AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಹಬ್ಬಕ್ಕೆ ರೈಲ್ವೇ ಇಲಾಖೆಯಿಂದ ಬಿಗ್ ಗಿಫ್ಟ್: ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ

ದೀಪಾವಳಿ ಮತ್ತು ಛತ್ ಪೂಜೆ ನಿಮಿತ್ತ ನೈಋತ್ಯ ರೈಲ್ವೆ (SWR) ಹುಬ್ಬಳ್ಳಿ ಮತ್ತು ರಾಜಸ್ಥಾನದ ಖಾತಿಪುರ (ಜೈಪುರ) ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಿದೆ. ಅಕ್ಟೋಬರ್ 31 ರಿಂದ ಡಿಸೆಂಬರ್ 07 ರವರೆಗೆ ವಾರಕ್ಕೊಮ್ಮೆ ಸಂಚರಿಸಲಿರುವ ಈ ರೈಲು, ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಪ್ರಯಾಣಿಕರಿಗೆ ಇದು ಅನುಕೂಲಕರವಾಗಿದೆ.

ದೀಪಾವಳಿ ಹಬ್ಬಕ್ಕೆ ರೈಲ್ವೇ ಇಲಾಖೆಯಿಂದ ಬಿಗ್ ಗಿಫ್ಟ್: ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ
ಹುಬ್ಬಳ್ಳಿ ಜೈಪುರ ವಿಶೇಷ ರೈಲು
ಅಕ್ಷಯ್​ ಪಲ್ಲಮಜಲು​​
|

Updated on: Oct 28, 2026 | 9:47 AM

Share

ಹುಬ್ಬಳ್ಳಿ, ಅ.28: ಮುಂಬರುವ ದೀಪಾವಳಿ ಹಬ್ಬ ಹಾಗೂ ಛತ್ ಪೂಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ (SWR) ಮಹತ್ವದ ನಿರ್ಧಾರ ಕೈಗೊಂಡಿದೆ. ಶ್ರೀ ಸಿದ್ಧಾರೂಢ ಸ್ವಾಮೀಜಿ (SSS) ಹುಬ್ಬಳ್ಳಿ ಜಂಕ್ಷನ್ ಹಾಗೂ ರಾಜಸ್ಥಾನದ ಖಾತಿಪುರ (ಜೈಪುರ) ನಡುವೆ ಪ್ರತಿ ವಾರ ವಿಶೇಷ ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಎರಡೂ ದಿಕ್ಕುಗಳಲ್ಲಿ ತಲಾ 6 ಪ್ರತ್ರಿಗಳು ಈ ರೈಲು ಸಂಚರಿಸಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಪ್ರಮುಖ ನಗರಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ಅನುಕೂಲಕರವಾಗಲಿದೆ.

ರೈಲು ಸಂಚಾರದ ಸಮಯ ಹಾಗೂ ದಿನಾಂಕಗಳ ವಿವರ:

ರೈಲು ಸಂಖ್ಯೆ 07371 (SSS ಹುಬ್ಬಳ್ಳಿ – ಖಾತಿಪುರ ವಿಶೇಷ ಎಕ್ಸ್‌ಪ್ರೆಸ್):

ಈ ರೈಲು ಅಕ್ಟೋಬರ್ 31 ರಿಂದ ಡಿಸೆಂಬರ್ 05 ರವರೆಗೆ ಪ್ರತೀ ಶನಿವಾರ ರಾತ್ರಿ 23:50 ಗಂಟೆಗೆ (11:50 PM) ಹುಬ್ಬಳ್ಳಿಯಿಂದ ಹೊರಟು, ಸೋಮವಾರ ಮಧ್ಯಾಹ್ನ 14:40 ಗಂಟೆಗೆ (2:40 PM) ಖಾತಿಪುರ ತಲುಪಲಿದೆ.

ರೈಲು ಸಂಖ್ಯೆ 07372 (ಖಾತಿಪುರ – SSS ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್):

ಮರುಪ್ರಯಾಣದ ಈ ರೈಲು ನವೆಂಬರ್ 02 ರಿಂದ ಡಿಸೆಂಬರ್ 07 ರವರೆಗೆ ಪ್ರತೀ ಸೋಮವಾರ ರಾತ್ರಿ 20:45 ಗಂಟೆಗೆ (8:45 PM) ಖಾತಿಪುರದಿಂದ ಹೊರಟು, ಬುಧವಾರ ಬೆಳಿಗ್ಗೆ 09:30 ಗಂಟೆಗೆ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಕೌಂಟರ್‌ ಟಿಕೆಟ್‌ಗಳಿಗೂ ರೂ. 10 ಲಕ್ಷ ಅಪಘಾತ ವಿಮೆ ವಿಸ್ತರಣೆ; ಪ್ರೀಮಿಯಂ ಕೇವಲ 45 ಪೈಸೆ

ರೈಲು ನಿಲ್ಲುವ ಪ್ರಮುಖ ನಿಲ್ದಾಣಗಳು :

ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಕರ್ನಾಟಕ: ಗದಗ್, ಹೊಳೆ ಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಇಂಡಿ ರೋಡ್.

ಮಹಾರಾಷ್ಟ್ರ: ಸೋಲಾಪುರ, ದೌಂಡ್, ಪುಣೆ, ಲೋನಾವಳ, ಕಲ್ಯಾಣ್, ವಸೈ ರೋಡ್.

ಗುಜರಾತ್ ಮತ್ತು ಮಧ್ಯಪ್ರದೇಶ: ವಾಪಿ, ವಲ್ಸಾದ್, ಉಧ್ನಾ, ವಡೋದರಾ, ಗೋಧ್ರಾ, ರತ್ಲಾಂ.

ರಾಜಸ್ಥಾನ: ಚಿತ್ತೋರ್‌ಗಢ, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್, ಅಜ್ಮೇರ್, ಕಿಶನ್‌ಗಢ ಹಾಗೂ ಜೈಪುರ.

ಬೋಗಿಗಳ ಸಂಯೋಜನೆ :

ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ:

AC 2-ಟೈರ್ ಬೋಗಿಗಳು: 3

AC 3-ಟೈರ್ ಇಕಾನಮಿ ಬೋಗಿಗಳು: 2

AC 3-ಟೈರ್ ಬೋಗಿಗಳು: 5

ಸ್ಲೀಪರ್ ಕ್ಲಾಸ್ ಬೋಗಿಗಳು: 4

ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು: 4

ಲಗೇಜ್-ಕಮ್-ಬ್ರೇಕ್ ವ್ಯಾನ್ ವಿತ್ ಜೆನರೇಟರ್ ಕಾರ್: 2

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More