Power Cut: ತುರ್ತುಪಾಲನಾ ಕಾಮಗಾರಿ, ಧಾರವಾಡ ಮತ್ತು ಅಳ್ನಾವರದಲ್ಲಿ ಪವರ್ ಕಟ್
ಫೆ.11 ರಂದು ಹೆಸ್ಕಾಂನ 110 ಕೆವಿ ಕೆ.ಯು.ಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು 4ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಧಾರವಾಡ ಮತ್ತು ಅಳ್ನಾವರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಧಾರವಾಡ: ನಾಳೆ (ಫೆ.11) ರಂದು ಹೆಸ್ಕಾಂನ (HESCOM) 110 ಕೆವಿ ಕೆ.ಯು.ಡಿ (KUD) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ನಿಯಮಿತವು 4ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಫೆ.11 ರಂದು ಕೈಗೊಳ್ಳಲಿದೆ. ಈ ಹಿನ್ನೆಲೆ ಧಾರವಾಡದಲ್ಲಿ (Dharwad) ಫೆ.11 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇನ್ನು ಅಳ್ನಾವರದಲ್ಲೂ (Alnavar) ಕೂಡ ಕಾಮಗಾರಿ ನಡೆಯುವ ಹಿನ್ನೆಲೆ ಫೆ.11 ಮತ್ತು 12 ರಂದು ವಿದ್ಯುತ್ ಕಟ್ ಇರಲಿದೆ.
ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲ 11 ಕೆವಿ ಮಾರ್ಗಗಳಾದ ನೆಹರು ನಗರ, ಬಸವ ನಗರ, ಹೊಯ್ಸಳ ನಗರ, ಕಲ್ಯಾಣ ನಗರ, ವಿಜಯಾನಂದ ನಗರ, ಶ್ರೀನಗರ, ಮಹಾಂತ ನಗರ, ಮಂಜುನಾಥ ಕಾಲೋನಿ, ಕೆಲಗೇರಿ ರೋಡ್, ಸಿಲ್ವರ್ ಆರ್ಚಿಡ್, ಸಾಯಿ ನಗರ, ರೆವಿನ್ಯೂ ಕಾಲೋನಿ, ಸಿಬಿ ನಗರ, ಯುಸಿಬಿ ನಗರ, ಮಿಚಿಗನ್ ಕಂಪೌಂಡ್, ಚೈತನ್ಯ ನಗರ, ಚನ್ನಬಸವೇಶ್ವರ ನಗರ, ವಿನಾಯಕನಗರ, ಶಿವಗಿರಿ, ಪಾವಟೆನಗರ, ಕೆಯುಡಿ, ಬಾರಾಕೊಟ್ರಿ, ಡಿ.ಸಿ. ಕಂಪೌಂಡ್, ಮಾಳಮಡ್ಡಿ, ಸರೋವರ ನಗರ, ಲೋಟಸ್ ಪಾರ್ಕ, ಬನಶಂಕರಿ ನಗರ, ಕಸುಮ ನಗರ, ಸಪ್ತಾಪೂರ, ಕೆ.ಸಿ.ಡಿ, ಜಯನಗರ, ಪಾವಟೆನಗರ, ನವೋದಯ ನಗರ, ಸಲಕಿನಕೊಪ್ಪ, ಮುಗದ, ಬಸವೇಶ್ವರ, ರಾಮಾಪುರ, ಕ್ಯಾರಕೊಪ್ಪ, ಹುಲಕಟ್ಟಿ, ಮುಗದ, ಕಲ್ಲಾಪೂರ, ಓಸ್ವಾಲ್, ದಡ್ಡಿ ಕಮಲಾಪುರ, ರಾಮಾಪುರ, ವೀರಾಪುರ, ರವೀಂದ್ರ ನಗರ, ನಿರ್ಮಲ ನಗರ, ಜಾಂಬವಂತ ನಗರ, ಕೇಶವ ನಗರ, ಕೆಲಗೇರಿ, ಆಂಜನೇಯ ನಗರ, ಗಾಯತ್ರಿಪುರಂ, ಸರೋವರ ನಗರ, ಆದಿತ್ಯ ಪಾರ್ಕ, ಅಶೋಕ ನಗರ, ಪವನ ಪಾರ್ಕ, ಸಂಪಿಗೆ ನಗರ, ಶಾಂಭವಿ ನಗರ, ಕೆ.ಐ.ಏ.ಡಿ.ಬಿ ಲೇಔಟ್, ತಪೋವನ ನಗರ, ಆತ್ಮಾನಂದ ಲೇಔಟ್, ಗಣೇಶ ನಗರ, ಹನುಮಂತ ನಗರ, ಕಲ್ಯಾಣ 1 ರಿಂದ 8ನೇ ಕ್ರಾಸ್, ನಿಸರ್ಗ ಲೇಔಟ್, ಅತ್ತಿಕೊಳ್ಳ, ದಾನು ನಗರ, ಯಲಿಗಾರ ಲೇಔಟ್, ಕಲ್ಯಾಣ ನಗರ 10 ರಿಂದ 15ನೇ ಕ್ರಾಸ್, ಮಹಾಮನೆ ಬಡಾವಣೆ, ಮಿಚಿಗನ್ ಲೇಔಟ್, ಉದಯ ಸರ್ಕಲ್, ಯು.ಬಿ.ಹಿಲ್, ಕೆಸಿಡಿ-ಜುಬ್ಲಿ ಸರ್ಕಲ್ ರೋಡ್, ಸಪ್ತಾಪೂರ ಭಾವಿ, ಭಾರತಿ ನಗರ, ಮಿಚಿಗನ್ ಕಂಪೌಂಡ್, ರಾಧಾಕೃಷ್ಣ ನಗರ, ಜಲದರ್ಶಿನಿ ನಗರ, ರಾಣಿ ಚೆನ್ನಮ್ಮ ನಗರ, ಕೃಷಿ ನಗರ, ಶ್ರೀಪಾದ ನಗರ, ಐಶ್ವರ್ಯ ಲೇಔಟ್, ಭಾವಿಕಟ್ಟಿ ಪ್ಲಾಟ್, ಕೆಲಗೇರಿ ರೋಡ್, ಮಂಜುನಾಥ ಕಾಲೋನಿ ಮತ್ತು ಕೋರ್ಟ್ ಸರ್ಕಲ್‍ನಿಂದ ಜುಬ್ಲಿ ಸರ್ಕಲ್‍ವರೆಗೆ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಅಳ್ನಾವರದಲ್ಲಿ ಫೆ.11 ಹಾಗೂ 12 ರಂದು ಕರೇಂಟ್ ಕಟ್
ಫೆ.11 ಹಾಗೂ 12 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅಳ್ನಾವರ ಪಟ್ಟಣ, ಬೆಣಚಿ, ಡೋರಿ, ಸುರೆಬೈಲ್, ಗೋಪನಟ್ಟಿ, ಹುಳ್ಳಿಗೆರಿ, ಕಡಬಗಟ್ಟಿ, ಇಂಡಸಗೇರಿ, ಅವರತ್‍ಬೈಲ್, ಜೋಡಳ್ಳಿ, ದುಂಡಳ್ಳಿ, ಒದಗೆರಾ, ತಾವರಗೆರಿ, ಬಾಳಗುಂದ, ಚುಂಚವಾಡ, ಲಿಂಗನಮಠ, ಹೊಸ ಲಿಂಗನಮಠ ಮತ್ತು ಪಾಲಗೇರಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ವರದಿ-ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ