ಯಾರ ಸಂಸ್ಕೃತಿ ಯಾವುದು ಅನ್ನೋದು ಜನರಿಗೆ ಗೊತ್ತು: ನಮ್ಮದು ಮೋದಿ ಸಂಸ್ಕೃತಿ ಎಂದ ಸಿಎಂ ಬೊಮ್ಮಾಯಿ
ಯಾರ ಯಾರ ಸಂಸ್ಕೃತಿ ಯಾವುದು ಅನ್ನೋದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ಪ್ರಧಾನಿ ನರೇಂದ್ರ ಮೋದಿ ಸಂಸ್ಕೃತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ: ಯಾರ ಯಾರ ಸಂಸ್ಕೃತಿ ಯಾವುದು ಅನ್ನೋದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ಪ್ರಧಾನಿ ನರೇಂದ್ರ ಮೋದಿ ಸಂಸ್ಕೃತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Bommai) ಹೇಳಿದರು. ಹುಬ್ಬಳ್ಳಿಯ ಏರ್ಪೋರ್ಟ್ನಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ಸ್ವತಂತ್ರದ ನಂತರ ಭಾರತವನ್ನು ಶಸಕ್ತ ಮತ್ತು ಶ್ರೀಮಂತವಾಗಿ ಕಟ್ಟುವ ಕಾಲ ಬಂದಿದೆ. ಜಗತ್ತಲ್ಲಿ ಭಾರತವನ್ನು ಸರ್ವ ಶ್ರೇಷ್ಠ ಮಾಡಿದ್ದು, ಆ ಧ್ಯೇಯ ಇಟ್ಕೊಂಡು ಕೆಲಸ ಮಾಡ್ತೀದಿವಿ ಎಂದು ಹೇಳಿದರು. ಇನ್ನು ಲಕ್ಕುಂಡಿ ಉತ್ಸವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎರಡು ವರ್ಷ ಲಕ್ಕುಂಡಿ ಉತ್ಸವ ಮಾಡಿರಲಿಲ್ಲ. ಲಕ್ಕುಂಡಿ ಜಗತ್ ಪ್ರಸಿದ್ದವಾದ ಕ್ಷೇತ್ರ. ಉತ್ಸವ ಮಾಡುವ ಮೂಲಕ ಮತ್ತೆ ಅಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡಲಾಗವುದು ಎಂದರು.
ಶಿವಮೊಗ್ಗ ಏಪೋರ್ಟ್ಗೆ ಯಡಿಯೂರಪ್ಪ ಹೆಸರು ಬೇಡಾ ಅಂದಿರೋ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿ, ಮೊನ್ನೆ ನಾನು ಶಿವಗೊಮ್ಗಕ್ಕೆ ಹೋದಾಗ ನನಗೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ನಾನು ಯಡಿಯೂರಪ್ಪ ಜೊತೆ ಮಾತಾಡ್ತೀನಿ. ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ ಎಲ್ಲ ಏಪೋರ್ಟ್ಗಳಿಗೆ ಹೆಸರಿಡುವ ವಿಚಾರವಾಗಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಬ್ರಾಹ್ಮಣರು ಕೂಡಾ ಸಿಎಂ ಆಗಬಹುದು; ಶ್ರೀರಾಮುಲು
ಇನ್ನು ಏಪೋರ್ಟ್ನಲ್ಲಿ ಸಚಿವ ಶ್ರೀರಾಮುಲು ಮಾತನಾಡಿ, ಬ್ರಾಹ್ಮಣರು ಕೂಡಾ ಸಿಎಂ ಆಗಬಹುದು, ಆಗಬಾರದು ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಹುದ್ದೇನಾ ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತೆಗೆದುಕೊಂಡಿದ್ದಾರಾ ಎಂದು ವಾಗ್ದಾಳಿ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಇವರೇ ಮುಖ್ಯಮಂತ್ರಿ ಆಗಬೇಕು ಅನ್ನೋದು ಇಲ್ಲ. ಸಂವಿಧಾನದಲ್ಲಿ ಯಾವ ಜಾತಿ ಅವರು ಕೂಡಾ ಸಿಎಂ ಆಗಬಹುದು ಎಂದರು.
ಪ್ರಲ್ಹಾದ್ ಜೋಶಿ ಬಹಳ ಶಕ್ತಿವಂತ ನಾಯಕರು: ಶ್ರೀರಾಮುಲು
ಪರಿಶಿಷ್ಟ ಪಂಗಡದವರು, ಬ್ರಾಹ್ಮಣರು ಕೂಡ ಸಿಎಂ ಆಗಬಹುದು. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಪೇಶ್ವೆ ಸಂಸ್ಕೃತಿ ಎಂದು ಹೇಳ್ತಾರೆ. ಈ ರೀತಿ ಮಾತಾಡ್ತಾರೆ ಎಂದು ನಾವು ಯಾರೂ ತಿಳಿದುಕೊಂಡಿರಲಿಲ್ಲ. ಈ ರೀತಿಯ ಮಾತುಗಳು ಆಡುವುದನ್ನು ಕುಮಾರಸ್ವಾಮಿ ಅವರು ಬಿಡಬೇಕಾಗತ್ತೆ. ವಯಕ್ತಿಕವಾದ ಟೀಕೆ ಮಾಡಬಾರದು. ಜೋಶಿ ಇವತ್ತು ಬಹಳ ಶಕ್ತಿವಂತ ನಾಯಕರು. ಅವರ ಬಗ್ಗೆ ಏಕ ವಚನದಲ್ಲಿ ಮಾತಾಡೋದು ಸರಿ ಅಲ್ಲ. ಜೋಶಿ ಅವರನ್ನು ಕೇವಲ ಬ್ರಾಹ್ಮಣರೆಂದು ನಾವು ನೋಡ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಜೋಶಿ ನಮ್ಮ ಜೊತೆ ನಿಂತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡದಂತೆ ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಯಡಿಯೂರಪ್ಪ ಮನವಿ
ನಾನು ಬಳ್ಳಾರಿ ಇಂದ ಸ್ಪರ್ದೆ ಮಾಡ್ತೀನಿ: ಶ್ರೀರಾಮುಲು
ಯಡಿಯೂರಪ್ಪ ಪರ ಕುಮಾರಸ್ವಾಮಿ ಒಲೈಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಪರಸ್ಥಿತಿ ದುರಪಯೋಗ ಮಾಡಿಕೊಳ್ಳೊದು ಸರಿ ಅಲ್ಲ. ನಾನು ಬಳ್ಳಾರಿ ಇಂದ ಸ್ಪರ್ದೆ ಮಾಡ್ತೀನಿ. ಇನ್ನು ರೆಡ್ಡಿ ಮನವೊಲಿಸೋ ಬಗ್ಗೆ ರಾಮುಲು ಪ್ರತಿಕ್ರಿಯೆ ನೀಡಿದ್ದು, ರೆಡ್ಡಿ ಅವರು ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. ಇನ್ನೇನಿದ್ರು ಚುನಾವಣೆ. ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳ್ತೀವಿ. ಮುಂದೆ ಏನ್ ಆಗತ್ತೆ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.