Dharwad News: ಯುಗಾದಿ ಹಬ್ಬದ ಸಂದರ್ಭದಲ್ಲೇ ಧಾರವಾಡ ಜನತೆಗೆ ಶಾಕ್; ಎರಡು ದಿನ ನೀರು ಪೂರೈಕೆ ಬಂದ್

|

Updated on: Mar 21, 2023 | 10:55 PM

ಯುಗಾದಿ ಹಬ್ಬದ ಸಂದರ್ಭದಲ್ಲೇ ಧಾರವಾಡ ಜನತೆಗೆ ನೀರಿನ ಅಭಾವ ಸಮಸ್ಯೆ ಎದುರಾಗಿದೆ. ಧಾರವಾಡದ ಮುರುಘಾಮಠದ ಸವದತ್ತಿ ರಸ್ತೆ ಬಳಿ ನೀರಿನ ಪೈಪ್ ಒಡೆದ ಕಾರಣ ನಗರಕ್ಕೆ ಎರಡು ದಿನಗಳ ಕಾಲ ನೀರು ಪೂರೈಕೆ ಬಂದ್ ಮಾಡಲಾಗಿದೆ.

Dharwad News: ಯುಗಾದಿ ಹಬ್ಬದ ಸಂದರ್ಭದಲ್ಲೇ ಧಾರವಾಡ ಜನತೆಗೆ ಶಾಕ್; ಎರಡು ದಿನ ನೀರು ಪೂರೈಕೆ ಬಂದ್
ಸಾಂದರ್ಭಿಕ ಚಿತ್ರ
Follow us on

ಹುಬ್ಬಳ್ಳಿ: ಯುಗಾದಿ ಹಬ್ಬದ ಸಂದರ್ಭದಲ್ಲೇ ಧಾರವಾಡ (Dharawad) ಜನತೆಗೆ ನೀರಿನ ಅಭಾವ ಸಮಸ್ಯೆ ಎದುರಾಗಿದೆ. ಧಾರವಾಡದ ಮುರುಘಾಮಠದ ಸವದತ್ತಿ ರಸ್ತೆ ಬಳಿ ನೀರಿನ ಪೈಪ್ ಒಡೆದ ಕಾರಣ ನಗರಕ್ಕೆ ಎರಡು ದಿನಗಳ ಕಾಲ ನೀರು ಪೂರೈಕೆ ಬಂದ್ (Water Supply) ಮಾಡಲಾಗಿದೆ. ನಗರಕ್ಕೆ ಪೂರೈಕೆಯಾಗುವ ಮುಖ್ಯ ಪೈಪ್​ಲೈನ್​​ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಪೈಪ್​​​​​ಲೈನ್​​​​ ಮೇಲಿರುವ ಹೋಟೆಲ್ ತೆರವಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಆದಾಗ್ಯೂ, 2 ದಿನಗಳ ಮಟ್ಟಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ಪೈಪ್‌ಲೈನ್‌ಗೆ ಧಕ್ಕೆಯಾಗಿರುವುದರಿಂದ ಅಪಾರ ಪ್ರಮಾಣದ ನೀರು ಪೋಲಾಗಿದೆ.

ಸೋಮವಾರ ತಡರಾತ್ರಿಯಿಂದ ಪೈಪ್‌ ಒಡೆದು ಸುಮಾರು ನೀರು ಹರಿದುಹೋಗಿತ್ತು. ಪೈಪ್‌ಲೈನ್ ಮೇಲೆಯೇ ಅಕ್ರಮವಾಗಿ ಹೋಟೆಲ್ ನಿರ್ಮಾಣ ಮಾಡಲಾಗಿತ್ತು. ಇದರಿಂದಾಗಿ ಪೈಪ್‌ಲೈನ್‌ಗೆ ಹಾನಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಹಲವು ಅಗಡಿಗಳಿಗೆ ನುಗ್ಗಿದ್ದ ನೀರು

ಪೈಪ್‌ಲೈನ್ ಒಡೆದ ಕಾರಣ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿತ್ತು. ಸುತ್ತಮುತ್ತಲಿನ ಅನೇಕ ಅಂಗಡಿಗಳಿಗೆ‌ ನೀಡು ನುಗ್ಗಿತ್ತು. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ನೀರು ಪೂರೈಕೆ ಬಂದ್ ಮಾಡಿದ್ದಾರೆ. ಪೈಪ್​​ಲೈನ್ ಮೇಲಿದ್ದ ಹೋಟೆಲ್ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ನೀರು ಪೂರೈಕೆ ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Tue, 21 March 23