ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಡಿಕ್ಕಿ; ಐವರಿಗೆ ಗಾಯ

ಮಗಳ ಸಾವಿನ ವಿಚಾರವಾಗಿ ಗಲಾಟೆ ಮಾಡಿಕೊಂಡು ಅಳಿಯನ ಮೇಲೆ ಕಾರು ಹತ್ತಿಸಲು ಹೋಗಿ ಪಾದಾಚಾರಿಗಳ ಮೇಲೆ ಕಾರು ಹರಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ. ಅಳಿಯನ ಮೇಲಿನ ಸಿಟ್ಟಿನಿಂದ ರಸ್ತೆ ಪಕ್ಕದಲ್ಲಿ ನಿಂತವರಿಗೆ ಏಟು ಬಿದ್ದಿದ್ದು, ಐವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಡಿಕ್ಕಿ; ಐವರಿಗೆ ಗಾಯ
ಹುಬ್ಬಳ್ಳಿಯಲ್ಲಿ ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ,ಪಾದಚಾರಿಗಳಿಗೆ ಕಾರು ಡಿಕ್ಕಿ
Edited By:

Updated on: Feb 17, 2024 | 4:34 PM

ಹುಬ್ಬಳ್ಳಿ, ಫೆ.17: ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಕಾರು ಡಿಕ್ಕಿಯಾದ ಘಟನೆ ಹುಬ್ಬಳ್ಳಿ (Hubballi)ಯ ವಿದ್ಯಾನಗರದಲ್ಲಿ ನಡೆದಿದೆ. ಅಳಿಯನ ಮೇಲಿನ ಸಿಟ್ಟಿನಿಂದ ರಸ್ತೆ ಪಕ್ಕದಲ್ಲಿ ನಿಂತವರಿಗೆ ಏಟು ಬಿದ್ದಿದ್ದು, ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಸಂಬಂಧಿಕರಿಬ್ಬರು ಜಗಳವಾಡಿ ಪರಿಸ್ಥಿತಿ ವಿಕೋಪಕ್ಕೆ‌ ಹೋಗಿದೆ. ಇದರ ಪರಿಣಾಮ ಕಾರ್ ಡಿಕ್ಕಿಪಡಿಸಲು ಬಂದ ಸಂದರ್ಭದಲ್ಲಿ ಐವರಿಗೆ ತಗುಲಿ ಗಾಯವಾಗಿದೆ.

ಗಲಾಟೆ ವಿವರ

ಕೆಲ ತಿಂಗಳುಗಳ ಹಿಂದೆ ತಮ್ಮದೇ ಅಂಗಡಿಯೊಂದರಲ್ಲಿ ಐಶ್ವರ್ಯ ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಘಟನೆಯ ವಿಚಾರವಾಗಿ ಐಶ್ವರ್ಯ ಪತಿ ವಿನೋದ್ ಬೊಂಗಾಳೆ ಹಾಗೂ ಐಶ್ವರ್ಯ ಸಹೋದರ ರಾಹುಲ್ ರೆಣಕೆ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇದಾದ ಬಳಿಕ ರೊಚ್ಚಿಗೆದ್ದ ಮಾವ ವಿನೋದ್ ಎಂಬುವವರು ರಾಹುಲ್ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ತಪ್ಪಿಸಿಕೊಂಡರೇ, ಇತ್ತ ಸಾರ್ವಜನಿಕರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜುನಾಥ ಪೂಜಾರಿ, ಪ್ರಶಾಂತ ಭೂತೆ, ಗರ್ಭಿಣಿ ಮಹಿಳೆಯಾದ ಅಶ್ವಿನಿ ಯಲಿಗಾರ, ಲಕ್ಷ್ಮೀ ಬೆಳವಡಿ, ಇಸ್ಮಾಯಿಲ್ ಯಾದವಾಡ ಎಂಬುವವರಿಗೆ ಗಾಯವಾಗಿದ್ದು, ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಪಘಾತದಲ್ಲಿ ಯುವಕ ದಾರುಣ ಸಾವು -ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ಸೂಸೈಡ್: ಮಡಿಕೇರಿಯಲ್ಲಿ ಕರುಣಾಜನಕ‌ ಕಥೆ

ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಬೆಚ್ಚಿ ಬಿದ್ದ ಗ್ರಾಮಸ್ಥರು

ಆನೇಕಲ್: ರಾಜ್ಯದ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆ ಗ್ರಾಮಕ್ಕೆ ಒಂಟಿ ಸಲಗ ನುಗ್ಗಿದೆ. ಕಾಡಾನೆ ಕಂಡು ಎದ್ನೋ ಬಿದ್ನೋ ಎಂದು ದಂಪತಿ ಓಡಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬಚಾವ್ ಆಗಿದ್ದಾರೆ. ಮುಂಜಾನೆ 5 ಗಂಟೆಯ ಸುಮಾರಿಗೆ ಗ್ರಾಮದ ಸುತ್ತಲೂ ಒಂಟಿ ಸಲಗ ಅಡ್ಡಾಡಿದೆ. ಈ ವೇಳೆ ರಸ್ತೆ ಬದಿಯಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದ ದಂಪತಿ,  ರಾತ್ರಿ ಅಲ್ಲಿಯೇ ಮಲಗಿದ್ದಾರೆ. ನೇರವಾಗಿ ಕಲ್ಲಂಗಡಿ ಹಣ್ಣು ತಿನ್ನಲು ಅಂಗಡಿ ಕಡೆ ಕಾಡಾನೆ ಆಗಮಿಸಿದೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು, ಅಂಗಡಿಯಲ್ಲಿ ಮಲಗಿದ್ದ ದಂಪತಿಗೆ ಓಡಿ ಎಂದು ಕೂಗಾಡಿದ್ದು, ಧ್ವನಿ ಕೇಳು್ತಿದ್ದಂತೆ ಎದ್ದು ಓಡಿದ್ದಾರೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಕಲ್ಲಂಗಡಿ ವ್ಯಾಪಾರಿ ಬದುಕುಳಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Sat, 17 February 24