Hubballi Dargah Demolition: ಹುಬ್ಬಳ್ಳಿ ದರ್ಗಾಗೆ ಭೇಟಿ ನೀಡಿ ಮುಖ್ಯಸ್ಥರಿಗೆ ಧನ್ಯವಾದ ಹೇಳಿದ ಸಿಎಂ ಬೊಮ್ಮಾಯಿ

| Updated By: Digi Tech Desk

Updated on: Dec 23, 2022 | 11:28 PM

ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿದ್ದ ಹಜರತ್ ಮಹಮೂದ್ ಶಾಹ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ನಡೆದಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ವೀಕ್ಷಣೆ ಮಾಡಿದ್ದಾರೆ.

Hubballi Dargah Demolition: ಹುಬ್ಬಳ್ಳಿ ದರ್ಗಾಗೆ ಭೇಟಿ ನೀಡಿ ಮುಖ್ಯಸ್ಥರಿಗೆ ಧನ್ಯವಾದ ಹೇಳಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಹುಬ್ಬಳ್ಳಿ: ಧಾರವಾಡ ಬಸ್ ರ್‍ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಹೆಚ್​.ಡಿಬಿಆರ್​ಟಿಎಸ್) ಕಾರಿಡಾರ್ ಯೋಜನೆಗಾಗಿ ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿದ್ದ ಹಜರತ್ ಮಹಮೂದ್ ಶಾಹ ಖಾದ್ರಿ ದರ್ಗಾ (Hazarath Mehboob Shah Quadri Dargah) ನಿನ್ನೆ(ಡಿ.22)ತೆರವು ಕಾರ್ಯಾಚರಣೆ ಸುಸೂತ್ರವಾಗಿ ಪೂರ್ಣಗೊಂಡಿದೆ. ಇಂದು (ಡಿ. 23) ಸಿಎಂ ಬಸವರಾಜ ಬೊಮ್ಮಾಯಿ( Basavaraj Bommai) ದರ್ಗಾ ವೀಕ್ಷಣೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ದರ್ಗಾ ವೀಕ್ಷಣೆ ಮಾಡಲು ಬಂದಿದ್ದೇನೆ.  ದರ್ಗಾದ ಮುಖ್ಯಸ್ಥರು ದರ್ಗಾ ಶಿಫ್ಟ್ ಮಾಡೋದಕ್ಕೆ ಸಹಕಾರಿಸಿದ್ದು, ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಇಗಾಗಲೇ ಶಿಫ್ಟ್ ಮಾಡಿದ್ದಾರೆ, ಹೊಸ ಮಸೀದ್ ಕಟ್ಟೋಕೆ ತೀರ್ಮಾನ ಮಾಡಲಾಗಿದೆ. ಜಾಗ ನೋಡಿದ್ರೆ ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಮಸೀದಿ, ದೇವಸ್ಥಾನ ಕೆಡವುದು ನೋವಿನ ಸಂಗತಿ

ಇವತ್ತು ನಾಗರೀಕತೆ ಬೆಳದಿದೆ. ಮಸೀದಿ, ದೇವಸ್ಥಾನ ಕೆಡವುದು ನೋವಿನ ಸಂಗತಿ. ಆದರೆ ಅನಿವಾರ್ಯ. ಇದೇ ರಸ್ತೆಯಲ್ಲಿ 13 ದೇವಸ್ಥಾನ ಕೆಡವಿದ್ದೇವೆ. ನಾವು ಕೆಲವು ಸಲ‌ ರಾಜ್ಯದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಸೂಚನೆ ಪಾಲಿಸಬೇಕಾಗತ್ತೆ. ಆದಷ್ಟು ಉಳಿಸೋ ಪ್ರಯತ್ನ ಮೊದಲನೇಯದು. ಇರದೆ ಇದ್ರೆ ಶಾಂತಿಯತವಾಗಿ ಶಿಫ್ಟ್ ಮಾಡೋದು ಎರಡನೇಯದ್ದು. ಆಮೇಲೆ ಡೆಮಾಲಿಷ್​ ಎಂದರು. ಮೈಸೂರಲ್ಲಿ ದೇವಸ್ಥಾನವನ್ನು ರಕ್ಷಣೆ ಮಾಡಲಾಗಿತ್ತು. ಎಲ್ಲ ಸಮಾಜಗಳು ಅಣ್ಣ ತಮ್ಮಂದಿರು ಇರೋಕೆ ಕ್ರಮಕೈಗೊಳ್ಳಲಾಗುತ್ತಿದೆ. ರಸ್ತೆ ಒಳಗೆ ಬಂದ ಎಲ್ಲ ದೇವಸ್ಥಾನ ತೆರವು ಆಗುತ್ತವೆ ಎಂದರು.

ಇದನ್ನೂ ಓದಿ: Hubballi News: ವಿಧಾನಸಭೆಯಲ್ಲಿ ಹುಬ್ಬಳ್ಳಿ ದರ್ಗಾ ತೆರವು ವಿಚಾರ ಪ್ರಸ್ತಾಪ: ನನ್ನದು 19 ಗುಂಟೆ ಜಾಗ ಹೋಗಿದೆ ಎಂದ ಸಿಎಂ ಬೊಮ್ಮಾಯಿ

ನನ್ನ ಜಾಗ ಸಹ ಹೋಗಿದೆ: ಸಿಎಂ ಬೊಮ್ಮಾಯಿ

ದರ್ಗಾ ತೆರೆವು ವಿಚಾರವಾಗಿ ಇತ್ತೇಚೆಗೆ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಸ್ತಾಪ ಮಾಡಿದ್ದರು. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ರಸ್ತೆ ಅಗಲೀಕರಣದಿಂದ ನನ್ನ ಜಾಗ ಸಹ ಹೋಗಿದೆ. ನನ್ನ 19 ಗುಂಟೆ ಜಾಗ ಹೋಗಿದೆ, 5 ಲಕ್ಷ ಮಾತ್ರ ಪರಿಹಾರ ಸಿಕ್ಕಿದೆ. ದರ್ಗಾ ಒಡೆಯುವ ವಿಚಾರದಲ್ಲಿ ಯಾರ ಭಾವನೆಗಳಿಗೆ ಧಕ್ಕೆ ತರಲ್ಲ. ಕೋರ್ಟ್ ಆದೇಶದಂತೆ ನಡೆಯುತ್ತಿದೆ. ಶುಕ್ರವಾರ ಹುಬ್ಬಳ್ಳಿಗೆ ಹೋಗಿ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ, ಬೇಕಾದ ಅನುಕೂಲ ಮಾಡಿಕೊಡುವೆ. ಮುಂದಿನ ಕಾರ್ಯಾಚರಣೆ ಮಾತುಕತೆ ಮೂಲಕ ಒಪ್ಪಿಸಿ ಮಾತನಾಡುವೆ ಎಂದು ಹೇಳಿದ್ದರು.

ಇದನ್ನೂ ಓದಿ: Hubballi Dargah Demolition: ರಸ್ತೆ ಅಗಲೀಕರಣ ಹಿನ್ನೆಲೆ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ದರ್ಗಾ ತೆರವು

ಎಲ್ಲರ ಮನವೊಲಿಸಿ ದರ್ಗಾ ತೆರವು ಮಾಡಲಾಗಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದು, ಹೈಕೋರ್ಟ್ ಆದೇಶದಂತೆ ದರ್ಗಾ ತೆರವು ಮಾಡಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ತೆರವು ಮಾಡಲಾಗಿದೆ. ಎಲ್ಲರ ಮನವೊಲಿಕೆ ಮಾಡಿ, ಧಾರ್ಮಿಕ ವಿಧಿವಿಧಾನ ಪೂರೈಸಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಈವರೆಗೆ 13 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ. BRTS ಯೋಜನೆ ವ್ಯಾಪ್ತಿಯಲ್ಲಿ 13 ಧಾರ್ಮಿಕ ಕೇಂದ್ರ ತೆರವು ಮಾಡಿದ್ದು, ಇನ್ನೂ 2-3 ಧಾರ್ಮಿಕ ಕೇಂದ್ರಗಳ ತೆರವು ಕಾರ್ಯ ಬಾಕಿ ಇದೆ. ನಾವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಹೈಕೋರ್ಟ್ ಸೂಚನೆಯಂತೆ ನಮ್ಮ ಕರ್ತವ್ಯವನ್ನು ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:02 pm, Fri, 23 December 22