ಸ್ವ ಉದ್ಯೋಗ ಬಯಸುವ ಯುವಕರಿಗೆ ಕೇಂದ್ರದ ಹಲವು ಯೋಜನೆಗಳು ಸಹಕಾರಿ: ಪ್ರಲ್ಹಾದ್ ಜೋಶಿ

| Updated By: ವಿವೇಕ ಬಿರಾದಾರ

Updated on: Oct 02, 2022 | 7:44 PM

ಜನಸಾಮಾನ್ಯರು ಸ್ವಯಂ ಉದ್ಯೋಗ ಮಾಡಲು ಮತ್ತು ಸ್ವಾವಲಂಬನೆಯ ಜೀವನ‌ ರೂಪಿಸಿಕೊಳ್ಳಲೆಂದು ಕೇಂದ್ರ ಸರಕಾರ ದೀನದಯಾಳ್ ಅಂತ್ಯೋದಯ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಸ್ವ ಉದ್ಯೋಗ ಬಯಸುವ ಯುವಕರಿಗೆ ಕೇಂದ್ರದ ಹಲವು ಯೋಜನೆಗಳು ಸಹಕಾರಿ: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರಿಂದ ಐವರು ಯುವಕರಿಗೆ ಆಟೋ ರಿಕ್ಷಾ ವಿತರಣೆ
Follow us on

ಧಾರವಾಡ: ಜನಸಾಮಾನ್ಯರು ಸ್ವಯಂ ಉದ್ಯೋಗ ಮಾಡಲು ಮತ್ತು ಸ್ವಾವಲಂಬನೆಯ ಜೀವನ‌ ರೂಪಿಸಿಕೊಳ್ಳಲೆಂದು ಕೇಂದ್ರ ಸರಕಾರ ದೀನದಯಾಳ್ ಅಂತ್ಯೋದಯ ಯೋಜನೆಯನ್ನು (Deendayal Antyodaya Yojana) ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹುಬ್ಬಳ್ಳಿಯಲ್ಲಿ (Hubli) ಹೇಳಿದ್ದಾರೆ. ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಇಂದು ದೀನದಯಾಳ್ ಅಂತ್ಯೋದಯ ಯೋಜನೆಗೆ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿ ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಷನ್ ಸ್ವಯಂ ಉದ್ಯೋಗದ ಯೋಜನೆಯ ಅಡಿ ಸಾಂಕೇತಿಕವಾಗಿ ಐವರು ಯುವಕರಿಗೆ ಸಚಿವರು ಆಟೋ ರಿಕ್ಷಾ ವಿತರಣೆ ಮಾಡಿದರು.

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿರುವ ಖಾದಿ ಬಂಡಾರಕ್ಕೆ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿ ಖಾದಿ ಬಟ್ಟೆ ಖರೀದಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನೋತ್ಸವದ ಅಂಗವಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ “ಸೇವಾ ಪಾಕ್ಷಿಕ” ಅಭಿಯಾನದ ಅಂಗವಾಗಿ ಖಾದಿ ಬಟ್ಟೆ ಬಳಕೆ ಕುರಿತು ಧಾರವಾಡದಲ್ಲಿ ಈಗಾಗಲೇ ಅಭಿಯಾನ ನಡೆಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಖಾದಿ ಉತ್ಪನ್ನಗಳನ್ನ ಬಳಸುವಂತೆ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಖಾದಿ ಬಟ್ಟೆಗಳು ನಮ್ಮ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿವೆ. ಖಾದಿ ಉತ್ಪನ್ನಗಳನ್ನ ಹೆಚ್ಚು ಬಳಸುವುದರಿಂದ ಸ್ಥಳೀಯ ಉದ್ದಿಮೆಗಳಿಗೆ ಕೂಡ ಪ್ರೋತ್ಸಾಹ ನೀಡಿದಂತಾಗುತ್ತದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ವೋಕಲ್ ಫಾರ್ ಲೋಕಲ್ ಯೋಜನೆಯಡಿಯಲ್ಲಿ ಕೂಡ ಇದು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಸಾರ್ವಜನಿಕರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಖಾದಿ ಬಟ್ಟೆಗಳನ್ನು ಬಳಸುವ ಮೂಲಕ ಸ್ಥಳೀಯ ಉದ್ದಿಮೆಗಳಿಗೆ ಪ್ರೋತ್ಸಾಹಿಸುವಂತೆ ಸಚಿವ ಪ್ರಲ್ಹಾದ್ ಜೋಶಿ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ