Republic Day: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ

|

Updated on: Jan 26, 2024 | 1:29 PM

ದೇಶದಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು 75ನೇ ಗಣರಾಜ್ಯೋತ್ಸವದಂದು ಸ್ವಕ್ಷೇತ್ರ ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರಿಂದ ಧ್ವಜಾರೋಹಣ ನೆರವೇರಿಸಿ ಮಾದರಿಯಾಗಿದ್ದಾರೆ. ಇಂದು (ಜ.26) ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಮಾರೆವ್ವ ಸುರಪುರ ಅವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಗಿದೆ.

Republic Day: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ
ಪೌರ ಕಾರ್ಮಿಕರಿಂದ ಧ್ವಜಾರೋಹಣ
Follow us on

ಹುಬ್ಬಳ್ಳಿ, ಜನವರಿ 26: ದೇಶದಲ್ಲಿ 75ನೇ ಗಣರಾಜ್ಯೋತ್ಸವ (Republic Day) ಆಚರಿಸಲಾಗುತ್ತಿದೆ. ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ (Pralhad Joshi) ಅವರು 75ನೇ ಗಣರಾಜ್ಯೋತ್ಸವದಂದು ಸ್ವಕ್ಷೇತ್ರ ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರಿಂದ ಧ್ವಜಾರೋಹಣ ನೆರವೇರಿಸಿ ಮಾದರಿಯಾಗಿದ್ದಾರೆ. ಇಂದು (ಜ.26) ಹುಬ್ಬಳ್ಳಿಯ (Hubballi) ತಮ್ಮ ಕಚೇರಿಯಲ್ಲಿ ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಮಾರೆವ್ವ ಸುರಪುರ ಅವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಗಿದೆ.

ಸಮಾರಂಭದಲ್ಲಿ ಶಾಸಕ ಮಹೇಶ ತೆಂಗಿನಕಾಯಿ ಸೇರಿದಂತೆ ಪ್ರಮುಖರಿದ್ದರು. ಓರ್ವ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ ನೆರವೇರಿಸಿ ಆದರ್ಶ ಮೆರೆದಿದ್ದಾರೆ. ಧ್ವಜಾರೋಹಣದ ನಂತರ ಮಾರೆವ್ವ ಸುರಪುರ ಸೇರಿದಂತೆ ಪಾಲಿಕೆಯ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಪೌರ ಕಾರ್ಮಿಕರು ಸದಾ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಶ್ರಮಜೀವಿಗಳಾಗಿದ್ದಾರೆ. ಅಂಥವರನ್ನು ಗುರುತಿಸಿ, ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Trans Tea Stall: ರೈಲು ನಿಲ್ದಾಣದಲ್ಲಿ ದೇಶದ ಮೊದಲ ತೃತೀಯಲಿಂಗಿಗಳ ಟೀ ಸ್ಟಾಲ್, ಪ್ರಹ್ಲಾದ ಜೋಶಿ, ಆನಂದ್ ಮಹೇಂದ್ರಾ ಪ್ರಶಂಸೆ

ಕೋಲಾರದ ಕ್ಲಾಕ್ ಟವರ್ ಮೇಲೆ ಧ್ವಜಾರೋಹಣ

ಕೋಲಾರ: ನಗರದ ನಗರದ ಅತಿಸೂಕ್ಷ್ಮ ಪ್ರದೇಶ ಕ್ಲಾಕ್ ಟವರ್​ನಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಎಸ್ಪಿ ನಾರಾಯಣ್ ಅವರು ಧ್ವಜಾರೋಹಣ ನೆರವೇರಿಸಿದರು. 2022 ರಿಂದ ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣ ನಡೆಸುವಂತೆ ಸರ್ಕಾರದ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಧ್ವಜಾರೋಹಣ ಮಾಡಲಾಗಿದೆ.

ಇನ್ನು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಾಸಕ ಕೊತ್ತೂರು ಮಂಜುನಾಥ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ನಾರಾಯಣ ಭಾಗಿಯಾಗಿದ್ದರು.

ಮೋದಿ ಜೀವನ, ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ಪುಸ್ತಕ ಬಿಡುಗಡೆ; ಜೋಶಿ ಸಂತಸ

ವಿಆರ್​ಎಲ್ (VRL)​ ಲಾಜಿಸ್ಟಿಕ್ಸ್ ಲಿಮಿಟೆಡ್​​​​ ಪ್ರಕಾಶನದಲ್ಲಿ ಪ್ರಕಟವಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ‘A Promised Nation Hon’ble Shri Narendra Modi- the Maker of New India’ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಿಡುಗಡೆ ಮಾಡಿದ್ದಾರೆ.

ವಿಶೇಷವೆಂದರೆ ಪ್ರಧಾನಿ ಮೋದಿ ಅವರ ಬಗ್ಗೆ ಬರೆದಿರುವ ಈ ಕೃತಿಯ ಪ್ರಕಾಶಕರು ಹುಬ್ಬಳ್ಳಿಯವರು ಎಂಬುದೇ ಹೆಮ್ಮೆಯ ಸಂಗತಿ. ಈ ಪುಸ್ತಕವನ್ನು ನಮ್ಮ ಹುಬ್ಬಳ್ಳಿಯ ವಿಆರ್​ಎಲ್​ ಲಾಜಿಸ್ಟಿಕ್ಸ್ ಲಿಮಿಟೆಡ್ ಪ್ರಕಟಿಸಿದೆ ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಬ್ರೈಲ್ ಲಿಪಿಯಲ್ಲಿ ಬರೆಯಲಾಗಿರುವ ಈ ಪುಸ್ತಕವು ದೃಷ್ಟಿಹೀನ ಜನರಿಗೆ ಮೋದಿ ಅವರ ಜೀವನ ಪಯಣದ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಈ ಮಹತ್ತರ ಹೆಜ್ಜೆಯಲ್ಲಿ ನಮ್ಮ ಹುಬ್ಬಳ್ಳಿಯೂ ಒಂದು ಭಾಗವಾಗಿರುವುದು ಹೆಮ್ಮೆಯ ವಿಚಾರ ಎಂದು ಪ್ರಹ್ಲಾದ ಜೋಶಿ ಸಂತಸ ಹಂಚಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ