ಹತ್ಯೆಯಾದ ನೇಹಾ ಮನೆಗೆ ಸಿಎಂ ಭೇಟಿ, ನಿರಂಜನ್ ಮನವಿಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು?

| Updated By: ರಮೇಶ್ ಬಿ. ಜವಳಗೇರಾ

Updated on: Apr 25, 2024 | 10:47 PM

ನೇಹಾ ಹಿರೇಮಠ ಹತ್ಯೆ ನಡೆದು ಹಲವು ದಿನಗಳು ಕಳೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಹಾ ಮನೆಗೆ ಭೇಟಿ ನೀಡಿ ಆಕೆಯ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ನೇಹಾ ತಂದೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಹತ್ಯೆಯಾದ ನೇಹಾ ಮನೆಗೆ ಸಿಎಂ ಭೇಟಿ, ನಿರಂಜನ್ ಮನವಿಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು?
Follow us on

ಹುಬ್ಬಳ್ಳಿ, (ಏಪ್ರಿಲ್ 25): ಮುಸ್ಲಿಂ ಯುವಕ ಫಯಾಜ್‌ನಿಂದ ಭೀಕರವಾಗಿ ಹತ್ಯೆಗೀಡಾದ ಕಾಲೇಜು ಯುವತಿ ಹಾಗೂ ಕಾಂಗ್ರೆಸ್‌ ಕಾರ್ಪೋರೇಟರ್‌ ನಿರಂಜನ್‌ ಹೀರೇಮಠ್‌ ಅವರ ಪುತ್ರಿ ನೇಹಾ ಹೀರೇಮಠ್‌ (neha hiremath) ಅವರ ಮನೆಗೆ ಸಿಎಂ ಸಿದ್ಧರಾಮಯ್ಯ (siddaramaiah) ಭೇಟಿ ನೀಡಿದರು.  ಹುಬ್ಬಳ್ಳಿ (Hubballi) ನಗರದ ಬಿಡನಾಳದಲ್ಲಿರುವ ನೇಹಾ ಹಿರೇಮಠ ನಿವಾಸಕ್ಕೆ ಇಂದು (ಏಪ್ರಿಲ್ 25) ಭೇಟಿ ನೀಡಿ ಪೋಷಕರಿಗೆ ಪೋಷಕರಿಗೆ ಸಾಂತ್ವನ ಹೇಳಿದರು. ಇನ್ನು ಇದೇ ವೇಳೆ ಕಾಂಗ್ರೆಸ್​ನ ಮಾಜಿ ಕಾರ್ಪೋರೆಟರ್, ನೇಹಾ ತಂದೆ ನಿರಂಜನ್ ಹಿರೇಮಠ ಅವರು ಸಿದ್ದರಾಮಯ್ಯ ಬಳಿಕ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ವಿಶೇಷ ನ್ಯಾಯಲಯದಲ್ಲಿ 90ರಿಂದ 120 ದಿನದಲ್ಲಿ ನ್ಯಾಯ ಸಿಗಬೇಕು. ಸಾವಿಗೆ ಸಾವೇ ಶಿಕ್ಷೆಯಾಗಬೇಕು. ಫಯಾಜ್​​ನನ್ನು ಗಲ್ಲಿಗೇರಿಸಿದ ಮೇಲೆಯೇ ನಮಗೆ ಸಮಾಧಾನ ಎಂದರು.

ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವಿಶೇಷ ಕೋರ್ಟ್​ಗೆ ತನಿಖಾಧಿಕಾರಿಗಳು ಚಾರ್ಜ್​ಶೀಟ್ ಸಲ್ಲಿಸ್ತಾರೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಶಿಕ್ಷೆ ಆಗುತ್ತೆ. ಧೈರ್ಯವಾಗಿರಿ, 120 ದಿನದೊಳಗೆ ನ್ಯಾಯ ಕೊಡಿಸೋಣ ಎಂದು ನೇಹಾ ತಂದೆ ನಿರಂಜನಗೆ ಸಿದ್ದರಾಮಯ್ಯ ಧೈರ್ಯ ಹೇಳಿದರು.

ಇದನ್ನೂ ಓದಿ: ನೇಹಾ ಹಿರೇಮಠ್​ ತಂದೆ-ತಾಯಿಗೆ ಸಾಂತ್ವನ ಹೇಳಿದ ಮಾಳವಿಕಾ; ಸರ್ಕಾರದ ವಿರುದ್ಧ ಆಕ್ರೋಶ

ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿದ್ಯಾರ್ಥಿನಿ ನೇಹಾ ಹಿರೇಮಠ ಕುಟುಂಬದ ಜೊತೆಗೆ ನಾವಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಪ್ರಕರಣದ​ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿಯವರು ಒಂದು ಪ್ರಕಣವನ್ನಾದರೂ ಸಿಬಿಐಗೆ ಕೊಟ್ಟಿದ್ದಾರಾ? ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೆವು. ನೇಹಾ ಕುಟುಂಬದ ಜತೆಗೆ ನಾವಿರುತ್ತೇವೆ, ರಕ್ಷಣೆ ಬೇಕಾದ್ರೆ ಕೊಡುತ್ತೇವೆ ಎಂದರು.

ನೇಹಾ ತಂದೆ ಹೇಳಿದ್ದಿಷ್ಟು

ಸಿಎಂ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನೇಹಾ ತಂದೆ ನಿರಂಜನ್, ಅನೇಕರು ಎಲ್ಲ ರೀತಿ ಹೋರಾಟ ಮಾಡಿದ್ದಾರೆ. ಹೋರಟಾದಿಂದ ನಮಗೆ ಶಕ್ತಿ ಬಂದಿದೆ. ಸಿಬಿಐಗೆ ಕೊಡಬೇಕು ಎಂದು ಆರಂಭದಲ್ಲಿ ಹೇಳಿಕೆ ಕೊಟ್ಟಿದ್ದೆ. ಆದರೆ ರಾಜ್ಯ ಸರ್ಕಾರ ಈಗ ಸಿಐಡಿಗೆ ವಹಿಸಿದೆ. ಗಲ್ಲು ಶಿಕ್ಷೆ ಆಗಬೇಕು ಅದಕ್ಕೆ ನಾವು ಕಾಯುತ್ತಿದ್ದೇವೆ. ಒಂದು ಕಾನೂನನ್ನ ರಚನೆ ಮಾಡಬೇಕು ಎಂದು ಕೇಳಿಕೊಂಡಿದ್ದೇನೆ. ಗಲ್ಲು ಶಿಕ್ಷೆ ಆಗಲೇಬೆಕು ಎಂದು ಸಿಎಂಗೆ ಮನವಿ ಮಾಡಿದ್ದು, ದುಃಖದಲ್ಲಿ ಹೇಳಿಕೆ ಕೊಟ್ಟಿದ್ದರೆ ಅನ್ಯತ ಭಾವಿಸದೇ ಕ್ಷಮಿಸಿ ಎಂದರು.ಅಲ್ಲದೇ ತನಗೆ ಭದ್ರತೆ ಕೊಡಬೇಕು ಎಂದು ಮನವಿ ಮಾಡಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:17 pm, Thu, 25 April 24