ಗ್ರಾಮೀಣ SSLC ವಿದ್ಯಾರ್ಥಿಗಳಿಗೆ ಪಿ.ಜಿ. ಮಾಲೀಕನ ನೆರವಿನ ಹಸ್ತ
ಧಾರವಾಡ: ಕೊರೊನಾ ಮಹಾಮಾರಿಯ ಸಂಕಷ್ಟದ ನಡುವೆ ಶಿಕ್ಷಣ ಇಲಾಖೆಯು SSLC ಪರೀಕ್ಷೆಯನ್ನ ನಡೆಸುವ ನಿರ್ಧಾರವನ್ನು ಕೈಗೊಂಡಿದೆ. ಪೋಷಕರಲ್ಲಿ ಇದರ ಬಗ್ಗೆ ಕೊಂಚ ಆತಂಕವಿದ್ದರೂ ಮಕ್ಕಳ ಭವಿಷ್ಯದ ವಿಷಯವಾದ್ದರಿಂದ ಧೈರ್ಯ ಮಾಡಿ ತಮ್ಮ ಮಕ್ಕಳಿಗೆ ಪರೀಕ್ಷೆಗೆ ಸಜ್ಜಾಗಲು ಹೇಳಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಮತ್ತೊಂದು ಸಮಸ್ಯೆ ಎದುರಾಗಿದೆ. ಅದುವೇ ವಸತಿಯ ಸಮಸ್ಯೆ. ಧಾರವಾಡದ ಹಾಸ್ಟೆಲ್ಗಳಾಗಿವೆ ಕ್ವಾರಂಟೈನ್ ಕೇಂದ್ರ ಹೌದು, ಜಿಲ್ಲೆಯ ಹಲವಾರು ಗ್ರಾಮೀಣ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳು […]
ಧಾರವಾಡ: ಕೊರೊನಾ ಮಹಾಮಾರಿಯ ಸಂಕಷ್ಟದ ನಡುವೆ ಶಿಕ್ಷಣ ಇಲಾಖೆಯು SSLC ಪರೀಕ್ಷೆಯನ್ನ ನಡೆಸುವ ನಿರ್ಧಾರವನ್ನು ಕೈಗೊಂಡಿದೆ. ಪೋಷಕರಲ್ಲಿ ಇದರ ಬಗ್ಗೆ ಕೊಂಚ ಆತಂಕವಿದ್ದರೂ ಮಕ್ಕಳ ಭವಿಷ್ಯದ ವಿಷಯವಾದ್ದರಿಂದ ಧೈರ್ಯ ಮಾಡಿ ತಮ್ಮ ಮಕ್ಕಳಿಗೆ ಪರೀಕ್ಷೆಗೆ ಸಜ್ಜಾಗಲು ಹೇಳಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಮತ್ತೊಂದು ಸಮಸ್ಯೆ ಎದುರಾಗಿದೆ. ಅದುವೇ ವಸತಿಯ ಸಮಸ್ಯೆ.
ಧಾರವಾಡದ ಹಾಸ್ಟೆಲ್ಗಳಾಗಿವೆ ಕ್ವಾರಂಟೈನ್ ಕೇಂದ್ರ ಹೌದು, ಜಿಲ್ಲೆಯ ಹಲವಾರು ಗ್ರಾಮೀಣ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳು ಸಾಮಾನ್ಯವಾಗಿ ನಗರದ ಶಾಲೆಗಳಲ್ಲಿ ನಿಗದಿಯಾಗುತ್ತದೆ. ಹಾಗಾಗಿ ತಮ್ಮ ಗ್ರಾಮಗಳಿಂದ ಬರುತ್ತಿದ್ದವರು ನಗರದ ಸರ್ಕಾರಿ ಹಾಸ್ಟೆಲ್ಗಳಲ್ಲಿ ಅಥವಾ ವಸತಿ ಶಾಲೆಗಳಲ್ಲಿ ವಾಸ್ತವ ಹೂಡುತ್ತಿದ್ದರು.
ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ನಗರದ ಅನೇಕ ಹಾಸ್ಟೆಲ್ಗಳಲ್ಲಿ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮತ್ತೊಂದು ಕಡೆ ಹಾಸ್ಟೆಲ್ಗಳ ವ್ಯವಸ್ಥೆ ಇದ್ದರೂ ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್ನಲ್ಲಿ ಇರಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಅನ್ನೋದೇ ದೊಡ್ಡ ಸಮಸ್ಯೆಯಾಗಿದೆ.
ಅಭ್ಯರ್ಥಿಗಳಿಗೆ ಪಿ.ಜಿ ಮಾಲೀಕನ ನೆರವಿನ ಹಸ್ತ ಆದರೆ ಇಂಥ ವಿದ್ಯಾರ್ಥಿಗಳ ಸಮಸ್ಯೆಗೆ ಧಾರವಾಡದ ಪೇಯಿಂಗ್ ಗೆಸ್ಟ್ ಮಾಲೀಕರೊಬ್ಬರು ಸ್ಪಂದಿಸಿದ್ದಾರೆ. ತಾವೇ ಮುಂದೆ ಬಂದು ತಮ್ಮ ಪಿ.ಜಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ವ್ಯವಸ್ಥೆ ಮಾಡೋದಾಗಿ ಹೇಳಿದ್ದಾರೆ. ಸದ್ಯಕ್ಕೆ ಮಹಾಮಾರಿಯಿಂದಾಗಿ ತಮ್ಮ ಪೇಯಿಂಗ್ ಗೆಸ್ಟ್ ಬಂದ್ ಆಗಿದೆ.
ಹೀಗಾಗಿ ಅದನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲು ಧಾರವಾಡ ನಗರದ ಸಂಗಮ್ ವೃತ್ತದ ಬಳಿಯ ಅಶ್ವಿನಿ ಪೇಯಿಂಗ್ ಗೆಸ್ಟ್ನ ಮಾಲೀಕ ಮಹಾಂತೇಶ ನಾಡಗೌಡ ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿ ನಾಡಗೌಡರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಕೂಡ ಬರೆದಿದ್ದಾರೆ. ಧಾರವಾಡದ ಡಿಡಿಪಿಐ ಎಂ.ಎಲ್. ಹಂಚಾಟೆ ಅವರಿಗೆ ಪತ್ರ ಬರೆದಿರುವ ಮಹಾಂತೇಶ ಅವರು, ಪರೀಕ್ಷೆ ಮುಗಿಯುವವರೆಗೂ ತಾವೇ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಸಹ ಮಾಡೋದಾಗಿ ಹೇಳಿದ್ದಾರೆ.
ಮಹಾಂತೇಶರು ಈ ಹಿಂದೆಯೂ ಸಾಕಷ್ಟು ಬಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನೆರವಾಗಿದ್ದಾರೆ. ಈ ಹಿಂದೆ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆಯಲ್ಲಿ ಸಾಹಿತ್ಯಾಸಕ್ತರಿಗೆ ತಮ್ಮದೇ ಪಿ.ಜಿಯಲ್ಲಿ ಉಚಿತ ಊಟ ಹಾಗೂ ವಸತಿಯ ವ್ಯವಸ್ಥೆ ಮಾಡಿದ್ದರು. ಇನ್ನು ಜಿಲ್ಲೆಯಲ್ಲಿ ಪ್ರವಾಹ ಬಂದಾಗ ತಮ್ಮ ಪಿ.ಜಿಯನ್ನು ಬಳಸಿಕೊಳ್ಳಲು ಜಿಲ್ಲಾಡಳಿತಕ್ಕೆ ಆಹ್ವಾನ ಸಹ ನೀಡಿದ್ದರು.
ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಯಾದಾಗ ಜಿಲ್ಲಾಡಳಿತದ ಸಹಾಯಕ್ಕೆ ಮುಂದೆ ಬರುವ ನಾಡಗೌಡರು ಇತ್ತೀಚಿಗೆ ಲಾಕ್ಡೌನ್ ಸಂದರ್ಭದಲ್ಲಿ ನಿತ್ಯವೂ ಕರ್ತವ್ಯನಿರತ ಪೊಲೀಸರಿಗೆ ಉಪಾಹಾರ ಹಾಗೂ ಚಹಾದ ವ್ಯವಸ್ಥೆ ಮಾಡಿದ್ದರು. ಇದೀಗ ವಿದ್ಯಾರ್ಥಿಗಳ ನೆರವಿಗೆ ಮುಂದೆ ಬಂದು ಮಹಾಂತೇಶ ನಾಡಗೌಡರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Published On - 2:06 pm, Thu, 11 June 20