ಹುಬ್ಬಳ್ಳಿ, ಮಾರ್ಚ್.04: ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ (Hubli Siddharoodha Mutt) ಮಠದ ಟ್ರಸ್ಟ್ ಕಮಿಟಿ ಮತ್ತು ಭಕ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಶಿವರಾತ್ರಿ ಉತ್ಸವ ಆಚರಣೆ ಹಾಗೂ ಲೆಕ್ಕಪತ್ರ ಮಂಡನೆ ವಿಚಾರಕ್ಕೆ ಸಭೆ ಕರೆಯಲಾಗಿತ್ತು. ಈ ವೇಳೆ ಭಕ್ತರು ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದು ಮಠದ ಟ್ರಸ್ಟ್ ಮಾಹಿತಿ ನೀಡಲು ನಿರಾಕರಿಸಿದೆ. ಈ ವೇಳೆ ಭಕ್ತರು ಹಾಗೂ ಟ್ರಸ್ಟ್ ಕಮಿಟಿ ನಡುವೆ ಗಲಾಟೆ, ವಾಗ್ವಾದ ನಡೆದಿದೆ.
ಸಿದ್ಧಾರೂಢ ಸ್ವಾಮಿಗಳ ಮಠದ ಟ್ರಸ್ಟ್ ಕಮಿಟಿ ಕರೆದಿದ್ದ ಸಭೆಯಲ್ಲಿ ಭಾಗಿಯಾದ ಭಕ್ತರು, ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಖರ್ಚುವೆಚ್ಚದ ಬಗ್ಗೆ ಮಾಹಿತಿ ಕೇಳಿದರು. ಕಳಪೆ ಕಾಮಗಾರಿ, ಹಣ ದುರ್ಬಳಕೆ, ಅನವಶ್ಯಕ ಕರ್ಚಿನ ಕುರಿತು ಭಕ್ತರು ಆಕ್ಷೇಪ ಹೊರ ಹಾಕಿದರು. ಆದರೆ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಭಕ್ತರಿಗೆ ಉತ್ತರ ನೀಡಲು ನಿರಾಕರಿಸಿತು. ಟ್ರಸ್ಟ್ ಕಮಿಟಿ ಅಧ್ಯಕ್ಷರು ಮತ್ತು ಧರ್ಮದರ್ಶಿಗಳ ನಡೆಗೆ ಭಕ್ತರು ಆಕ್ರೋಶ ಹೊರ ಹಾಕಿದ್ದು ಸಭೆಯಲ್ಲಿ ಪರಸ್ಪರ ವಾಗ್ವಾದ, ಗದ್ದಲ ನಡೆಯಿತು.
ಭಕ್ತರ ಒತ್ತಡ ಹೆಚ್ಚುತ್ತಿದ್ದಂತೆ ಟ್ರಸ್ಟ್ ಕಮಿಟಿ ಸಭೆ ರದ್ದು ಪಡಿಸಿತು. ಸಭೆ ಮಾಡಲ್ಲ ಏನ್ಮಾಡ್ತಿರೋ ಮಾಡ್ಕೊಳ್ಳಿ ಎಂದು ಧರ್ಮದರ್ಶಿ ಅವಾಜ್ ಹಾಕಿದ್ದಾರೆ. ಎರಡು ದಿನದಲ್ಲಿ ಸಭೆ ನಡೆಸಿ ಭಕ್ತರ ಪ್ರಶ್ನೆಗೆ ಉತ್ತರ ಕೊಡಬೇಕು. ಕೊಡದಿದ್ದರೆ ಮಠದ ಎದುರು ಸತ್ಯಾಗ್ರಹ ಮಾಡುವುದಾಗಿ ಭಕ್ತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದಾರೂಢ ಮಠಕ್ಕೆ ಬಂದವರ ಮೇಲೆ ಕಲ್ಲು ತೂರಿದ್ರಾ? ಅನ್ಯ ಕೋಮಿನ ಜನರ ವಿರುದ್ಧ ಭಕ್ತರ ಆರೋಪ
ರಾಯಚೂರು ಜಿಲ್ಲಾ ಮಾನ್ವಿ ತಾಲ್ಲೂಕಿನ ನಿರಮಾನ್ವಿ ಗ್ರಾಮದಲ್ಲಿ ಯಲ್ಲಮ್ಮದೇವಿ ಜಾತ್ರೆಗೆ ಬಂದಿದ್ದ ಯುವಕ ಅನುಮಾಸ್ಪದವಾಗಿ ಕೊಲೆಯಾಗಿದ್ದಾನೆ. ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಸುರೇಶ್, ಫೆಬ್ರವರಿ 29ರ ಮಧ್ಯಾಹ್ನ ಊರ ಹೊರಭಾಗದ ಬೆಟ್ಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದೀಗ ಸ್ನೇಹಿತರು ಹಾಗೂ ಸೋದರ ಸಂಬಂಧಿ ದೇವರಾಜ್ನನ್ನ ವಿಚಾರಣೆಗೆ ಒಳಪಡಿಸಲಾಗಿದೆ.
ರಸ್ತೆದಾಟುತ್ತಿದ್ದ ಮಹಿಳೆ ಮೇಲೆ ನೋಡನೋಡ್ತಿದ್ದಂತೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹರಿದಿದೆ. ಭದ್ರಾವತಿ KSRTC ಬಸ್ ನಿಲ್ದಾಣದ ಬಳಿ ಭೀಕರ ಅಪಘಾತ ಸಂಭವಿಸಿದೆ. ಬಸ್ನಡಿ ಸಿಲುಕಿ ಚಂದ್ರಬಾಯಿ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಭದ್ರಾವತಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ