆ ನಿಮ್ಮ ಬೆಂಬಲ ಬೇಕು. ಅದನ್ನ ನಾನು‌ ನಿರೀಕ್ಷೆ ಮಾಡುತ್ತೇನೆ. ನಾವು ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ. ದೇವರು ಒಳ್ಳೆ ಅವಕಾಶ ಕೊಟ್ಟಿದ್ದಾನೆ. ಅದಕ್ಕೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:10 pm, Tue, 6 June 23