ಮಂಚೇನಹಳ್ಳಿ ಕೆರೆ ಕಟ್ಟೆಯಲ್ಲಿ ನೀರು ಸೋರಿಕೆ; ರಾತ್ರೋರಾತ್ರಿ ದುರಸ್ತಿ ಕಾರ್ಯ ಮಾಡಿದ ಸ್ಥಳೀಯರು, ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಕೆರೆಕಟ್ಟೆಯಲ್ಲಿ ನೀರು ಸೋರಿಕೆ ಹಿನ್ನೆಲೆಯಲ್ಲಿ ಸ್ಥಳೀಯರು ರಾತ್ರೋರಾತ್ರಿ ಕೆರೆಕಟ್ಟೆ ದುರಸ್ತಿ ಕಾರ್ಯ ಮಾಡಿದ್ದಾರೆ.

ಮಂಚೇನಹಳ್ಳಿ ಕೆರೆ ಕಟ್ಟೆಯಲ್ಲಿ ನೀರು ಸೋರಿಕೆ; ರಾತ್ರೋರಾತ್ರಿ ದುರಸ್ತಿ ಕಾರ್ಯ ಮಾಡಿದ ಸ್ಥಳೀಯರು, ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್
ಮಂಚೇನಹಳ್ಳಿ ಕೆರೆ ಕಟ್ಟೆಯಲ್ಲಿ ನೀರು ಸೋರಿಕೆ; ರಾತ್ರೋರಾತ್ರಿ ದುರಸ್ತಿ ಕಾರ್ಯ ಮಾಡಿದ ಸ್ಥಳೀಯರು

ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ಭಯ ಹುಟ್ಟಿಸುತ್ತಿದೆ. ಸದ್ಯ ಭಾರಿ ಮಳೆಗೆ ಒಳ ಹರಿವು ಹೆಚ್ಚಳವಾಗಿ ಮಂಚೇನಹಳ್ಳಿ ಕೆರೆ ಕಟ್ಟೆಯಲ್ಲಿ ನೀರು ಸೋರಿಕೆಯಾಗಿದ್ದು ಸ್ಥಳೀಯರು ಕೆರೆಯ ಕಟ್ಟೆ ರಿಪೇರಿ ಮಾಡಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಕೆರೆಕಟ್ಟೆಯಲ್ಲಿ ನೀರು ಸೋರಿಕೆ ಹಿನ್ನೆಲೆಯಲ್ಲಿ ಸ್ಥಳೀಯರು ರಾತ್ರೋರಾತ್ರಿ ಕೆರೆಕಟ್ಟೆ ದುರಸ್ತಿ ಕಾರ್ಯ ಮಾಡಿದ್ದಾರೆ. ಮರಳು ಚೀಲ, ಮಣ್ಣು ಹಾಕಿ ಸೋರುತ್ತಿದ್ದ ಕೆರೆ ರಿಪೇರಿ ಮಾಡಿದ್ದಾರೆ. ಕೆರೆ ಹೊಡೆದ್ರೆ ಭಾರಿ ಅನಾವುತ ಸಂಭವಿಸುವ ಅಪಾಯ ಹಿನ್ನಲೆ ಸ್ಥಳೀಯರೇ ಕೆರೆ ರಿಪೇರಿ ಮಾಡಿದ್ದಾರೆ. ಅಧಿಕಾರಿಗಳ ಅವ್ಯವಸ್ಥೆಯನ್ನು ದೂರುವುದರ ಬದಲು ಸ್ವತಃ ಆಗಮಿಸಿ ಕೆರೆ ರಿಪೇರಿ ಮಾಡಿ ಮಾದರಿ ಆಗಿದ್ದಾರೆ.

40 ವರ್ಷಗಳ ನಂತರ ಕೊಡಿ ಹರಿದ ಅಮಾನಿ
ಇನ್ನು ಮತ್ತೊಂದೆಡೆ ಚಿಕ್ಕಬಳ್ಳಾಫುರ ಜಿಲ್ಲಾಡಳಿತ ಭವನದ ಬಳಿ ಇರುವ ಅಮಾನಿ ಗೋಪಾಲಕೃಷ್ಣ ಕೆರೆ 40 ವರ್ಷಗಳ ನಂತರ ಕೊಡಿ ಹರಿದಿದೆ. ಕೆರೆಯ ಕೊಡಿ ನೀರು ನೋಡಿ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ಸುಮಾರು 300 ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ಅಮಾನಿ ಗೋಪಾಲಕೃಷ್ಣ ಕೆರೆ ತುಂಬಿ ಶಿಡ್ಲಘಟ್ಟದ ಕೆರೆಗಳಿಗೆ ನೀರಿನ ಹರಿವು ಹೆಚ್ಚಳವಾಗಿದೆ.

ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್
ಸದ್ಯದ ಪರಿಸ್ಥಿತಿ ನೋಡಿದ್ರೆ ಹೊರಗಿನವರು ಕೆಲ ದಿನಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಯತ್ತ ತಲೆ ಹಾಕದಿರುವುದೇ ಒಳ್ಳೆಯದು. ಚಿಕ್ಕಬಳ್ಳಾಫುರ ಜಿಲ್ಲೆಯಲ್ಲಿ ಮಳೆ ನಿಂತರೂ ನೀರಿನ ಹರಿವು ನಿಂತಿಲ್ಲ. ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್ ಹಾಗೂ ಬದಲಾವಣೆ ಮಾಡಲಾಗಿದೆ. ಕೆಲವೆಡೆ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಇನ್ನೂ ಕೆಲವೆಡೆ ಸೇತುವೆಗಳೇ ಮುರಿದು ಬಿದ್ದಿವೆ. ಶಿಡ್ಲಘಟ್ಟ ತಾಲೂಕಿನ ದೊಡ್ಡಬಂದರುಘಟ್ಟ ಬ್ರಿಡ್ಜ್ ಮುರಿದು ಬಿದ್ದಿದೆ. ಚಿಂತಾಮಣಿಯ ವೇಗಲಹಳ್ಳಿ ಗ್ರಾಮದ ಬಳಿ ಬ್ರಿಡ್ಜ್ ಮುರಿದಿದೆ. ಹಾಗೂ ಚಿಂತಾಮಣಿ ತಾಲೂಕಿನ ಪಾಪತಿಮ್ಮನಹಳ್ಳಿ ಬಳಿ ಬ್ರಿಡ್ಜ್ ಮುರಿದಿದೆ. ಕೆಲವು ಕಡೆ ಸೇತುವೆಗಳು ತುಂಬಿ ಹರಿದಿದ್ದು ರಸ್ತೆಗಳು ಜಲಾವೃತವಾಗಿ ಅಪಾಯದಲ್ಲಿವೆ. ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದೆ.

Heavy Rain in chikkaballapur

ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್

Heavy Rain in chikkaballapur

ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್

ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ನದಿ ಪಾತ್ರಕ್ಕೆ ತೆರಳದಂತೆ ಡಂಗೂರ ಸಾರಿ ಜನರಿಗೆ ಎಚ್ಚರಿಕೆ

Click on your DTH Provider to Add TV9 Kannada