ಮುಸ್ಲಿಮರ ಜೊತೆಗೆ ವ್ಯಾಪಾರಕ್ಕೆ ನಮ್ಮ ಶಾಸ್ತ್ರ ಒಪ್ಪಲ್ಲ, ಬ್ರಾಹ್ಮಣರಿಗಿದು ಅರ್ಥವಾಗ್ತಿಲ್ಲ: ಪ್ರಮೋದ್ ಮುತಾಲಿಕ್

| Updated By: ಆಯೇಷಾ ಬಾನು

Updated on: Oct 16, 2022 | 3:24 PM

ಪ್ರತಿಯೊಬ್ಬ ವ್ಯಕ್ತಿ ಹಲಾಲ್ ಕುರಿತು ಚರ್ಚೆ ಮಾಡಬೇಕು. ಹಲಾಲ್ ವಿಚಾರದಲ್ಲಿ ಹಲಾಲ್ ಸಮಾಜದವರು ನಮ್ಮ ಹಿಂದೂ ಸಂಸ್ಕೃತಿ ಹಾಳು ಮಾಡ್ತಿದ್ದಾರೆ‌.

ಮುಸ್ಲಿಮರ ಜೊತೆಗೆ ವ್ಯಾಪಾರಕ್ಕೆ ನಮ್ಮ ಶಾಸ್ತ್ರ ಒಪ್ಪಲ್ಲ, ಬ್ರಾಹ್ಮಣರಿಗಿದು ಅರ್ಥವಾಗ್ತಿಲ್ಲ: ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
Follow us on

ಹುಬ್ಬಳ್ಳಿ: ಪ್ರತಿಯೊಬ್ಬ ಮುಸ್ಲಿಂನ ಜೊತೆಗೆ ವ್ಯಾಪಾರ ಮಾಡಬಾರದು. ಇದನ್ನು ಸಂಪೂರ್ಣ ರದ್ದು ಮಾಡಬೇಕೆಂದು ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಹಾಗೂ ಇದೇ ವೇಳೆ ಅವರು ಬ್ರಾಹ್ಮಣ ಸಮಾಜ ಮೂರ್ಖ ಸಮಾಜ ಎಂದು ಬ್ರಾಹ್ಮಣರ ವಿರುದ್ಧ ಕಿಡಿಕಾರಿದ್ದಾರೆ. ರಾಮ್ ರಹೀಮ್ ಮಿಲ್ಕ ಡೈರಿಯಲ್ಲಿ ತುಪ್ಪ ಖರೀದಿ ಮಾಡ್ತಾರೆ. ಮುಸ್ಲಿಮರ ಕಡೆ ಕಬ್ಬು, ಎಲೆ, ಹೂ ಖರೀದಿ‌ ಮಾಡಿದ್ರೆ ಅಶಾಸ್ತ್ರ ಆಗತ್ತೆ. ಶಾಸ್ತ್ರ ಒಪ್ಪಲ್ಲ, ದೇವರು ಶಾಪ ಕೊಡ್ತಾರೆ. ಗೋ ಹಂತಕ, ಗೋ ಭಕ್ಷಕರ ಕಡೆ ಖರೀದಿ ಮಾಡಿದ್ರೆ ದೇವರು‌ ಒಪ್ಪಲ್ಲ. ದೀಪಾವಳಿ ಹಲಾಲ್‌ ಮುಕ್ತ ದೀಪಾವಳಿಗಾಗಿ ಸಂಕಲ್ಪ ಮಾಡಬೇಕು. ಹಲಾಲ್ ಗಂಭೀರತೆ ಭಯಾನಕವಾಗಿದೆ. ಇದರ ಗಂಭೀರತೆ ಪ್ರವೀಣ್ ನೆಟ್ಟಾರು ಕೊಲೆವರೆಗೂ ಬಂದಿದೆ. ಹೀಗೆ ಆದ್ರೆ ನಿಮ್ಮ ಮನೆ ಹೊಕ್ಕು ಹೊಡಿತಾರೆ ಎಂದ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.

ಪ್ರವೀಣ್ ನೆಟ್ಟಾರು ಮಾಂಸದ ವ್ಯಾಪರ ಮಾಡ್ತಿದ್ದ. ಅದೇ ಅಂಗಡಿಯಲ್ಲಿ‌ ಕೊಲೆ‌ ಮಾಡಿದವನ ಅಪ್ಪ ಕೆಲಸ ಮಾಡ್ತಿದ್ದ. ಪ್ರವೀಣ್ ನೆಟ್ಟಾರು‌ ಕೊಲೆ ಮಾಡಿದ್ದು ಇದೇ ಹಲಾಲ್ ಮಾಡುವ ಮುಸ್ಲಿಂ. ಇಂತಹ ಕೊಲೆಗಡುಕರ ಜೊತೆ ವ್ಯಾಪಾರ ಮಾಡಬೇಕಾ? ನಾವು ಇವತ್ತು ಜಾಗೃತಿ ಆಗದೆ ಹೋದ್ರೆ ನಮ್ಮ ಮೊಮ್ಮಕ್ಕಳು ಉಳಿಯೋದಿಲ್ಲ. ಈ ಕ್ಷಣದಿಂದಲೇ ಹಲಾಲ್ ತಡೆಯುವ ಕೆಲಸ ಆಗಬೇಕು. ಪ್ರತಿಯೊಬ್ಬ ವ್ಯಕ್ತಿ ಹಲಾಲ್ ಕುರಿತು ಚರ್ಚೆ ಮಾಡಬೇಕು. ಹಲಾಲ್ ವಿಚಾರದಲ್ಲಿ ಹಲಾಲ್ ಸಮಾಜದವರು ನಮ್ಮ ಹಿಂದೂ ಸಂಸ್ಕೃತಿ ಹಾಳು ಮಾಡ್ತಿದ್ದಾರೆ‌. ಇಸ್ಲಾಂ ಹುಟ್ಟಿ 1400 ವರ್ಷ ಆಯ್ತು, ಹಿಂದೂ ಸಮಾಜ ಹುಟ್ಟಿ ಹತ್ತು ಸಾವಿರ ವರ್ಷ ಆಯ್ತು. ಅವಾಗ ನಿಮ್ಮ ಮೌಲ್ವಿ ಎಲ್ಲಿದ್ದ? ಇಷ್ಟು ಸಾಮಾನ್ಯ ಜ್ಞಾನ ಹಲಾಲ್ ಸಮಾಜದವರಿಗೆ ಇಲ್ಲ. ಇದನ್ನೂ ಓದಿ: ಅನ್ಯಧರ್ಮಕ್ಕೆ ಮತಾಂತರಗೊಳ್ಳುವ SC, STಯವರಿಗೆ ಮೀಸಲಾತಿ ನೀಡಬೇಡಿ: ಸರ್ಕಾರಕ್ಕೆ VHP ರಾಷ್ಟ್ರೀಯ ಕಾರ್ಯಾಧ್ಯಕ್ಷ ಮನವಿ

ಬರೀ ವ್ಯಾಪಾರ ವ್ಯಾಪಾರ ಎಂದು ನಮ್ಮ ಹಿಂದೂ ಸಮಾಜ ಹಾಳು ಮಾಡ್ತೀದಿರಿ. ಇದೇ ಹಲಾಲ್ ದಿಂದ ನಿಮ್ಮ ವ್ಯಾಪಾರವೂ ಹೋಗತ್ತೆ, ಹೆಂಡತಿ ಮಕ್ಕಳೂ ಹೋಗ್ತಾರೆ. ವ್ಯಾಪಾರಕ್ಕೂ ಒಂದು ಧರ್ಮ ಇದೆ, ನೀವು ಧರ್ಮ ಮೀರಿ ಹೋಗ್ತೀದಿರಿ. 80 ರಷ್ಟು ಹಿಂದೂ ಸಮಾಜ ಇದೆ, 20 ರಷ್ಟು ಮುಸ್ಲಿಂ ಸಮಾಜ ಇದೆ. ಹಿಂದೂ ಸಮಾಜ ದೇವರು ಸ್ಥಾಪನೆ ಮಾಡಿದ್ದು, ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಸೆಕ್ಯೂಲರ್ ಶಬ್ದ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಇಲ್ಲ. ಇಂದಿರಾಗಾಂಧಿ ಸೆಕ್ಯೂಲರ್ ಶಬ್ದ ಸೇರಿಸಿದ್ದು. ಇದೆಲ್ಲ ರದ್ದಾಗಬೇಕಿದೆ. ಇದರ ವಿರುದ್ಧ ಹೋರಾಟ ಮಾಡಬೇಕು. ಹಿಂದೂ ಜನಜಾಗೃತಿ ಸಮಿತಿ‌ ಹಮ್ಮಿಕೊಂಡಿದ್ದ ಹಲಾಲ್ ಜಿಹಾದ್ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‌ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.

Published On - 3:24 pm, Sun, 16 October 22