ತೀರ್ಥ ಗ್ರಾಮದ ವಿದ್ಯಾರ್ಥಿನಿ ತಲೆಯ ಮೇಲೆ ಕೈಯಿಟ್ಟು, ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಪ್ರತಿದಿನ ತೀರ್ಥ ಗ್ರಾಮದಿಂದ ನಾಲ್ಕೈದು ಕಿ.ಮೀ ನಡೆದುಕೊಂಡು ಶಾಲೆಗಳಿಗೆ ಹೋಗಬೇಕಾಗುತ್ತದೆ. ಹೀಗಾಗಿ ತೀರ್ಥ ಗ್ರಾಮದಿಂದ ಹುಬ್ಬಳ್ಳಿಗೆ ಬಸ್ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ ವಿದ್ಯಾರ್ಥಿಗಳಿಗೆ ಸಿಎಂ ಸ್ಪಂದಿಸಿದ್ದು, ವಿದ್ಯಾರ್ಥಿನಿ ತಲೆ ಮೇಲೆ ಕೈ ಇಟ್ಟು ಬಸ್ ಬಿಡುವ ಭರವಸೆ ನೀಡಿದ್ದಾರೆ.
ಹಾವೇರಿ: ಕಂದಾಯ ದಾಖಲೆಗಳು ಮನೆಮನೆಗೆ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದ ಮಧ್ಯೆ ವಿದ್ಯಾರ್ಥಿನಿಯರು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಬಳಿ ಗ್ರಾಮಕ್ಕೆ ಬಸ್(Bus) ಬಿಡುವಂತೆ ಮನವಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಇಂದು (ಮಾರ್ಚ್ 26) ವಿದ್ಯಾರ್ಥಿನಿಯರು(Students) ಸಿಎಂ ಬಳಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿದಿನ ತೀರ್ಥ ಗ್ರಾಮದಿಂದ ನಾಲ್ಕೈದು ಕಿ.ಮೀ ನಡೆದುಕೊಂಡು ಶಾಲೆಗಳಿಗೆ ಹೋಗಬೇಕಾಗುತ್ತದೆ. ಹೀಗಾಗಿ ತೀರ್ಥ ಗ್ರಾಮದಿಂದ ಹುಬ್ಬಳ್ಳಿಗೆ ಬಸ್ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ ವಿದ್ಯಾರ್ಥಿಗಳಿಗೆ ಸಿಎಂ ಸ್ಪಂದಿಸಿದ್ದು, ವಿದ್ಯಾರ್ಥಿನಿ ತಲೆ ಮೇಲೆ ಕೈ ಇಟ್ಟು ಬಸ್ ಬಿಡುವ ಭರವಸೆ ನೀಡಿದ್ದಾರೆ.
ಕೊವಿಡ್ ಸಮಯದಿಂದ ನಮಗೆ ಸೈಕಲ್ಗಳೂ ಬಂದಿಲ್ಲ. ಬಸ್ ಕೂಡ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಇಂದು ಸಮಸ್ಯೆ ಹೇಳಿ ಮನವಿ ಮಾಡಿದ್ದೇವೆ. ಸಿಎಂ ಅವರು ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ ಎಂದು ವಿದ್ಯಾರ್ಥಿನಿಯರು ಟಿವಿ9 ಡಿಜಿಟಲ್ಗೆ ಮಾಹಿತಿ ನೀಡಿದ್ದಾರೆ.
ಹಾಲು ಉತ್ಪಾದನೆ ಮಾಡುವ ರೈತರಿಗೆ ಅವರದೆಯಾದ ಬ್ಯಾಂಕ್ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ: ಸಿಎಂ ಬೊಮ್ಮಾಯಿ
ಕೇಂದ್ರದ ಗೃಹ ಮತ್ತು ಸಹಕಾರಿ ಸಚಿವ ಅಮೀತ್ ಷಾರವರು ಏಪ್ರೀಲ್ ಒಂದರಂದು ಬ್ಯಾಂಕ್ನ ಲೋಗೋ ಉದ್ಘಾಟನೆ ಮಾಡಲಿದ್ದಾರೆ. ಬ್ಯಾಂಕ್ಗಾಗಿ ಒಂದು ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇಂತಹ ಕೆಲಸಗಳಿಗೆ ಬಹಳಷ್ಟು ಜನರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜನರ ಈ ಬೆಂಬಲ, ಪ್ರತಿಕ್ರಿಯೆ ನನಗೆ ಸೇರಿದ್ದಲ್ಲ. ನಮ್ಮ ಕ್ಷೇತ್ರದ ಜನರಿಗೆ ಸೇರಿದ್ದು. ಯಡಿಯೂರಪ್ಪ, ಪ್ರಧಾನಿ, ಅಮೀತ್ ಷಾರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ. ನಿಮ್ಮ ಒಂದು ಮತ ಕೇವಲ ಶಾಸಕ ಅಲ್ಲ ಮಂತ್ರಿ ಎಂದು ಹೇಳುತ್ತಿದ್ದೆ. ಈ ಬಾರಿ ತ್ರಿಬಲ್ ಧಮಾಕಾ ರೀತಿ ಶಾಸಕ, ಮಂತ್ರಿ, ಸಿಎಂ ಸ್ಥಾನ ಸಿಗುವಂತೆ ಮಾಡಿದೆ. ನಿಮ್ಮ ಮತದಲ್ಲಿ ಆ ಶಕ್ತಿ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗ್ರಾಮ ಒನ್ ಮೂಲಕ ಬಡವರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗಿದೆ: ಸಿಎಂ ಬೊಮ್ಮಾಯಿ
ಮಾತು ಕೊಟ್ಟಂತೆ ಶಿಗ್ಗಾಂವಿ, ಸವಣೂರು ಕೆರೆ ತುಂಬಿಸುವ ಯೋಜನೆ ಮಾಡಿದ್ದೇನೆ. ಶಿಗ್ಗಾಂವಿಗೆ ಬಸ್ ಡಿಪೋ, ಆಸ್ಪತ್ರೆ, ಜಿಟಿಟಿಸಿ ಮಂಜೂರು ಮಾಡಿದ್ದೇನೆ. ಸವಣೂರಿಗೆ ಆಯುರ್ವೇದಿಕ ಕಾಲೇಜು ಮಾಡಿದ್ದೇನೆ. ಸವಣೂರಿನ ಪಾಲಿಟೆಕ್ನಿಕ್ ಕಾಲೇಜನ್ನು ಇಂಜನೀಯರಿಂಗ ಕಾಲೇಜಿಗೆ ಮೇಲ್ದರ್ಜೆಗೆ ಏರಿಸುವ ಯೋಜನೆ ಮಾಡಿದ್ದೇನೆ. ರೈತರಿಗೆ ತೊಂದರೆ ಆಗಬಾರದು ಎಂದು ಸರ್ವೇ ಇಲಾಖೆ ನೇಮಕಾತಿ ಕೂಡ ಮಾಡಲಾಗುತ್ತಿದೆ. ಇದೊಂದು ದೊಡ್ಡ ಬದಲಾವಣೆ, ಕ್ರಾಂತಿ. ಬಡವರಿಗೆ ಆರೋಗ್ಯ ಬಹಳ ಮುಖ್ಯ. ಗ್ರಾಮ ಒನ್ ಮೂಲಕ ಬಡವರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗಿದೆ. ಜನರಿಂದ ಜನರಿಗೋಸ್ಕರ ಇರುವ ಸರಕಾರ ನಮ್ಮದು. ಇನ್ನು ಬರುವ ದಿನಗಳಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತೇವೆ. ಹಾಲು ಉತ್ಪಾದಕರ ಸಂಘಕ್ಕಾಗಿ ಹೋರಾಟ ಮಾಡಿದ್ದೆ. ಅದನ್ನೂ ಕೂಡ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದ್ದು, ಏಪ್ರಿಲ್ 1ರಿಂದ ಅದು ಆರಂಭ ಆಗುತ್ತದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಮೆಗಾ ಡೈರಿ ಮಾಡಿದ್ದೇವೆ. ಬಹುಮುಖ ಆರ್ಥಿಕ ಅಭಿವೃದ್ಧಿ ಮುಂಬರುವ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಆಗುತ್ತದೆ. ತಿಮ್ಮಾಪುರ ಗ್ರಾಮದ ಜನರು ರಾಜಕೀಯವಾಗಿ ಬಹಳ ಬೆಳೆದಿರುವ ಜನ. ಚುನಾವಣೆ ಹತ್ತಿರ ಬಂದಾಗ ಸ್ವಲ್ಪ ಜಿನುಗು ಆಗುತ್ತಾರೆ. ನನ್ನ ಕೈಗೆ ಸಿಕ್ಕಿಲ್ಲ, ಯಾರ ಕೈಗೆ ಸಿಗುತ್ತೀರಿ ನೀವು ಎಂದು ಸಿಎಂ ಬೊಮ್ಮಾಯಿ ಹಾಸ್ಯ ಮಾಡಿದ್ದಾರೆ.
ಇದನ್ನೂ ಓದಿ: ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಪರೀಕ್ಷೆಗೆ ಆಬ್ಸೆಂಟ್! ಯಾಕೆ ಗೊತ್ತಾ?
ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಕಂದಾಯ ಕ್ರಾಂತಿ: ಸಿಎಂ ಬೊಮ್ಮಾಯಿ ಶ್ಲಾಘನೆ
Published On - 2:39 pm, Sat, 26 March 22