ಬಿಜೆಪಿ ಜನ ಸಂಕಲ್ಪ ಯಾತ್ರೆಗಾಗಿ ಶಾಲಾ ಕಾಂಪೌಂಡ್ ಧ್ವಂಸ
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಜನ ಸಂಕಲ್ಪ ಯಾತ್ರೆಗಾಗಿ ರಾಯಚೂರಿನಲ್ಲಿ ಶಾಲಾಯೊಂದರ ಕಾಂಪೌಂಡ್ ಅನ್ನು ನೆಲಸಮ ಮಾಡಲಾಗಿದೆ.
ರಾಯಚೂರು: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ನಡೆಯುತ್ತಿರುವ ಜನ ಸಂಕಲ್ಪ ಯಾತ್ರೆಗಾಗಿ ತಾಲ್ಲೂಕಿನ ಗಿಲ್ಲೆಸುಗೂರು ಸರ್ಕಾರಿ ಶಾಲೆಯ ಕಾಂಪೌಂಡ್ ಅನ್ನು ನೆಲಸಮಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಹಿನ್ನೆಲೆ 7 ಅಡಿ ಎತ್ತರ 80 ಅಡಿ ಉದ್ದದ ಸುಸಜ್ಜಿತ ಶಾಲಾ ಗೋಡೆಯನ್ನು ಜೆಸಿಬಿ ಮೂಲಕ ಕೆಡವಿ ಹಾಕಲಾಗಿದ್ದು, ಸುಸಜ್ಜಿತವಾದ ಶಾಲೆಯ ತಡೆಗೋಡೆ ಕೆಡವಿದ್ದಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಲು ಆರಂಭವಾಗಿದೆ.
ಗಿಲ್ಲೆಸುಗೂರು ಸರ್ಕಾರಿ ಶಾಲೆಯ ಬಳಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು, 50 ಸಾವಿರ ಜನ ಸೇರುವ ನಿರೀಕ್ಷೆ ಇಡಲಾಗಿದೆ. ಹೀಗಾಗಿ ಜನರು ನಿಲ್ಲಲು ಸೂಕ್ತ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಶಾಲಾ ಕಾಂಪೌಂಡ್ ಅನ್ನೇ ನೆಲಸಮಗೊಳಿಸಲಾಗಿದೆ. ಸುಮಾರು 7 ಅಡಿ ಎತ್ತರ 80 ಅಡಿ ಉದ್ದದ ಸುಸಜ್ಜಿತ ಶಾಲಾ ಗೋಡೆಯನ್ನು ಒಂದೆರಡು ಗಂಟೆಗಳ ಕಾಲದ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ತಡೆಗೋಡೆಯನ್ನು ನೆಲಸಮಗೊಳಿಸುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಮಳೆ ಅಬ್ಬರಕ್ಕೆ ಉರುಳಿ ಬಿದ್ದ ಶಾಮೀಯಾನ್
ಧಾರವಾಡ: ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್ ಸುರಿದ ಧಾರಾಕಾರ ಮಳೆಗೆ ಉರುಳಿ ಬಿದ್ದ ಘಟನೆ ನಡೆದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಲಿರುವ ಹಿನ್ನೆಲೆ ನಿಲ್ದಾಣದ ಪಕ್ಕದಲ್ಲೇ ಶಾಮೀಯಾನ ಹಾಕಲಾಗಿತ್ತು. ಆದರೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಶಾಮಿಯಾನಾ ಕುಸಿದು ಬಿದ್ದಿದೆ. ಸದ್ಯ ಮಳೆ ಹಿನ್ನೆಲೆ ಕಾರ್ಯಕ್ರಮದ ಸ್ಥಳವನ್ನು ಬದಲಾವಣೆ ಮಾಡಲಾಗಿದೆ. ನಿಲ್ದಾಣದ ಹೊರಭಾಗದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ಇದೀಗ ನಿಲ್ದಾಣದ ಒಳಗಡೆ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ಪ್ಲ್ಯಾಟ್ ಫಾರಂ ಪಕ್ಕದಲ್ಲಿ ಕಾರ್ಯಕ್ರಮದ ವೇದಿಕೆ ತಯಾರಿ ಮಾಡಲಾಗುತ್ತಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:23 am, Tue, 11 October 22