ಇಂದು ಬೆಂಗಳೂರಿನ ಇಡೀ ಅರ್ಧ ಭಾಗಕ್ಕೆ ಕಾವೇರಿ ನೀರು ಪೂರೈಕೆ ಬಂದ್, ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ
ಪಂಪಿಂಗ್ ಸ್ಟೇಷನ್ಗಳ ತುರ್ತು ದುರಸ್ಥಿ ಹಾಗೂ ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಸ್ಥಾವರಗಳ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆ ಫೆ.26ರ ಭಾನುವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರಿಗೆ ಕಾವೇರಿ ನೀರು ಪೂರೈಕೆ ಬಂದ್ ಆಗಿರಲಿದೆ.
ಬೆಂಗಳೂರು: ಭಾನುವಾರ ಬೆಂಗಳೂರಿನ ಇಡೀ ಅರ್ಧ ಭಾಗದ ಜನರಿಗೆ ಕಾವೇರಿ ನೀರಿನ(Kaveri Water) ಸಮಸ್ಯೆಯಾಗಲಿದೆ. 1, 2 & 3ನೇ ಹಂತದ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಪಂಪಿಂಗ್ ಸ್ಟೇಷನ್ಗಳ ತುರ್ತು ದುರಸ್ಥಿ ಹಾಗೂ ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಸ್ಥಾವರಗಳ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆ ಫೆ.26ರ ಭಾನುವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರಿಗೆ ಕಾವೇರಿ ನೀರು ಪೂರೈಕೆ ಬಂದ್ ಆಗಿರಲಿದೆ. ಬೆಂಗಳೂರು ಜನತೆ ಸಹಕರಿಸಬೇಕೆಂದು ಜಲಮಂಡಳಿ ಮನವಿ ಮಾಡಿದೆ.
ಎಲ್ಲೆಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ನೇತಾಜಿನಗರ, ಕೆ.ಪಿ.ಅಗ್ರಹಾರ, ಟಿಪ್ಪುನಗರ, ಚಾಮರಾಜಪೇಟೆ, ಆದರ್ಶನಗರ, ಪಾದರಾಯನಪುರ, ಬಿನ್ನಿ ಲೇಔಟ್, ವಿದ್ಯಾಪೀಠ, ವಿವೇಕಾನಂದನಗರ, ಎನ್.ಆರ್.ಕಾಲೋನಿ, ಶ್ರೀನಗರ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಅಶೋಕನಗರ, ಶಾಂತಲಾನಗರ, ಇಸ್ರೋ ಲೇಔಟ್, ನೀಲಸಂದ್ರ, ಬ್ರಿಗೇಡ್ ರೋಡ್, ಕೋರಮಂಗಲ, ಶಾಂತಿನಗರ, ನೇತಾಜಿನಗರ, ರಾಘವೇಂದ್ರ ಕಾಲೋನಿ, ಶ್ರೀನಿವಾಸನಗರ, ಅಂಜನಪ್ಪ ಗಾರ್ಡನ್, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಶಾಸ್ತ್ರಿನಗರ, ಕುಮಾರಸ್ವಾಮಿ ಲೇಔಟ್, ಅಮರಜ್ಯೋತಿ ಲೇಔಟ್, ಆಸ್ಟಿನ್ ಟೌನ್, ಈಜಿಪುರ, ಅಶೋಕನಗರ, ರಿಚ್ಮಂಡ್ ಟೌನ್, ಆನೆಪಾಳ್ಯ, ವಿಕ್ಟೋರಿಯಾ ಲೇಔಟ್, ದೊಮ್ಮಲೂರು, ಕಮಾಂಡ್ ಹಾಸ್ಪಿಟಲ್, ಕೋಡಿಹಳ್ಳಿ, ಆಡುಗೊಡಿ, ಜಯನಗರ, ಗಾಂಧಿಬಜಾರ್, ಜಯಮಹಲ್, ಇಂದಿರಾನಗರ, ಜೋಗುಪಾಳ್ಯ ಸೇರಿ ಹಲವೆಡೆ ನೀರು ಪೂರೈಕೆ ವ್ಯತ್ಯಯವಾಗಲಿದೆ.
BWSSB ಸಿಬ್ಬಂದಿಯಿಂದ ಪಂಪಿಂಗ್ ಸ್ಟೇಷನ್ಗಳ ತುರ್ತು ದುರಸ್ತಿ ಕಾರ್ಯ ನಡೆಯಲಿದೆ. ಕೆಪಿಟಿಸಿಎಲ್ನಿಂದ ವಿದ್ಯುತ್ ಸ್ಥಾವರಗಳ ನಿರ್ವಹಣೆ ಕಾರ್ಯ ಹಿನ್ನೆಲೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ