ಟೈಕಾನ್ ಸಮಾವೇಶ: ಯುವಜನತೆಗೆ ಸಿಎಂ ಬೊಮ್ಮಾಯಿ ಕಿವಿಮಾತು; ಹಳೆಯ ಘಟನೆ ನೆನಪಿಸಿಕೊಂಡ ಕಪಿಲ್ ದೇವ್

ನೀವು ಕೂಡ ಜನರನ್ನು ಭೇಟಿಯಾಗಿ, ಅವರಿಂದ ವಿಷಯ ತಿಳಿದುಕೊಳ್ಳಿ. ನಿಮ್ಮ ಮೆದುಳೇ ದೊಡ್ಡ ಕ್ಯಾಮೆರಾ. ಎಲ್ಲವೂ ಅಲ್ಲೇ ಸ್ಟೋರ್ ಆಗಿರುತ್ತದೆ. ನೀವು ಬೇಕಾದಗ ಅದನ್ನ ನೆನಪಿಸಿಕೊಳ್ಳಬಹುದು ಎಂದು ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ.

ಟೈಕಾನ್ ಸಮಾವೇಶ: ಯುವಜನತೆಗೆ ಸಿಎಂ ಬೊಮ್ಮಾಯಿ ಕಿವಿಮಾತು; ಹಳೆಯ ಘಟನೆ ನೆನಪಿಸಿಕೊಂಡ ಕಪಿಲ್ ದೇವ್
ಸಿಎಂ ಬೊಮ್ಮಾಯಿ, ಕಪಿಲ್ ದೇವ್
Updated By: ganapathi bhat

Updated on: Mar 26, 2022 | 8:57 PM

ಹುಬ್ಬಳ್ಳಿ: ರಾಜಕಾರಣಿಗಳ ಜೀವನ ಅನುಭವ ಹೇಳಿಕೊಳ್ಳುವುದು ಕಷ್ಟ. ಯಾಕೆ ಎಂದು ನಿಮಗೆ ಗೊತ್ತಾಗಿರಬಹುದು. ರಾಜಕೀಯ ಅನ್ನೋದು ಬಹಳ ಗಂಭೀರವಾದ ವಿಷಯ. ರಾಜಕೀಯದಲ್ಲಿ ನಿವೃತ್ತಿ ಇರುವುದಿಲ್ಲ. ಸಾಧನೆಗೆ ಹಾರ್ಡ್​​ವರ್ಕ್​ ಮುಖ್ಯ. ಹಾರ್ಡ್​​ವರ್ಕ್ ಇದ್ದರೆ ನಿಮಗೆ ಲಕ್​ ಸಿಗುತ್ತೆ. ನಾನು ಮುಖ್ಯಮಂತ್ರಿ ಆಗಿದ್ದರೂ ನಿಮ್ಮಲ್ಲಿಂದ ಬಂದವನು ಎಂದು ಹುಬ್ಬಳ್ಳಿಯ ಟೈಕಾನ್ ಸಮಾವೇಶದಲ್ಲಿ ಭಾಗವಹಿಸಿ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಮಾರ್ಚ್ 26) ಹೇಳಿಕೆ ನೀಡಿದ್ದಾರೆ.

ರಾಜಕೀಯಕ್ಕೆ ಬರೋದಕ್ಕೆ ವಿಧ್ಯಾಭ್ಯಾಸದ ಚೌಕಟ್ಟು, ನಿವೃತ್ತಿ ಕೂಡಾ ಇರೋದಿಲ್ಲ. ಆದ್ರೆ ರಾಜಕೀಯ ಎನ್ನೋದು ಬಹಳ ಸಿರಿಯಸ್ ವಿಷಯ. ಸ್ಟಾಟ್೯ಪ್ಸ್ ಎನ್ನೋದು ಯಾರೋ ಒಬ್ಬರು ಮಾಡ್ತಾರೆ. ಆದ್ರೆ ನಂತರ ಎಷ್ಟೊ ಜನ ಅದರೊಂದಿಗೆ ಸೇರಿಕೊಳ್ತಾರೆ. ನಮ್ಮ ದೇಶದಲ್ಲಿ 17 ಸಾವಿರ ಸ್ಟಾಟ್೯ಪ್ಸ್ ಕಂಪನಿಗಳಿವೆ. ಬಜೆಟ್ ನಲ್ಲಿ ಎಪ್ಎಂಸಿಜಿ ನೀಡಿದ್ದೇನೆ. ಇದ್ರಿಂದ ಸುಮಾರು ಒಂದು ಲಕ್ಷ ಜನರಿಗೆ ಸಹಾಯ ಅಗುತ್ತೆ. ಯಶಸ್ಸು ಸಿಗಬೇಕೆಂದ್ರ ಅಹಂ ಎನ್ನೋದು ಬಿಡಬೇಕು. ನಿವೆಲ್ಲಾ ರಾತ್ರಿ 8 ಗಂಟೆಯಾದ್ರೆ ಸಾಕು ಅಂಗಡಿ ಮುಚ್ಚೋಕೆ ರೆಡಿ ಇರ್ತಿರಿ. ಆದ್ರೆ ಇಡೀ ವಿಶ್ವ ಅವಾಗ ತೆರೆದುಕೊಳ್ಳುತ್ತೆ. ಇದೆಲ್ಲಾ ಬದಲಾಗಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಅವರಿಗೆ ಸಮಯ ಇದ್ರೆ ನಮ್ಮೊಂದಿಗೆ ಸಮಯ ಕಳೆಯಬಹುದು. ಇಲ್ಲ ಅಂದರೆ ಅವರು ಸಮಯದ ಅಭಾವದ ಹಿನ್ನೆಲೆ ಇಲ್ಲಿಂದ ತೆರಳಿದ್ರು ನಮಗೆ ತೊಂದ್ರೆ ಇಲ್ಲ ಎಂದು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಖ್ಯಾತ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಹೇಳಿದ್ದಾರೆ. ನಿಮ್ಮಂತ ಲೆಜೆಂಡ್ ಸಿಗೋದೆ ಅಪರೂಪ. ನೀವು ಎಷ್ಟೊತ್ತು ಮಾತನಾಡ್ತಿರಿ ಅಷ್ಟೊತ್ತು ಇಲ್ಲೇ ಇರ್ತಿನಿ ಎಂದು ಇದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಯುವಜನತೆಗೆ ಕಿವಿಮಾತು ಹೇಳಿದ ಕಪಿಲ್ ದೇವ್

ಬೆಳಿಗ್ಗೆಯಿಂದಲು ನನ್ನ ಜೊತೆ ಜನ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿಳುತ್ತಿದ್ದಾರೆ. ಪೋಟೋ ತೆಗೆದುಕೊಂಡು ಏನು ಮಾಡ್ತೀರಿ. ಬೇರೆಯವರಿಗೆ ತೋರಿಸಿಕೊಳ್ಳೋದಕ್ಕೆ ಪೋಟೊ ತೆಗೆದುಕೊಳ್ಳಬೇಡಿ. ಮೊದಲು ನಿಮ್ಮನ್ನು ನೀವು ಇಂಪ್ರೆಸ್ ಮಾಡಿ. ನಾನು ನೆಲ್ಸನ್ ಮಂಡೇಲಾರನ್ನ ಭೇಟಿಯಾಗಿದ್ದೆ. ಆಗ ನಾನು ಅವರ ಜೊತೆ ಪೋಟೋ ತೆಗೆಸಿಕೊಳ್ಳೋದು ಬಿಟ್ಟು ಐದು ನಿಮಿಷ ಮಾತನಾಡಿ ಎಂದಿದ್ದೆ. ಅದೇ ನಂಗೆ ದೊಡ್ಡ ಮೆಮೋರಿಯಾಗಿತ್ತು ಎಂದು ಟೈಕಾನ್ ಸಮಾವೇಶದಲ್ಲಿ ಖ್ಯಾತ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ. ನೀವು ಕೂಡ ಜನರನ್ನು ಭೇಟಿಯಾಗಿ, ಅವರಿಂದ ವಿಷಯ ತಿಳಿದುಕೊಳ್ಳಿ. ನಿಮ್ಮ ಮೆದುಳೇ ದೊಡ್ಡ ಕ್ಯಾಮೆರಾ. ಎಲ್ಲವೂ ಅಲ್ಲೇ ಸ್ಟೋರ್ ಆಗಿರುತ್ತದೆ. ನೀವು ಬೇಕಾದಗ ಅದನ್ನ ನೆನಪಿಸಿಕೊಳ್ಳಬಹುದು ಎಂದು ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ತೀರ್ಥ ಗ್ರಾಮದ ವಿದ್ಯಾರ್ಥಿನಿ ತಲೆಯ ಮೇಲೆ ಕೈಯಿಟ್ಟು, ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಕಂದಾಯ ಕ್ರಾಂತಿ: ಸಿಎಂ ಬೊಮ್ಮಾಯಿ ಶ್ಲಾಘನೆ