ಗೋಲ್ಡನ್ ಹೋಮ್ ಶೆಲ್ಟರ್ಸ್‌ಗೆ ಖರೀದಿ ಪತ್ರ ಬರೆದು ಕೊಡಲು ಗ್ರಾಹಕರ ಆಯೋಗ ಆದೇಶ
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಅಪಾರ್ಟ್ಮೆಂಟ್ ಕಟ್ಟಿಸದೇ ಫ್ಲ್ಯಾಟಿನ ಸ್ವಾಧೀನತೆ ಕೊಟ್ಟಿರದೇ ಇರೋದು ಮತ್ತು ಖರೀದಿ ಪತ್ರ ನೋಂದಣಿ ಮಾಡಿಕೊಡುವಲ್ಲಿ ಅವರು ವಿಫಲರಾಗಿದ್ದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ರಾಘವೇಂದ್ರ ಹಂದ್ರಾಳ್ ಎಂಬುವವರು ಗೋಲ್ಡನ್ ಹೋಮ್ ಶೆಲ್ಟರ್ಸ್ ಅವರ ಜೊತೆ ಜೂನ್ 30, 2008ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಅಪಾರ್ಟ್ಮೆಂಟ್‌ನ ಡಿ-ಬ್ಲಾಕ್ 3ನೇ ಮಹಡಿಯಲ್ಲಿನ ಫ್ಲಾಟ್ ನಂ. 304ನ್ನು ರೂ. 22,56,000/- ರೂಪಾಯಿಗಳಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡು ಸಂಪೂರ್ಣ ಹಣವನ್ನು ಸಂದಾಯ ಮಾಡಿದ್ದರು. ಈ ಒಪ್ಪಂದದ ಪ್ರಕಾರ ಬಿಲ್ಡರ್ 24 ತಿಂಗಳಲ್ಲಿ ಅಪಾರ್ಟ್ಮೆಂಟ್ ಕಾಮಗಾರಿ ಪೂರ್ತಿಗೊಳಿಸಿ, ರಾಘವೇಂದ್ರ ಅವರಿಗೆ ಕೊಡಬೇಕಾಗಿತ್ತು. ಜೊತೆಗೆ ಖರೀದಿ ಪತ್ರವನ್ನೂ ನೋಂದಣಿ ಮಾಡಿಕೊಡಬೇಕಾಗಿತ್ತು. ಆದರ ಒಪ್ಪಂದದ ಪ್ರಕಾರ ಬಿಲ್ಡರ್ ನಡೆದುಕೊಂಡಿರಲಿಲ್ಲ. ಹೀಗಾಗಿ ತನಗೆ ಮೋಸ ಮಾಡಿ ಬಿಲ್ಡರ್ ಸೇವಾ ನ್ಯೂನತೆ ಎಸಗಿದ್ದಾರೆ ಅಂತ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ (District Consumer Disputes Redressal Commission -DCDRC) ಜುಲೈ14, 2023 ರಂದು ರಾಘವೇಂದ್ರ ದೂರನ್ನು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಅಪಾರ್ಟ್ಮೆಂಟ್ ಕಟ್ಟಿಸದೇ ಫ್ಲ್ಯಾಟಿನ ಸ್ವಾಧೀನತೆ ಕೊಟ್ಟಿರದೇ ಇರೋದು ಮತ್ತು ಖರೀದಿ ಪತ್ರ ನೋಂದಣಿ ಮಾಡಿಕೊಡುವಲ್ಲಿ ಅವರು ವಿಫಲರಾಗಿದ್ದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಘವೇಂದ್ರ ಅವರಿಗೆ ಬಿಲ್ಡರ್ ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಅಪಾರ್ಟ್‌ಮೆಂಟಿನ ಫ್ಲ್ಯಾಟ್ ನಂ: 304 ಖರೀದಿ ಪತ್ರವನ್ನು ನೋಂದಣಿ ಮಾಡಿಕೊಡಲು ನಿರ್ದೇಶಿಸಿದೆ. ತಪ್ಪಿದ್ದಲ್ಲಿ ದೂರುದಾರರು ಆಯೋಗದ ಮುಖಾಂತರ ತಮ್ಮ ಸ್ವಂತ ಖರ್ಚಿನಲ್ಲಿ ಆಯುಕ್ತರನ್ನು ನೇಮಿಸಿಕೊಂಡು ಖರೀದಿ ಪತ್ರವನ್ನು ನೋಂದಣಿ ಮಾಡಿಸಿಕೊಳ್ಳಲು ಅರ್ಹರಿದ್ದಾರೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ. 10,000/- ನೀಡುವಂತೆ ಎದುರುದಾರನಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Thu, 14 September 23