ಹುಬ್ಬಳ್ಳಿ: ಆಸ್ತಿ ಮತ್ತು ಬಂಗಾರದ ವಿಚಾರವಾಗಿ ಸ್ವಂತ ತಮ್ಮನಿಗೆ ಚಾಕು ಇರಿದು ಅಣ್ಣ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ. ಸಂಜಯ್ ಬಾಕಳೆ ಎಂಬುವವನಿಂದ ಸಾಗರ್ ಬಾಕಳೆ ಎಂಬುವವನಿಗೆ ಚಾಕು ಇರಿಯಲಾಗಿದೆ. ಸಂಜಯ್ ಹಾಗೂ ಸಾಗರ್ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಗಳು. ಹಬ್ಬದ ಹಿನ್ನಲೆ ಪೂಜೆಗೆ ಬಂಗಾರ ಕೇಳಿದ್ದಕ್ಕೆ ಚಾಕು ಇರಿಯಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಅಣ್ಣ ತಮ್ಮರ ನಡುವೆ ಆಸ್ತಿ ವಿಚಾರವಾಗಿ ಹಲವಾರು ವರ್ಷಗಳಿಂದ ಕುಟುಂಬದಲ್ಲಿ ಕಲಹವಿತ್ತು. ಅಣ್ಣ ಸಂಜಯ್ ಹಾಗೂ ಪತ್ನಿ ಸೋನಾಲಿಯಿಂದ ಆಸ್ತಿ ವಿಚಾರವಾಗಿ ನಿರಂತರ ಕಲಹ ನಡೆಯುತಿತ್ತು. ಗಂಭೀರವಾಗಿ ಗಾಯಗೊಂಡ ತಮ್ಮ ಸಾಗರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ಮಗ ಸಂಜಯ್ ವಿರುದ್ಧ ತಂದೆ ಗಣೇಶ ಬಾಕಳೆಯಿಂದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ನಿನ್ನೆ ಹೆಂಡತಿ ಇಂದು ಗಂಡ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಧನಮಿಟ್ಟೇನಹಳ್ಳಿಯಲ್ಲಿ ನಿನ್ನೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಪತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿನ್ನೆ ಮನೆಯಲ್ಲಿ ವಿಷ ಸೇವಿಸಿ ಪತ್ನಿ ಸುನಿತಾ(25) ಆತ್ಮಹತ್ಯೆ ಹಿನ್ನೆಲೆ ಪತಿ ಮೋಹನ್ ಕುಮಾರ್ನನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಕಳಿಸಿದ್ದರು. ಇಂದು ಮನೆಗೆ ಬಂದು ಮೋಹನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕನನ್ನ ಅಪಹರಸಿ, ಕೊಲೆ ಮಾಡಿದ ದುಷ್ಕರ್ಮಿಗಳು
ಕಲಬುರಗಿ: ದುಷ್ಕರ್ಮಿಗಳು ಯುವಕನನ್ನ ಅಪಹರಸಿ, ಕೊಲೆ ಮಾಡಿರುವ ಘಟನೆ ಕಲಬುರಗಿ ಪಟ್ಟಣದ ಶರಣಸಿರಸಗಿ ಮಡ್ಡಿ ಬಳಿ ನಡೆದಿದೆ. ಕಲಬುರಗಿ ನಗರದ ಆಶ್ರಯ ಕಾಲೋನಿ ನಿವಾಸಿ ಪ್ರವೀಣ್(21) ಮೃತ ದುರ್ದೈವಿ. ದುಷ್ಕರ್ಮಿಗಳು ಪ್ರವೀಣನನ್ನು ಕೈನಿಂದ ಗುದ್ದಿ ಕೊಲೆ ಮಾಡಿದ್ದಾನೆ. ಯುವತಿಯೋರ್ವಳನ್ನು ಚುಡಾಯಿಸಿದ್ದಕ್ಕೆ ಅಕ್ಟೋಬರ್ 2 ರಂದು ಮನೆ ಮುಂದೆ ಇದ್ದ ಪ್ರವೀಣ್ನನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಆಶ್ರಯ ಕಾಲೋನಿಯ ಸಾಗರ್ ಮತ್ತು ಆತನ ಸ್ನೇಹಿತರ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‘
ಚೇರ್ ಮೇಲೆ ಕುಳಿತಿದ್ದ ವ್ಯಕ್ತಿ ಕುಳಿತಲ್ಲೇ ಸಾವು
ಬೆಂಗಳೂರು: ಚೇರ್ ಮೇಲೆ ಕುಳಿತಿದ್ದ ವ್ಯಕ್ತಿ ಕುಳಿತಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಹೂಸ್ಕೂರು ರಸ್ತೆಯ ಹೋಟೆಲ್ವೊಂದರಲ್ಲಿ ನಡೆದಿದೆ. ಬಾಬು(50) ಎಂಬುವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡ್ಸ್ ವಾಹನ ಹಳ್ಳಕ್ಕೆ ಬಿದ್ದು ಓರ್ವ ಸಾವು
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಹಳ್ಳಕ್ಕೆ ಬಿದ್ದು ಓರ್ವ ಸಾವನ್ನಪ್ಪಿದ್ದಾನೆ. ಮುರುಕನಹಳ್ಳಿ ಗ್ರಾಮದ ಸಚಿನ್(25) ಮೃತ ದುರ್ದೈವಿ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಪಘಾತದಲ್ಲಿ ಮಹಿಳಾ ಪತ್ರಕರ್ತೆ ಸಾವು
ಬೆಂಗಳೂರು: ಗ್ಯಾಸ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೆಬ್ಬಾಳದ ಮೇಲ್ಸೇತುವೆ ಬಳಿ ನಡೆದಿದೆ. ಲತಾ ಮೃತ ಮಹಿಳೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ್ತಿ ಸಿ.ಆರ್.ಲತಾ (46) ಮಹಿಳೆ ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಲಾರಿ ಚಾಲಕ ಸಿದ್ದಿಕ್ನನ್ನು ಆರ್.ಟಿ.ನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.