ಕಿಮ್ಸ್ ಆಸ್ಪತ್ರೆ ಬಳಿ ಕುಡಿದ ಮತ್ತಿನಲ್ಲಿ ಮಹಿಳೆ ರಂಪಾಟ, ಆಕೆಯ ಮಗುವನ್ನು ರಕ್ಷಿಸಿದ ಪೊಲೀಸರು

| Updated By: ಆಯೇಷಾ ಬಾನು

Updated on: Feb 10, 2023 | 12:22 PM

Hubli News: ಕಿಮ್ಸ್ ಆಸ್ಪತ್ರೆ ಬಳಿ ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಹೆತ್ತ ಮಗುವನ್ನು ಬಿಟ್ಟು ಮಹಿಳೆ ರಂಪಾಟ ಮಾಡಿದ್ದಾಳೆ.

ಕಿಮ್ಸ್ ಆಸ್ಪತ್ರೆ ಬಳಿ ಕುಡಿದ ಮತ್ತಿನಲ್ಲಿ ಮಹಿಳೆ ರಂಪಾಟ, ಆಕೆಯ ಮಗುವನ್ನು ರಕ್ಷಿಸಿದ ಪೊಲೀಸರು
ಮಹಿಳೆ ರಂಪಾಟ
Follow us on

ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್ ಆಸ್ಪತ್ರೆ ಬಳಿ ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಹೆತ್ತ ಮಗುವನ್ನು ಬಿಟ್ಟು ಮಹಿಳೆ ರಂಪಾಟ ಮಾಡಿದ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಮಹಿಳೆ ತನ್ನ ಮಗುವಿಗೆ ಬಾಯಿಗೆ ಬಂದಂತೆ ಬೈದು ನಡು ರಸ್ತೆಯಲ್ಲಿ ಮಗವನ್ನು ಬಿಟ್ಟು ಹೋಗಿದ್ದಾಳೆ. ಸದ್ಯ ರಸ್ತೆಯಲ್ಲಿದ್ದ ಮಗುವನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದಾರೆ.

ವಿದ್ಯುತ್ ತಂತಿ ಸ್ಪರ್ಶಿಸಿ ಹಸುಗಳು ಸಾವು

ಹಾಸನ: ಸಕಲೇಶಪುರ ತಾಲೂಕಿನ ಯಡೇಹಳ್ಳಿಯಲ್ಲಿ ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮೂರು ಹಸುಗಳು ಬಲಿಯಾಗಿವೆ. ವಿದ್ಯುತ್ ತಂತಿ ತುಳಿದು ಗ್ರಾಮದ ದಿನೇಶ್ ಎಂಬುವರಿಗೆ ಸೇರಿದ 2 ಹಸುಗಳು, ಬಸವರಾಜ್​ಗೆ ಸೇರಿದ 1 ಹಸು ಮೃತಪಟ್ಟಿದೆ. ಕಳೆದ 1 ತಿಂಗಳಿಂದ ಕಂಬಗಳು ವಾಲಿರುವ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸಲಾಗಿತ್ತು. ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Cheetah: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲಿದೆ 16 ಚೀತಾ, ಭವಿಷ್ಯದ ಪೀಳಿಗೆಗೆ ಇದು ಸಾಕ್ಷಿ

ನುಗು ಹಿನ್ನೀರಿನಲ್ಲಿ ಕಾಡಾನೆಗಳು ಪ್ರತ್ಯಕ್ಷ

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ನುಗು ಹಿನ್ನೀರಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಕಾಡಿನಿಂದ ಹೊರಗೆ ಬಂದ ಕಾಡಾನೆ ಗುಂಪು ಕಂಡು ಜನರಲ್ಲಿ ಆತಂಕ ಹೆಚ್ಚಾಗಿದೆ. ಸದ್ಯ ಮುಳ್ಳೂರು ಗ್ರಾಮದ ಹೊರವಲಯದಲ್ಲಿ ಆನೆಗಳು ಬೀಡು ಬಿಟ್ಟಿವೆ. ಕಾಡಾನೆಗಳು ರಾಗಿ ಹಾಗೂ ಕಬ್ಬಿನ ಬೆಳೆ ನಾಶ ಮಾಡಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳನ್ನು ಕಾಡಿಗೆ ಕಳುಹಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ