AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನದಾತನ ಕೈ ಹಿಡಿಯಬೇಕಿದ್ದ ಹತ್ತಿ ಬೆಳೆ ಸಂಪೂರ್ಣ ಮಣ್ಣು ಪಾಲು; ರೈತರು ಕಂಗಾಲು

ಮಳೆಗೆ ಬೆಳೆ ನಾಶವಾದರೂ ಅಧಿಕಾರಿಗಳ ಸುಳಿವೇ ಇಲ್ಲ ಅಂತ ರೈತರು ಆಕ್ರೋಶ ಹೊರಹಾಕಿದ್ದಾರೆ. ಸಮೀಕ್ಷೆ ಕೂಡಾ ಮಾಡಿಲ್ಲ ಅಂತ ಅನ್ನದಾತರು ಕಣ್ಣೀರು ಹಾಕಿದ್ದಾರೆ. ಹತ್ತಿ ಫಸಲು ನೀರಲ್ಲಿ ಕರಗಿ ಹೋಗುತ್ತಿದೆ.

ಅನ್ನದಾತನ ಕೈ ಹಿಡಿಯಬೇಕಿದ್ದ ಹತ್ತಿ ಬೆಳೆ ಸಂಪೂರ್ಣ ಮಣ್ಣು ಪಾಲು; ರೈತರು ಕಂಗಾಲು
ಹತ್ತಿ ಬೆಳೆ
TV9 Web
| Edited By: |

Updated on: Nov 21, 2021 | 9:20 AM

Share

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ ಬೆಳೆ ಅನ್ನದಾತನ ಕೈ ಸೇರುವ ಮೊದಲೇ ಮಣ್ಣು ಪಾಲಾಗಿದೆ. ಪ್ರತಿ ಎಕರೆಗೆ 1 ಲಕ್ಷದಿಂದ ಒಂದೂವರೆ ಲಕ್ಷ ಆದಾಯ ಬರುವ ಹತ್ತಿ ಬೆಳೆ ನಿರಂತರ ಮಳೆಗೆ ಹಾಳಾಗಿದೆ. ನಾಲ್ಕು ದಿನದಿಂದ ಸುರಿದ ಅಕಾಲಿಕ ಮಳೆಗೆ ಹತ್ತಿ ಬೆಳೆ ಸರ್ವನಾಶವಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ ಕುಂದಗೋಳ ತಾಲೂಕಿನಾದ್ಯಂತ ರೈತರು ಹತ್ತಿಯನ್ನು ಹೆಚ್ಚಾಗಿ ಬೆಳೆದಿದ್ದರು. ಆದರೆ ಮಳೆಯಿಂದ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಇನ್ನು ಮಳೆಗೆ ಬೆಳೆ ನಾಶವಾದರೂ ಅಧಿಕಾರಿಗಳ ಸುಳಿವೇ ಇಲ್ಲ ಅಂತ ರೈತರು ಆಕ್ರೋಶ ಹೊರಹಾಕಿದ್ದಾರೆ. ಸಮೀಕ್ಷೆ ಕೂಡಾ ಮಾಡಿಲ್ಲ ಅಂತ ಅನ್ನದಾತರು ಕಣ್ಣೀರು ಹಾಕಿದ್ದಾರೆ. ಹತ್ತಿ ಫಸಲು ನೀರಲ್ಲಿ ಕರಗಿ ಹೋಗುತ್ತಿದೆ. ರೈತನಿಗೆ ಆಸರೆಯಾಗಬೇಕಿದ್ದ ಹತ್ತಿ ಬೆಳೆ ಮಳೆಯಿಂದಾಗಿ ಮತ್ತಷ್ಟು ಕುಗ್ಗಿಸಿದೆ.

ಮೂರನೇ ಬಲಿ ದಾವಣಗೆರೆ ಜಿಲ್ಲೆಯಲ್ಲಿ ಮಳೆಗೆ ಮೂರನೇ ಬಲಿಯಾಗಿದೆ. ಜಾನುವಾರುಗಳ ಮೈ ತೊಳೆಯಲು ಹೋದ ರೈತ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 48 ವರ್ಷದ ತಿಪ್ಪೇಸ್ವಾಮಿ ಎಂಬುವವರು ಮೃತ ದುರ್ದೈವಿ. ನಿರಂತರ ಮಳೆಗೆ ಅನಿರೀಕ್ಷಿತವಾಗಿ ಕೆರೆಗೆ ನೀರು ಹರಿದು ಬಂದ ಹಿನ್ನೆಲೆ ರೈತ ದಾವಣಗೆರೆ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ ಕೆರೆ ನೀರಿನ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದಾವಣಗೆರೆ ತಹಶೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸದ್ಯ ಈ ಪ್ರಕರಣ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸದ್ಯ ದಾವಣಗೆರೆ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿದ ಮಳೆಗೆ ಈಗ ಸ್ವಲ್ಪ ಅಲ್ಪವಿರಾಮ ಬಿದ್ದಿದೆ. ಧಾರಾಕಾರ ಮಳೆಗೆ ಅಡಿಕೆ ತೋಟಗಳು ಕೆರೆಯಂತಾಗಿವೆ. ಅಡಿಕೆ ಕೊಳೆತು ಹೋಗುವ ಆತಂಕದಲ್ಲಿ ರೈತರಿದ್ದಾರೆ.

ಇದನ್ನೂ ಓದಿ

ಮಂಚೇನಹಳ್ಳಿ ಕೆರೆ ಕಟ್ಟೆಯಲ್ಲಿ ನೀರು ಸೋರಿಕೆ; ರಾತ್ರೋರಾತ್ರಿ ದುರಸ್ತಿ ಕಾರ್ಯ ಮಾಡಿದ ಸ್ಥಳೀಯರು, ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್

ಹಾಸನ: ಮಿತಿ ಮೀರಿದ ಕಾಡಾನೆ ಹಾವಳಿ; ಬಯಲಿನಲ್ಲಿ ದನಕರುಗಳು ಅಡ್ಡಾಡುವಂತೆ ಪ್ರತ್ಯಕ್ಷವಾದ 35 ಆನೆಗಳು