Karnataka Assembly Elections 2023: ಇಂದು ಕಿಚ್ಚ ಸುದೀಪ್​ ಪ್ರಚಾರ ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ

ನಟ ಕಿಚ್ಚ ಸುದೀಪ್​ ಇಂದು (ಏ.28) ಧಾರವಾಡ ಮತ್ತು ಗದಗನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

Karnataka Assembly Elections 2023: ಇಂದು ಕಿಚ್ಚ ಸುದೀಪ್​ ಪ್ರಚಾರ ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ
ನಟ ಸುದೀಪ್​
Follow us
ವಿವೇಕ ಬಿರಾದಾರ
|

Updated on:Apr 28, 2023 | 7:03 AM

ಧಾರವಾಡ: ಕರ್ನಾಟಕ ವಿಧಾಸಭಾ ಚುನಾವಣೆ (Karnataka Assembly Election 2023) ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಬ್ಬರದ ಪ್ರಚಾರ, ಆಶ್ವಾಸನೆಗಳು ಮತ್ತು ಟೀಕೆ-ಟಿಪ್ಪಣಿಗಳಿಗೆ ಎಲ್ಲೆ ಇಲ್ಲದೆ ಹೊರಬರುತ್ತಿವೆ. ಬಿಜೆಪಿಯ ಸ್ಟಾರ್​ ಪ್ರಚಾರಕರು ರಾಜ್ಯಾದ್ಯಂತ ಸುತ್ತಿ ಮತಬೇಟೆ ನಡೆಸಿದ್ದಾರೆ. ಈ ಪ್ರಚಾರಕ್ಕೆ ಚಂದನವನದ ಸ್ಟಾರ್​​​ ನಟರೂ ಕೂಡ ಕೈ ಜೋಡಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (Basavaraj Bommai) ಪರವಾಗಿ ನಿಂತಿರುವ ನಟ ಕಿಚ್ಚ ಸುದೀಪ್ (Sudeep)​ ಬಿಜೆಪಿ (BJP) ಅಭ್ಯರ್ಥ್ಯಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ. ನಿನ್ನೆ (ಏ.27) ರಂದು ಹಾವೇರಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದರು. ಇಂದು (ಏ.28) ಪಕ್ಕದ ಜಿಲ್ಲೆಗಳಾದ ಧಾರವಾಡ (Dharwad) ಮತ್ತು ಗದಗನಲ್ಲಿ (Gadag) ಮತಬೇಟೆ ನಡೆಸಲಿದ್ದಾರೆ.

​ಮೊದಲು ಧಾರವಾಡ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿರುವ ನಟ ಕಿಚ್ಚಾ ಸುದೀಪ್​ ರಾಜ್ಯದ ಗಮನ ಸೆಳೆದಿರುವ ಮತ್ತು ಸಾಕಷ್ಟು ಚರ್ಚೆಯಾಗುತ್ತಿರುವ ಹುಬ್ಬಳಿ-ಧಾರವಾಡ ಕೇಂದ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ನಂತರ ಕಲಘಟಗಿ, ಮಧ್ಯಾಹ್ನ ಧಾರವಾಡ ಮತ್ತು ಗದಗನಲ್ಲಿ ಮತಯಾಚಿಸಲಿದ್ದಾರೆ.

ನಟ ಕಿಚ್ಚ ಸುದೀಪ್ ಪ್ರಚಾರದ ವೇಳಾಪಟ್ಟಿ​​

1. ಹುಬ್ಬಳಿ-ಧಾರವಾಡ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್​ ಟೆಂಗಿನಕಾಯಿ ಪರ ಬೆಳಗ್ಗೆ 9.30ಕ್ಕೆ ಮತಯಾಚಿಸಲಿದ್ದಾರೆ 2. ಕಲಘಟಗಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಚಾರ ಆರಂಭಿಸುವ ನಟ ಸುದೀಪ್​​ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಮತಯಾಚಿಸಲಿದ್ದಾರೆ. 3. ಮಧ್ಯಾಹ್ನ 12.20ಕ್ಕೆ ಧಾರವಾಡ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರ ಜೊತೆ ನಟ ಸುದೀಪ್ ರೋಡ್ ಶೋ ನಡೆಸಲಿದ್ದಾರೆ 4. ಮಧ್ಯಾಹ್ನ 3 ಗಂಟೆಗೆ ಗದಗದಲ್ಲಿ ರೋಡ್ ಶೋ ನಟ ಸುದೀಪ್‌ ನಡೆಸಲಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:03 am, Fri, 28 April 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ