ಹುಬ್ಬಳ್ಳಿ/ ಬೆಂಗಳೂರು: ಸ್ಟಡಿ ಸೆಂಟರ್ (Study Center) ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ (Duplicate marks card) ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ (Hubli) KIOS ಕಚೇರಿ ಮೇಲೆ ಸಿಸಿಬಿ (CCB) ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ಪ್ರಭುರಾಜ್, ಮೈಲಾರಿ, ಮೊಹಮ್ಮದ್ ತೈಹೀದ್ ಬಂಧಿತ ಆರೋಪಿಗಳು. ಬಂಧಿತರಿಂದ ಪದವಿ, ಎಸ್ಎಸ್ಎಲ್ಸಿ, ಪಿಯು ಮಾರ್ಕ್ಸ್ ಕಾರ್ಡ್ಗಳು, ಉತ್ತರ ಪ್ರತಿಗಳು, ಕಲರ್ ಪ್ರಿಂಟರ್ ಮತ್ತು ಜೆರಾಕ್ಸ್ ಮಷಿನ್ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. KIOS ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಸ್ಟಡಿ ಸೆಂಟರ್ ನಡೆಸುತ್ತಿದ್ದರು. ಪೊಲೀಸರು ದಾಳಿ ವೇಳೆ 7100 ಅಂಕಪಟ್ಟಿ, 5500 ಉತ್ತರ ಪ್ರತಿಗಳು, 25 ಅಡ್ಮಿಷನ್ ರಿಜಿಸ್ಟರ್ಗಳು ಪತ್ತೆಯಾಗಿವೆ.
ಇದನ್ನೂ ಓದಿ: ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ ಮೇಲೆ ಇಡಿ ದಾಳಿ
ಸಿಸಿಬಿ ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಕುಲ್ ರೋಡ್ ಹೊಸ ಬಸ್ ನಿಲ್ದಾಣದ ಬಳಿ 11.86 ಲಕ್ಷ ಮೌಲ್ಯದ ಸುಮಾರು 2 ಕೆಜಿ ಅಪೀಮ್ ಪತ್ತೆಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮೂಲಾರಾಮ್ ಹಾಗೂ ಜಯರಾಮ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 2 ಕೆಜಿ ದ್ರವ ರೂಪದ ಅಫೀಮು, ಮೂರು ಮೊಬೈಲ್ ಹಾಗೂ 4500 ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ