ಧಾರವಾಡ: ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಶ್ರೀ ಬಸವ ಅಂತ ಹೆಸರಿಟ್ಟುಕೊಂಡು ಪಂಚಮಸಾಲಿ (Panchamasali) ಸಮುದಾಯದ ಪರ ಹೋರಾಟ ಮಾಡುತ್ತಿರುವುದು ಅವರ ಪೀಠಕ್ಕೆ ಯೋಗ್ಯತೆ ತರಲ್ಲ ಎಂದು ಹುಬ್ಬಳ್ಳಿಯಲ್ಲಿ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ (KC Puttasiddashetty) ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನೀವು ಬಸವ-ಜಯ ಎಂಬ ಎರಡು ಹೆಸರನ್ನು ತಗೆದುಬಿಡಿ. ಮೃತ್ಯುಂಜಯ ಎಂದು ಮಾತ್ರ ಇಟ್ಕೋಳಿ ಎಂದು ಆಗ್ರಹಿಸಿದರು.
ವಿಶ್ವಗುರು ಬಸವಣ್ಣನವರು ಸಮಾನತೆ, ಸಹಬಾಳ್ವೆ ಸಮಾಜಕ್ಕಾಗಿ ಹೋರಾಟ ಮಾಡಿದವರು.ಅನುಭವ ಮಂಟಪಕ್ಕೆ ನೀವು ಅಪಮಾನ ಮಾಡುತ್ತಿದ್ದೀರಿ. ನೀವು ಜಯ ಅಂತಾ ತಗಿಲಿಬೇಕು, ಯಾಕಂದರೆ ಕಳೆದ 4 ವರ್ಷದಿಂದ ಅವರಿಗೆ ಜಯ ಸಿಕ್ಕಿಲ್ಲ. ಸ್ವಾಮೀಜಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಶಿಗ್ಗಾವಿಗೆ ಹೋಗಿ ಏನ್ ಮಾಡಿದ್ರಿ? ಎಂದು ಪ್ರಶ್ನಿಸಿದರು.
ಪಂಚಮಸಾಲಿಗಳು ವೀರಶೈವ ಮಹಾಸಭಾದ ಉಪಪಂಗಡದವರು. ಅದನ್ನು ಪ್ರತ್ಯೇಕ ಮಾಡಿ ಮೀಸಲಾತಿ ಕೊಡೊಕೇ ಬರಲ್ಲ. ಉಪಪಂಗಡದಲ್ಲಿ ಇರೋ ಜಾತಿಯನ್ನು ಪ್ರತ್ಯೇಕ ಮಾಡಲ್ಲ. ವೀರಶೈವ ಲಿಂಗಾಯತ ಸಮಾಜಕ್ಕೆ ಅವರು ಬರುತ್ತಾರೆ. ಸ್ವಾಮೀಜಿಗಳಿಗೆ ಇಷ್ಟು ಗೊತ್ತಾಗಲಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸ್ವಾಮೀಗಳು ಎಲ್ಲು ಸೇರೋದಿಲ್ಲ. ಸಾರ್ವಜನಿಕವಾಗಿ ಜನರೊಂದಿಗೆ ಚರ್ಚೆಮಾಡಿ, ಸಂವಿಧಾನ ತಜ್ಞರೊಂದಿಗೆ ಚರ್ಚೆ ಮಾಡಿ ಮೀಸಲಾತಿ ತಗೆದುಕೊಳ್ಳಲಿ. ಸ್ವಾಮೀಜಿಗಳು ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರನ್ನು ಇಳಿಸುತ್ತೇನೆ ಅಂತಾರೆ. ಅವರ ಬ್ಲಾಕ್ ಮೇಲ್ ತಂತ್ರ ಸರಿ ಅಲ್ಲ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇದಕ್ಕೆಲ್ಲ ಬೆಂಬಲ ನೀಡಬಾರದು ಎಂದು ಹೇಳಿದರು.
ಇವರು ಮೀಸಲಾತಿ ಕೇಳೋದಕ್ಕೆ ಒಂದು ಆಧಾರ ಇರಬೇಕಲ್ಲ. ಹೀಗಾಗಿ ನಾವು ಕಾಯಕ ಸಮಾಜಗಳ ಒಕ್ಕೂಟಕದಿಂದ ಚಿಂತನ ಮಂತನ ಆಯೋಜನೆ ಮಾಡುತ್ತೇವೆ. ಕಾಯಕ ಸಮಾಜಗಳ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ