ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಪರೀಕ್ಷೆಗೆ ಆಬ್ಸೆಂಟ್! ಯಾಕೆ ಗೊತ್ತಾ?
ಮಂಡ್ಯದ ಪಿಇಎಸ್ ಕಾಲೇಜಿನ 2ನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಮುಸ್ಕಾನ್ಗೆ ಇಂದಿನಿಂದ(ಮಾರ್ಚ್ 24) ಮೂರನೇ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಇಂದು ಬೆಳಿಗ್ಗೆ 9.30ಕ್ಕೆ ಕಾರ್ಪೋರೇಟ್ ಅಕೌಂಟಿಂಗ್ ಪರೀಕ್ಷೆ ಇತ್ತು. ಮುಸ್ಕಾನ್ ಮಾತ್ರ ಪರೀಕ್ಷೆಗೆ ಬಾರದೆ ಗೈರಾಗಿದ್ದಾಳೆ.
ಮಂಡ್ಯ: ಕಾಲೇಜು ಕ್ಯಾಂಪಸ್ನಲ್ಲಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯದ ಮುಸ್ಕಾನ್(Muskan) ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಬಳಿಕ ಕೋರ್ಟ್ ಆದೇಶ ಪಾಲಿಸುವುದಾಗಿ ಹೇಳಿಕೊಂಡಿದ್ದ ಮುಸ್ಕಾನ್ ಪರೀಕ್ಷೆಗೆ ಗೈರಾಗಿದ್ದಾಳೆ. ಹಿಜಾಬ್(Hijab) ಧರಿಸೋದಕ್ಕೆ ಅವಕಾಶ ನೀಡದಿದ್ದಕ್ಕೆ ಪರೀಕ್ಷೆಗೆ (Exam) ಬಾರದೆ, ಕಾಲೇಜನ್ನೇ ಬದಲಿಸಲು ಚಿಂತನೆ ನಡೆಸಿದ್ದಾರೆ. ಹಿಜಾಬ್ ಹಾಗೂ ಕೇಸರಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್, ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಅಂದಿನಿಂದ ಮುಸ್ಕಾನ್ ನಡೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಕೋರ್ಟ್ ತೀರ್ಪು ಬರುವವರೆಗೂ ತಾನು ತರಗತಿಗೆ ಹಾಜರಾಗಲ್ಲ ಎಂದು ಕಾಲೇಜಿನಿಂದಲೇ ದೂರ ಉಳಿದಿದ್ದಳು. ಈಗ ಕೋರ್ಟ್ ತೀರ್ಪು ಬಂದಿದೆ. ಆದರೂ ಕೂಡ ಸೆಮಿಸ್ಟರ್ ಪರೀಕ್ಷೆಗೆ ಗೈರಾಗಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜಿನ 2ನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಮುಸ್ಕಾನ್ಗೆ ಇಂದಿನಿಂದ(ಮಾರ್ಚ್ 24) ಮೂರನೇ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಇಂದು ಬೆಳಿಗ್ಗೆ 9.30ಕ್ಕೆ ಕಾರ್ಪೋರೇಟ್ ಅಕೌಂಟಿಂಗ್ ಪರೀಕ್ಷೆ ಇತ್ತು. ಮುಸ್ಕಾನ್ ಮಾತ್ರ ಪರೀಕ್ಷೆಗೆ ಬಾರದೆ ಗೈರಾಗಿದ್ದಾಳೆ.
ಇನ್ನು ಈ ವಿಚಾರವಾಗಿ ಆಕೆಯ ತಂದೆ ಮಹಮದ್ ಹುಸೇನ್ ಟಿವಿ9ಗೆ ಹೇಳಿಕೆ ನೀಡಿದ್ದು, ಮಗಳಿಂದ ಪರೀಕ್ಷೆ ಬರೆಸಲ್ಲ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಕಾಲೇಜು ಆಡಳಿತ ಮಂಡಳಿಯನ್ನ ಕೇಳಿಕೊಂಡ್ರೂ ಅವಕಾಶ ನೀಡಲಿಲ್ಲ. ಹಾಗಾಗಿ ನಮ್ಮ ಮಗಳು ಪರೀಕ್ಷೆ ಬರೆಯುತ್ತಿಲ್ಲ. ಮುಂದಿನ ವರ್ಷ ಬೇರೆ ಕಾಲೇಜಿಗೆ ಸೇರಿಸುತ್ತೇವೆ ಎಂದು ತಿಳಿಸಿದ್ದಾರೆ.
ಶಿಕ್ಷಣಕ್ಕಿಂತ ಹಿಜಾಬ್ ಹೆಚ್ಚು ಅಂತ ಕುಟುಂಬಸ್ಥರು ಮಗಳನ್ನು ಒಂದು ವರ್ಷ ಶಿಕ್ಷಣದಿಂದಲೇ ದೂರ ಮಾಡಲು ನಿರ್ಧರಿಸಿದ್ದಾರೆ. ಇನ್ನು ಮುಸ್ಕಾನ್ ತಂದೆ, ಮಗಳಿಗೆ ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಸಲು ಅವಕಾಶ ಕೇಳಿದ ವಿಚಾರವಾಗಿ ಕಾಲೇಜು ಪ್ರಾಂಶುಪಾಲ ಮಹದೇವು ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಉತ್ತರ ನೀಡಿದ್ದಾರೆ. ನಾವು ಹೈಕೋರ್ಟ್ ಹಾಗೂ ಸರ್ಕಾರದ ಆದೇಶ ಪಾಲಿಸುತ್ತಿದ್ದೇವೆ. ಮುಸ್ಕಾನ್ ಪರೀಕ್ಷಾ ಪ್ರವೇಶ ಪತ್ರ ಪಡೆಯೋದಕ್ಕೂ ಕಾಲೇಜಿಗೆ ಬಂದಿಲ್ಲ. ಅಲ್ಲದೆ ಅವರ ತಂದೆಯೂ ನಮ್ಮನ್ನ ಸಂಪರ್ಕ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿದ್ರೂ ಯಾಕೋ ಏನೋ ಕೆಲವು ವಿದ್ಯಾರ್ಥಿನಿಯರು ತೀರ್ಪು ಪ್ರಶ್ನೆ ಮಾಡುವ ಜತೆಗೆ ಶಿಕ್ಷಣದಿಂದಲೇ ದೂರವಾಗುತ್ತಿರೋದು ವಿಪರ್ಯಾಸವೇ ಸರಿ.
ವರದಿ: ದಿಲೀಪ್ ಚೌಡಹಳ್ಳಿ
ಇದನ್ನೂ ಓದಿ: