ಅಪಘಾತದಲ್ಲಿ ಯುವಕ ದಾರುಣ ಸಾವು -ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ಸೂಸೈಡ್: ಮಡಿಕೇರಿಯಲ್ಲಿ ಕರುಣಾಜನಕ‌ ಕಥೆ

ಅಪಘಾತವೊಂದು ಇಬ್ಬರನ್ನುಈ ರೀತಿ ಬಲಿ ಪಡೆದಿರುವುದು ಜಿಲ್ಲೆಯ ಜನರನ್ನು ದಿಗ್ಭ್ರಮೆಗೊಳಿಸಿದೆ. ಸಾವಿನ ಹೆದ್ದಾರಿ ಅಂತಾನೆ ಕುಖ್ಯಾತಿ ಪಡೆದಿರುವ ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನಾದರೂ ವಾಹನ ಚಲಾಯಿಸುವವರು ಮೈಯೆಲ್ಲಾ ಕಣ್ಣಾಗಿ ಗಾಡಿ ಓಡಿಸಬೇಕಿದೆ. ಇಲ್ಲದೇ ಇದ್ದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಪಘಾತದಲ್ಲಿ ಯುವಕ ದಾರುಣ ಸಾವು -ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ಸೂಸೈಡ್: ಮಡಿಕೇರಿಯಲ್ಲಿ ಕರುಣಾಜನಕ‌ ಕಥೆ
youth died in accident - the person who caused the accident also committed suicide
Follow us
Gopal AS
| Updated By: ಸಾಧು ಶ್ರೀನಾಥ್​

Updated on:Feb 12, 2024 | 2:31 PM

ಮಡಿಕೇರಿ, ಫೆ 12: ಮಾಡಿದ ತಪ್ಪಿಗೆ ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ ಇಲ್ಲೊಬ್ಬರು ತಪ್ಪು ಮಾಡಿಬಿಟ್ಟೆ ಅಂತ ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದು ಕೊನೆಗೆ ತಾವೇ ಸಾವಿಗೆ ಶರಣಾದ ಘಟನೆ ನಡೆದಿದೆ. ಅಪಘಾತ ಪ್ರಕರಣದಲ್ಲಿ ಗಾಯಾಳು ಒಂದುಕಡೆ ಸಾವನ್ನಪ್ಪಿದರೆ, ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ನೇಣಿಗೆ ಕೊರಳೊಡ್ಡಿದ ಕುರಣಾಜನಕ ಕತೆ ಇದು.

ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ ನಗರ ಸಮೀಪದ ಚೈನ್​ ಗೇಟ್​ ಬಳಿ ಕಳೆದ ಶುಕ್ರವಾರ ಸಂಜೆ ಅಪಘಾತವೊಂದು ಸಂಭವಿಸಿತ್ತು. ಸೋಮವಾರಪೇಟೆ ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದ ನಿವಾಸಿ ಗಗನ್ ಸುಬ್ಬಯ್ಯ (23), ಮಡಿಕೇರಿಯಿಂದ ತನ್ನ ಗ್ರಾಮದತ್ತ ತನ್ನ ಬೈಕ್​ ನಲ್ಲಿ ತೆರಳುತ್ತಿದ್ದ. ಅದೇ ಸಂದರ್ಭ ಉಪ ರಸ್ತೆಯಿಂದ ಮಡಿಕೇರಿ ತಾಲ್ಲೂಕಿನ ಹೆರವನಾಡು ಗ್ರಾಮದ ತಮ್ಮಯ್ಯ (57) ಎಂಬುವರು ತಮ್ಮ ಸ್ಕೂಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುತ್ತಾರೆ.

ಕ್ಷಣಮಾತ್ರದಲ್ಲಿ ತಮ್ಮಯ್ಯ ಅವರ ಸ್ಕೂಟಿ ಗಗನ್ ಓಡಿಸುತ್ತಿದ್ದ ಬೈಕ್​ಗೆ ಅಪ್ಪಳಿಸಿ ಆ ಬೈಕ್ ಕುಶಾಲನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಗುದ್ದಿ ಕೆಳಕ್ಕೆ ಬೀಳುತ್ತದೆ. ಕ್ಷಣ ಮಾತ್ರದಲ್ಲಿ ಎಲ್ಲವೂ ನಡೆದುಹೋಗುತ್ತದೆ. ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಗಗನ್ ಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ರವಾನಿಸಲಾಗುತ್ತದೆ. ಇತ್ತ ಅಪಘಾತ ಮಾಡಿದ ತಮ್ಮಯ್ಯ ಪೊಲೀಸರಿಗೆ ಸ್ಟೇಟ್​ಮೆಂಟ್​ ನೀಡಿ ಮನೆಗೆ ಮರಳಿದರೂ ತೀವ್ರ ಮನನೊಂದಿದ್ದರಂತೆ. ಅಪಘಾತದ ತೀವ್ರತೆಯನ್ನ ನೋಡಿದ್ದ ಅವರು ಗಗನ್ ತೀರಾ ಗಂಭೀರ ಪರಿಸ್ಥಿತಿಯಲ್ಲಿರುವುದನ್ನ ಮನಗಂಡಿದ್ದರು. ತನ್ನಿಂದಾಗಿ ಇನ್ನೂ ಬಾಳಿ ಬದುಕಬೇಕಾಗಿದ್ದ ಯುವಕ ಈ ರೀತಿ ಆದನಲ್ಲಾ ಎಂದು ಪಶ್ಚಾತಾಪ ಪಡುತ್ತಿದ್ದರಂತೆ.

ಗಗನ್ ಆರೋಗ್ಯ ಪರಿಸ್ಥಿತಿ ಬಗ್ಗೆ ಅಪ್ಡೇಟ್​ ತೆಗೆದುಕೊಳ್ಳುತ್ತಿದ್ದರಂತೆ. ಆದ್ರೆ ಮೈಸೂರಿನಲ್ಲಿ ಗಗನ್​ನ ಬ್ರೈನ್​ ಡೆಡ್​ ಆಗಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಆತನನ್ನ ಮರಳಿ ಮಡಿಕೇರಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವಿಚಾರವೂ ತಮ್ಮಯ್ಯ ಅವರಿಗೆ ತಿಳಿದಿತ್ತು. ಆದ್ರೆ ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಗಗನ್ ಸಾವನ್ನಪ್ಪಿದ್ದಾನೆ. ಬಹುಶಃ ಈ ವಿಚಾರ ತಿಳಿದೋ ಏನೋ ತಮ್ಮ ಹೆರವನಾಡು ಮನೆಯಿಂದ ಅದೇ ಸಮಯಕ್ಕೆ ಹೊರ ಹೋದ ತಮ್ಮಯ್ಯ ಕಾಫಿ ತೋಟದಲ್ಲಿ ನೇಣಿಗೆ ಶರಣಾಗಿದ್ದಾರೆ.

Also Read: Tiger menace – ಹುಲಿಬಾಧಿತ ಪೊನ್ನಂಪೇಟೆಯಲ್ಲಿ ಹೋರಿ, ಹಸುಗಳು ಸ್ವಾಹಾ: ಮುಂದೆ ಹೇಗೋ ಎಂತೋ?

ಬಡತನದಲ್ಲಿದ್ದ ಇವರು ಕಷ್ಟಪಟ್ಟು ತಮ್ಮ ಮಗನನ್ನು ಸಿಆರ್​ಪಿಎಫ್​ ಯೋಧರನ್ನಾಗಿ ಮಾಡಿದ್ದರು. ಮಗ ಇತ್ತೀಚೆಗೆ ಹೊಸ ಮನೆ ಕಟ್ಟಿಸಲು ಶುರು ಮಾಡಿದ್ದರು. ಸ್ವತಃ ತಮ್ಮಯ್ಯ ಅವರೇ ಮನೆ ನಿರ್ಮಾಣ ನೋಡಿಕೊಳ್ಳುತ್ತಿದ್ದರು. ಈ ಮಳೆಗಾಲದ ಒಳಗೆ ಹೊಸ ಮನೆ ಸೇರುವ ಕನಸು ಕಂಡಿದ್ದರು. ಆದ್ರೆ ಆ ಒಂದು ಅಪಘಾತ ಇದೀಗ ಇವರ ಜೀವನವನ್ನೇ ಮುಗಿಸಿಬಿಟ್ಟಿದೆ ಅಂತ ತಮ್ಮಯ್ಯ ಸಹೋದರನ ಪುತ್ರ ರಘು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತ ಗಗನ್ ಮನೆಯಲ್ಲೂ ಶೋಕ ಮಡುಗಟ್ಟಿದೆ. ಮಗ ಡಿಗ್ರಿ ಮುಗಿಸಿ ಇದೀಗ ಎಂಬಿಎ ಓದುತ್ತಿದ್ದ. ಶುಕ್ರವಾರವೂ ಮಡಿಕೇರಿ ಎಫ್​ಎಂಸಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ತನ್ನ ಬೈಕ್​ನಲ್ಲಿ ಬರುತ್ತಿದ್ದ. ಆದ್ರೆ ತನ್ನದಲ್ಲದ ತಪ್ಪಿಗೆ ಇದೀಗ ಚಿಕ್ಕ ವಯಸ್ಸಲ್ಲೇ ಜೀವ ತೆತ್ತಿದ್ದಾನೆ. ರಾಷ್ಟ್ರೀಯ ಹೆದ್ದಾರಿಯ ಚೈನ್ ಗೇಟ್ ಜಂಕ್ಷನ್​ನಲ್ಲಿ ರಸ್ತೆಗೆ ಅಂಟಿಕೊಂಡೇ ಅವೈಜ್ಞಾನಿಕವಾಗಿ ಬಸ್​ ನಿಲ್ದಾಣ ನಿರ್ಮಾಣ ಮಾಡಿರುವುದರಿಂದಲೇ ಈ ಅಪಘಾತ ಸಂಭವಿಸಿದೆ. ಈ ಬಸ್​ ನಿಲ್ದಾಣದಿಂದಾಗಿಯೇ ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಹಾಗಾಗಿ ಈ ಬಸ್​ ನಿಲ್ದಾಣವನ್ನ ಮೊದಲು ತೆರವು ಮಾಡಿ ಅಂತ ಗಗನ್ ಪೋಷಕರು ಮನವಿ ಮಾಡಿದ್ದಾರೆ. ಅಲ್ಲದೆ ತನ್ನ ಮಗನಂತೂ ಹೋದ ಆದ್ರೆ ತಮ್ಮಯ್ಯ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಅಂತ ಗಗನ್ ತಂದೆ ಜಯ ಗಣಪತಿ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Mon, 12 February 24

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್